ಬಿಸಿ ಬಿಸಿ ಸುದ್ದಿ

ಸಂಸತ್ ನಲ್ಲಿ ಮೀಸಲಾತಿ ಚರ್ಚೆಗೆ ಗೈರಾಗಿ ಮಲ್ಲಿಕಾರ್ಜುನ ಖರ್ಗೆ ಕೋಲಿ ಸಮಾಜಕ್ಕೆ ಮೋಸ: ಸಂಸದ ಡಾ. ಜಾಧವ್

ಶಹಾಬಾದ್: ಸಂಸತ್ತಿನಲ್ಲಿ ಪರಿಶಿಷ್ಟ ವರ್ಗ ಮೀಸಲಾತಿ ಚರ್ಚೆಯ ಸಂದರ್ಭದಲ್ಲಿ ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರ್ಪಡೆ ಮಾಡುವ ಬಗ್ಗೆ ಮಾತನಾಡುವ ಅವಕಾಶವಿದ್ದರೂ ಮಲ್ಲಿಕಾರ್ಜುನ ಖರ್ಗೆಯವರು ಆ ದಿನ ರಾಜ್ಯಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆದದ್ದು ಕೋಲಿ ಸಮಾಜದವರಿಗೆ ಮಾಡಿದ ಮಹಾ ಮೋಸ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಆರೋಪಿಸಿದ್ದಾರೆ.

ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಭಂಕೂರ್ ಮತ್ತು ರಾವೂರ್ ಮಹಾಶಕ್ತಿ ಕೇಂದ್ರಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಸೋಮವಾರ ಮಾತನಾಡುತ್ತಾ ಕೋಲಿ ಸಮುದಾಯದವರನ್ನು ಎಸ್ ಟಿ ಪಂಗಡಕ್ಕೆ ಸೇರಿಸಲು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ನಾನು ದಾಖಲೆ ಪತ್ರಗಳ ಸಹಿತ ಚರ್ಚೆ ಮಾಡಿ ವಿಷಯ ಪ್ರಸ್ತಾಪಿಸಿದ ಬಗ್ಗೆ ಪಾರ್ಲಿಮೆಂಟಿನ ಕಡತದಲ್ಲಿ ದಾಖಲಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆಯವರು ಈ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಪಾಲ್ಗೊಳ್ಳದೆ ಬಹಿಷ್ಕಾರ ಹಾಕಿರುವುದರಿಂದ ಕೋಲಿ ಸಮುದಾಯದವರಿಗೆ ನ್ಯಾಯ ಒದಗಿಸುವ ವಿಶೇಷ ಅವಕಾಶವನ್ನು ಕಳೆದುಕೊಂಡರು ಮತ್ತು ಈ ಬಗ್ಗೆ ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರು ಖರ್ಗೆಯವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದರು ಎಂದು ಜಾಧವ್ ನೇರವಾಗಿ ಆರೋಪಿಸಿದರು.

