ಕಲಬುರಗಿ: ಮನುಷ್ಯನ ಬದುಕಿಗೆ ಗುರುವಿನ ಸನ್ಮಾರ್ಗದರ್ಶನ ಅವಶ್ಯವಾಗಿದ್ದು ಅಂಧಕಾರ ಹೊಡೆದೋಡಿಸಿ ಸಂಸ್ಕಾರ ಮತ್ತು ಸಂಸ್ಕøತಿ ಬಿತ್ತುವ ಗುರುವಿನ ಪಾತ್ರ ಬಹುಮುಖ್ಯವಾಗಿದೆ ಎಂದು ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಜಗದ್ಗುರು ಪರಮಪೂಜ್ಯ ಸ್ವಸ್ತಿಶ್ರೀ ಡಾ: ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಸುಕ್ಷೇತ್ರ ಹುಣಸಿಹಡಗಿಲ ಗ್ರಾಮದಲ್ಲಿರುವ ದಿಗಂಬರ ಜೈನ ಮಹಾಸಭಾ ಲಕ್ನೋ ಇವರ ಸಹಯೋಗದಿಂದ ಜೀರ್ಣೋದ್ಧಾರವಾದ ಪುರಾತನ ತ್ರಿಕೂಟ ಜಿನಮಂದಿರದ 1008 ಶ್ರೀ ಶಾಂತಿನಾಥ ಭಗವಾನ ಮಂದಿರದ ಧಾಮ ಸಂಪ್ರೋಕ್ಷಣ ಹಾಗೂ ಜಿನಬಿಂಬ ಶುದ್ಧ 1008 ಶ್ರೀ ಮುನಿಸುವ್ರತನಾಥ ಭಗವಾನರ ಹಾಗೂ 1008 ಶ್ರೀ ಮಹಾವೀರ ಭಗವಾನರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಮೂರನೇ ದಿನದ ರಾಜಾಭಿಷೇಕ ಸಮಾರಂಭದ ನೇತೃತ್ವ ವಹಿಸಿ ಸದ್ಭಕ್ತಾದಿಗಳು ಭಕ್ತಿಪೂರ್ವಕವಾಗಿ ಸಮರ್ಪಿಸಿ ತುಲಾಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚನವನ್ನು ನೀಡಿದ ಅವರು ಗುರು ಕಣ್ಣಿಗೆ ಕಾಣುವ ದೇವರಾಗಿದ್ದು, ಭಕ್ತ ಸಂಕುಲಕ್ಕೆ ಸದಾ ಬೆಳಕಾಗಿ ಬಾಳು ಬೆಳಗಿಸುವ ದಿವ್ಯ ಶಕ್ತಿಯಾಗಿದೆ ಎಂದು ನುಡಿದ ಅವರು ಸಾವಿರಾರು ವರ್ಷಗಳಿಂದ ನಡೆದುಬಂದ ಗುರು-ಶಿಷ್ಯ ಪರಂಪರೆ ಇಂದು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದು ಹೇಳಿದರು.
ಭಕ್ತರ ನಿಷ್ಕಲ್ಮಶ ಭಕ್ತಿಗೆ ಅಧಿಕಾರ, ಹಣ, ಸಂಪತ್ತು, ಸಿರಿ, ಜಾತಿ, ಮತದ ಅಗತ್ಯವಿಲ್ಲ, ಪ್ರೀತಿ ಮತ್ತು ವಾತ್ಸಲ್ಯವೇ ಭಕ್ತರ ನಿಜವಾದ ಭಕ್ತಿಯಾಗಿದ್ದು ಅದು ನಿರಂತರವಾಗಿರುತ್ತದೆ ಎಂದು ಮಹಾಸ್ವಾಮಿಗಳು ಭಾವುಕರಾಗಿ ನುಡಿದರು. ಸನ್ಯಾಸಿಗಳಿಗೆ ಸಮಾಜವೇ ಬಂಧು-ಬಳಗವಾಗಿದ್ದು ಸದಾ ಗೌರವಿಸುವ, ಪ್ರೀತಿಸುವ ಭಕ್ತರನ್ನು ಹೊಂದಿರುವ ನಮಗೆ ಅತೀವ ಸಂತಸ ತಂದಿದೆ ಎಂದರು.
ಪ್ರಜ್ಞಾಶ್ರಮಣ ಸಾರಸತ್ವಾಚಾರ್ಯ ಪರಮಪೂಜ್ಯ ಶ್ರೀ 108 ಶ್ರೀ ದೇವನಂದಿ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಪರಮಪೂಜ್ಯ 108 ಶ್ರೀ ಸಕಲಕೀರ್ತಿ ಮುನಿಮಹಾರಾಜರ ಹಾಗೂ 105 ಪರಮಪೂಜ್ಯ ಅರ್ಕಕೀರ್ತಿ ಕ್ಷುಲ್ಲಕರು ಇವರುಗಳ ದಿವ್ಯ ಸಾನಿಧ್ಯದಲ್ಲಿ ಹುಬ್ಬಳ್ಳಿಯ ನವಗ್ರಹ ತೀರ್ಥ ಕ್ಷೇತ್ರದ ಶ್ರೀ ಪರಮಪೂಜ್ಯ ಸ್ವಸ್ತಿಶ್ರೀ ಧರ್ಮಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಪವಿತ್ರ ಸಮಾರಂಭದಲ್ಲಿ ಜೈನ ಸಮಾಜದ ಮುಖಂಡರುಗಳು ಹಾಗೂ ಹುಣಸಿಹಡಗಿಲ ಟ್ರಸ್ಟ್‍ನ ಪದಾಧಿಕಾರಿಗಳಾದ ವಿಜಯಕುಮಾರ ಕಿವಡೆ, ನೇಮಿನಾಥ ಬೆಳಕೇರಿ, ಪ್ರಕಾಶ ಜೈನ್, ವಜ್ರಕುಮಾರ ಪಾಟೀಲ, ಅರಿಹಂತ ಪಾಟೀಲ, ರಾಜಕುಮಾರ ಕಿವಡೆ, ಅಜೀತ ಕಾಸರ, ಸುರೇಶ ತಂಗಾ, ಮಹಾವೀರ ಬಪ್ಪಣಕರ್, ಅನೀಲ ಭಸ್ಮೆ, ರಾಜೇಂದ್ರ ಕುಣಚಗಿ, ಅನೀಲ ಜಂಬಗೆ, ರತನಕುಮಾರ ಹೊಸಳ್ಳೆ, ಜೀತು ಚಿಂದೆ, ಕಿರಣ ಪಂಡಿತ, ರಮೇಶ ಬೆಳಕೇರಿ ಮತ್ತು ಸಕಲ ಹುಣಸಿಹಡಗಿಲ ಗ್ರಾಮಸ್ಥರು ಹಾಗೂ ಕಲಬುರಗಿ ಜಿಲ್ಲಾ ಸಕಲ ಜೈನ ಸಮಾಜ ಬಾಂಧವರು, ಹುಣಸಿಹಡಗಿಲ ಟ್ರಸ್ಟ್‍ನ ಸಮಸ್ತರು ಪಂಚಕಲ್ಯಾಣ ಮಹೋತ್ಸವದ ಪದಾಧಿಕಾರಿಗಳು, ಸಾವಿರಾರು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…