ಶಿಬಿರಗಳಿಂದ ಸಾಮಾಜಿಕ ಜವಾಬ್ದಾರಿಯ ಅರಿವು

ಆಳಂದ; ಕಳೆದ ಒಂದು ದಶಕಗಳಿಂದ ವಿಶ್ವವಿದ್ಯಾಲಗಳು ಮತ್ತು ಕಾಲೇಜುಗಳಿಂದ ಹಮ್ಮಿಕೊಳ್ಳುತ್ತಿರುವ ರಾಷ್ಟೀಯ ಸೇವಾ ಯೋಜನೆಗಳಿಗೆ ಗ್ರಾಮಗಳಿಂದ ಹಾಗೂ ಶಿಬಿರಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಮುನ್ನಹಳ್ಳಿ ವಸತಿ ನಿಲಯದ ಮೇಲ್ವಿಚಾರಕ ಹಣಮಂತರಾವ ಬಿರಾದಾರ ಅಭಿಪ್ರಾಯಪಟ್ಟರು.

ಆಳಂದ ತಾಲೂಕಿನ ಮುನ್ನಹಳ್ಳಿ ಗ್ರಾಮದಲ್ಲಿ ವೆಂಕಯ್ಯ ಕೂಸಯ್ಯ ಗುತ್ತೇದಾರ ಪದವಿ ಕಾಲೇಜಿನಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

ಶಿಬಿರದಲ್ಲಿ ಶಿಬಿರಾರ್ಥಿಗಳು ಸಹಜೀವನ, ಸಹಬಾಳ್ವೆ, ಶಿಸ್ತು, ಸಮಯಪ್ರಜ್ಞೆ, ಶಾಂತಿ, ಸಮಯಪಾಲನೆ ಸೇರಿದಂತೆ ಅನೇಕ ಹೊಸ ವಿಷಯಗಳನ್ನು ಕಲಿಯಲಿದ್ದಾರೆ ಇದರಿಂದ ಜೀವನದಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭವಾಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಕಾರ್ಯಕ್ರಮವು ಕಾಲೇಜಿನ ಪ್ರಭಾವ ಚಟುವಟಿಕೆಗಳ ಅನುμÁ್ಠನದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ರಾಷ್ಟ್ರೀಯ ಸೇವಾ ಯೋಜನೆಯು ಭಾರತ ಸರ್ಕಾರದ ಪ್ರಾಯೋಜಿತ ಸಾರ್ವಜನಿಕ ಸೇವಾ ಕಾರ್ಯಕ್ರಮವಾಗಿದೆ. ಇದನ್ನು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ನಡೆಸುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯು ಎನ್‍ಎಸ್‍ಎಸ್ ಎಂದು ಜನಪ್ರಿಯವಾಗಿದೆ, ಇದನ್ನು ಮಹಾತ್ಮ ಗಾಂಧಿಯವರ ಜನ್ಮ ಶತಮಾನೋತ್ಸವ ವರ್ಷ, 1969 ರಲ್ಲಿ ಪ್ರಾರಂಭಿಸಲಾಯಿತು. ಸಮುದಾಯ ಸೇವೆಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವುದು ಮುಖ್ಯ ಗುರಿಯಾಗಿದೆ. ಎನ್‍ಎಸ್‍ಎಸ್, ಯುವಜನರ ಸ್ವಯಂಪ್ರೇರಿತ ಸಂಘವಾಗಿದೆ ಎಂದು ನುಡಿದರು.

ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಮಾತನಾಡಿ, ಸಮುದಾಯಕ್ಕೆ ಸೇವೆಯ ಮೂಲಕ ಶೈಕ್ಷಣಿಕ ಮತ್ತು ನೈತಿಕ ಮೌಲ್ಯಗಳನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ಇದು ವಿದ್ಯಾರ್ಥಿ-ಕೇಂದ್ರಿತ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಉತ್ತಮ ಮತ್ತು ಸಮರ್ಥ ನಾಗರಿಕರಾಗಲು ಸ್ವಯಂಸೇವಕರಲ್ಲಿ ಸಂವಾದಾತ್ಮಕ ಕೌಶಲ್ಯ ಮತ್ತು ಜಾಗೃತಿಯನ್ನು ಅಭಿವೃದ್ಧಿಪಡಿಸಲು ಇದನ್ನು ಜಾರಿಗೊಳಿಸಲಾಗಿದೆ. ವಿದ್ಯಾರ್ಥಿ ಸ್ವಯಂಸೇವಕರು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ ಮತ್ತು ಗ್ರಾಮವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಾರೆ ಮತ್ತು ಅವರ ಸ್ಥಾನಮಾನವನ್ನು ಸುಧಾರಿಸಲು ಹಿಂದುಳಿದ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಯೋಜನೆಯು ಅವುಗಳನ್ನು ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸುವ ಸಾಮಥ್ರ್ಯವನ್ನು ಉತ್ತೇಜಿಸುತ್ತದೆ ಎನ್‍ಎಸ್‍ಎಸ್ ಸ್ವಯಂಸೇವಕರಲ್ಲಿ ಸಾಮಾಜಿಕ ಜವಾಬ್ದಾರಿ, ದೇಶಭಕ್ತಿ, ರಾಷ್ಟ್ರೀಯ ಏಕೀಕರಣ, ಕೋಮು ಸೌಹಾರ್ದತೆಯ ಭಾವವನ್ನು ಮೂಡಿಸುತ್ತದೆ ಎಂದು ಹೇಳಿದರು.

ಪ್ರೌಢಶಾಲೆಯ ಸಹ ಶಿಕ್ಷಕ ವಿವೇಕಾನಂದ ಕಾಪ್ಸೆ, ಹಣಮಂತ ಶೇರಿ ಮಾತನಾಡಿದರು. ಕಾರ್ಯಕ್ರಮ ಅಧಿಕಾರಿ ಮಹೇಶ ಮಾಡ್ಯಾಳೆ, ರಾಜೇಶ್ವರಿ ಸುತಾರ, ಪರಮೇಶ್ವರ ಪೂಜಾರಿ, ರೂಪಚಂದ ಮಂಡ್ಲೆ ವೇದಿಕೆಯ ಮೇಲಿದ್ದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು, ಉಪನ್ಯಾಸಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಉಪನ್ಯಾಸಕ ಪ್ರಕಾಶ ತಾವರಗೇರಾ ನಿರೂಪಿಸಿ ವಂದಿಸಿದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420