ಕೋಲಿ ಸಮಾಜದವರನ್ನು ಎಸ್ ಟಿ ಪಂಗಡಕ್ಕೆ ಸೇರಿಸಲು ಜಾಧವ್ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವವರು ಕೋಲಿ ಸಮುದಾಯದವರಿಗೆ ಎಸ್ ಟಿ ಗೆ ಸೇರಿಸುವ ವಿಚಾರ ಪ್ರಸ್ತಾಪ ಮಾಡಲು ಅವಕಾಶ ಬಳಸದೆ ರಾಜ್ಯಸಭೆಯಿಂದ ಹೊರ ನಡೆದ ಖರ್ಗೆಯವರು ಕೋಲಿ ಸಮುದಾಯಕ್ಕೆ ಉತ್ತರ ನೀಡಬೇಕು ಹೊರತಾಗಿ ಜಾಧವ್ ಏನು ಮಾಡಿದ್ದಾರೆ ಎಂದು ಪದೇ ಪದೇ ಕೇಳುವ ಬದಲು ಪಾರ್ಲಿಮೆಂಟಿನ ಕಡತದಲ್ಲಿ ಎಸ್ ಟಿ ಗೆ ಸೇರಿಸಬೇಕೆಂದು ದಾಖಲೆ ಪತ್ರ ಹಾಗೂ ವಿಚಾರ ಮಂಡಿಸಿದ ಬಗ್ಗೆ ನೋಡಿ ತಿಳಿದುಕೊಳ್ಳಲಿ. ಈ ಬಗ್ಗೆ ಶರದ ಪವಾರ್ ಅವರ ಸುಪುತ್ರಿ ಸಂಸದೆ ಸುಪ್ರಿಯಾ ಸೋಲೇ ಸೇರಿದಂತೆ ಅನೇಕ ಸಂಸದರು ಬಂದು ಅದ್ಭುತವಾಗಿ ವಿಷಯ ಮಂಡಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಲಿ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಕೇವಲ ಅನುಕಂಪ ಪಡೆಯಲು ಕಾಂಗ್ರೆಸ್ ಈ ರೀತಿಯ ನಾಟಕವನ್ನು ಮಾಡುತ್ತಿದೆ.ಹಿಂದುಳಿದ ವರ್ಗಗಳ ಬಗ್ಗೆ ನಿಜವಾದ ಕಾಳಜಿ ಬಿಜೆಪಿಗಿದ್ದು ಆ ಕೆಲಸವನ್ನು ಮಾಡುತ್ತಿದೆ. ಬೆಳಿಗ್ಗೆ ಎದ್ದ ತಕ್ಷಣ ಮೋದಿ ಕೆಲಸ ಏನು,?ಜಾಧವ್ ಕೆಲಸ ಏನು? ಎಂದು ಪ್ರಶ್ನಿಸುವ ಕಾಂಗ್ರೆಸ್ ನವರು 60 ವರ್ಷಗಳಲ್ಲಿ ಮಾಡಿದ ಕೆಲಸದ ಲೆಕ್ಕವನ್ನು ಕೊಡಲಿ. ಬಹಿರಂಗ ಚರ್ಚೆಗೆ ಮಲ್ಲಿಕಾರ್ಜುನ ಖರ್ಗೆ ಅಥವಾ ರಾಧಾಕೃಷ್ಣ ದೊಡ್ಡಮನಿ ಎಂದು ಸವಾಲೆಸದರು.

1972 ರಿಂದ ಬರಗಾಲ ಕಾಡಿದ ನಮ್ಮ ಭಾಗದಲ್ಲಿ ಎಂಎಸ್‌ಕೆ ಮಿಲ್, ಶಹಾಬಾದಿನ ಸಿಮೆಂಟ್ ಕಾರ್ಖಾನೆಗಳು ಮುಚ್ಚುಗಡೆಗೊಂಡು ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಈ ಭಾಗದಿಂದ ಮುಂಬೈ, ಬೆಂಗಳೂರು, ಹೈದರಾಬಾದಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದು ಹೆಚ್ಚಾಗಿರುವುದರಿಂದ ಮೋದಿಯವರು ಒಂದು ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯ ಮೆಗಾ ಜವಳಿ ಪಾರ್ಕ್ ಕೊಡುಗೆ ನೀಡಿದ್ದಾರೆ.

1575 ಕೋಟಿ ರೂಪಾಯಿ ವೆಚ್ಚದ ಸೂರತ್ – ಚೆನ್ನೈ ಭಾರತ್ ಮಾಲ್ ರಸ್ತೆ, 200 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ ಭಾರತ್ ಸ್ಟೇಷನ್ ಅಭಿವೃದ್ಧಿ ಅಡಿಯಲ್ಲಿ ವಾಡಿ, ಶಹಾಬಾದ, ಕಲಬುರ್ಗಿ ಮತ್ತು ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳ ಅಭಿವೃದ್ಧಿ, 68 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಗಿಣಾ ನದಿಗೆ ಮಳಖೇಡದಲ್ಲಿ ಸೇತುವೆ, ಹುಮ್ನಾಬಾದ್ ಬೇಸ್ ನಿಂದ ರಾಮ ಮಂದಿರದವರೆಗೆ 58 ಕೋಟಿ ರೂಪಾಯಿ ವೆಚ್ಚದ ಸರ್ವಿಸ್ ರಸ್ತೆ, ನಂದೂರು (ಕೆ) ಕೈಗಾರಿಕಾ ಪ್ರದೇಶದಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಗತಿ ಶಕ್ತಿ ಯೋಜನೆಯಲ್ಲಿ ಬಿಪಿಸಿಎಲ್ ಕಂಪೆನಿಯ ಪೆಟ್ರೋಲಿಯಂ ತೈಲಾಗಾರ ಸಂಗ್ರಹ ಮತ್ತು ಅಲ್ಲಿವರೆಗೆ ರೈಲು ಹಳಿ ವಿಸ್ತರಣೆ, ಇಎಸ್ಐ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ, ವಿವಿಧ ಕೋರ್ಸ್ ಗಳ ಆರಂಭ, ದ್ರವೀಕೃತ ಆಮ್ಲಜನಕ ಘಟಕ ಪ್ರಾರಂಭಿಸಲಾಗಿದೆ.

ಸಂಸದರ ನಿಧಿಯನ್ನು ಶೇಕಡ 99.9ರಷ್ಟು ವಿನಿಯೋಗಿಸಲಾಗಿದೆ* ಲೋಕಸಭೆಯಲ್ಲಿ 28 ಸಂಸದರ ಪೈಕಿ ಅತಿ ಹೆಚ್ಚು ಪ್ರಶ್ನೆ ಮತ್ತು ಚರ್ಚೆಯಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಕಲ್ಬುರ್ಗಿ ಸಂಸದರಿಗೆ ಸಲ್ಲುತ್ತದೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡರು ಕಾಂಗ್ರೆಸ್ ನವರಿಗೆ ಮಾತ್ರ ಯಾವುದು ಕಣ್ಣಿಗೆ ಕಾಣುತ್ತಿಲ್ಲ. ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಮತ್ತು ಎರಡನೇ ಬಾರಿಗೆ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ಈ ಹಿಂದಿನ ಬಡ್ಡಿ ಸಮೇತ ಜನಸೇವೆ ಮಾಡಲು ಸಿದ್ಧನಾಗಿದ್ದೇನೆ ಎಂದರು. 18ನೇ ಲೋಕಸಭಾ ಚುನಾವಣೆ ಬಹಳ ಮಹತ್ವಪೂರ್ಣವಾಗಿದ್ದು ಸನಾತನ ಧರ್ಮದ ರಕ್ಷಣೆ, ದೇಶದ ಸುಂದರ ಭವಿಷ್ಯಕ್ಕಾಗಿ ನಿಮ್ಮ ಓಟಿನ ಶಕ್ತಿ ಮೋದಿಯವರಿಗೆ ಶಕ್ತಿ ತುಂಬುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನವರ ಅನ್ಯಾಯವನ್ನು ತಾಳಿಕೊಂಡು ಚಿತ್ತಾಪುರದಲ್ಲಿ ಸತತವಾಗಿ ಬಿಜೆಪಿಗೆ ಬೆಂಬಲಿಸಿದ್ದೀರಿ. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಿ ಮೂರನೇ ಬಾರಿ ಪ್ರಧಾನಿಯವರಿಗೆ ಅವಕಾಶ ನೀಡಬೇಕು ಮತ್ತು ಎರಡನೇ ಬಾರಿ ಜಾದವ್ ಅವರನ್ನು ಸಂಸತ್ತಿಗೆ ಕಳಿಸಿ ಸಚಿವರನ್ನಾಗಿ ನಾವೆಲ್ಲ ಕಾಣಬೇಕು ಎಂದು ಬಿಜೆಪಿಯ ನಗರ ಅಧ್ಯಕ್ಷ ಚಂದು ಪಾಟೀಲ್ ಹೇಳಿದರು.

60 ವರ್ಷ ಆಡಳಿತ ನಡೆಸಿದರು ಅಭಿವೃದ್ಧಿ ಮಾಡಲಾಗದ ಕಾಂಗ್ರೆಸ್ ಇದೀಗ ಮೂಲೆ ಗುಂಪಾಗಿದೆ ಹತ್ತು ವರ್ಷಗಳಲ್ಲಿ ಮೋದಿಯವರು ಉಜ್ವಲ ಯೋಜನೆ ಆಯುಷ್ಮಾನ್ ಕಾರ್ಡ್ ಉಚಿತ ರೇಷನ್ ಶೌಚಾಲಯ ಮುಂತಾದ ಅನೇಕ ಯೋಜನೆಗಳನ್ನು ಜಾರಿ ಮಾಡಿ ಜನ ಪರವಾಗಿ ಕೆಲಸ ಮಾಡಿದ್ದಾರೆ 10 ವರ್ಷಗಳ ಮೋದಿ ಆಡಳಿತ ಕೇವಲ ಟ್ರೈಲರ್ ಮಾತ್ರ ಆಗಿದ್ದು ಮುಂದಿನದು ಸಿನಿಮಾ ಆಗಲಿದೆ ಎಂದು ಹೇಳಿದರು.

ಮಾಜಿ ಕಾರ್ಮಿಕ ಮುಖಂಡರು ಮಂತ್ರಿಗಳು ಆಗಿದ್ದ ದಿ. ಗುರುನಾಥ್ ಅವರ ಸುಪುತ್ರಿ ಉದ್ಯಮಿ ಶ್ರೀಮತಿ ಜ್ಯೋತಿ ಅವರು ಮೋದಿ ಅವರ ಆಡಳಿತಕ್ಕೆ ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರನ್ನು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್, ಬಿಜೆಪಿ ಉಸ್ತುವಾರಿ ಶರಣಪ್ಪ ತಳವಾರ್ ಸೇರಿದಂತೆ ನಾಯಕರು ಬಿಜೆಪಿ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

emedialine

Recent Posts

ಮಹಿಳಾ ಅಸ್ಮಿತೆ ಸಾರಿದ ಡಾ.ಕಮಲಾ ಹಂಪನಾ

ಸೇಡಂ: ಕನ್ನಡ ಸಾಹಿತ್ಯ ಲೋಕಕ್ಕೆ ಸೃಜನ ಶೀಲ ಬರಹದ ಮೂಲಕ ಮಹಿಳಾ ಅಸ್ಮಿತೆ ಸಾರಿದ ಕೀರ್ತಿ ಹಿರಿಯ ಸಾಹಿತಿ ಡಾ.ಕಮಲಾ…

4 hours ago

ರಾಜ್ಯದಲ್ಲಿ 82 ಲಕ್ಷ‌ ಹೆಕ್ಟೇರ್ ಬಿತ್ತನೆ ಗುರಿ; 2025 ಅಂತ್ಯಕ್ಕೆ ಕಂದಾಯ ಇಲಾಖೆ ಡಿಜಿಟಲೀಕರಣ | ಸಚಿವ ಕೃಷ್ಣ ಬೈರೇಗೌಡ

2025 ಅಂತ್ಯಕ್ಕೆ ಕಂದಾಯ ಇಲಾಖೆ ಡಿಜಿಟಲೀಕರಣ: ಕಂದಾಯ ಇಲಾಖೆಯು ಎಲ್ಲಾ ಆಯಾಮದಿಂದ ಡಿಜಿಟಲಿಕರಣಕ್ಕೆ ಮುಂದಾಗಿದೆ. ಈಗಾಗಲೆ ಇ-ಕಚೇರಿ ಅನುಷ್ಠಾನದಲ್ಲಿ ಶೇ.80ರಷ್ಟು…

15 hours ago

ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಧಾಕೃಷ್ಣ ದೊಡ್ಡಮನಿಗೆ ಮಜರ್ ಆಲಂ ಖಾನ್ ಸನ್ಮಾನ

ಕಲಬುರಗಿ: ರಾಧಾಕೃಷ್ಣ ದೊಡ್ಡಮನಿ ಅವರು ಸಂಸದರಾಗಿ ಪ್ರಮಾಣ ವಚನ ಸ್ವಿಕರಿಸಿದ ನಂತರ ಅವರನ್ನು ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್…

16 hours ago

ಕಮಲಾಪುರದಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನ ಕೈಗೊಳ್ಳುವೆ: ವಿದ್ಯಾ ಕಣ್ವವಿರಾಜ ತೀರ್ಥ

ಸುರಪುರ: ಭಕ್ತರ ಆಪೇಕ್ಷೆ ಮತ್ತು ಅಭಿಮಾನದ ಮೇರೆಗೆ ಈ ಬಾರಿಯ ತಮ್ಮ ಪಂಚಮ ವರ್ಷದ ಚಾತುರ್ಮಾಸ್ಯ ವೃತಾನುಷ್ಠಾನವನ್ನು ವಿಜಯಪುರ ಜಿಲ್ಲೆಯ…

17 hours ago

ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ನಿಷೇಧ

ಬೆಂಗಳೂರು; ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ The Food Safety and Standards Act, 2006  ರ…

19 hours ago

17 ನೂತನ ಶಾಸಕರಿಂದ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು; ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ 17 ವಿಧಾನ ಪರಿಷತ್ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ…

19 hours ago