ಚಿತ್ತಾಪುರ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ್ ಅವರಿಗೆ ನಮ್ಮ ಬಂಜಾರ ಸಮಾಜದವರು ಅಂತಹ ಜಾತಿ ನೋಡಿ ಮತ ಹಾಕಲ್ಲ.ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಕೆಲಸ ಕಾರ್ಯಗಳು ನೋಡಿ ರಾಧಾಕೃಷ್ಣ ದೊಡ್ಡಮನಿ ಸಾಹೇಬರಿಗೆ ನಮ್ಮ ಬಂಜಾರ ಸಮಾಜದ ಜನರು ಮತ ನೀಡುತ್ತಾರೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆ ಪ್ರಚಾರದ ಪ್ರಯುಕ್ತ ತಾಲ್ಲೂಕು ಬಂಜಾರ ಸಮಾಜದ ಜನರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ 8 ಮತಕ್ಷೇತ್ರದಲ್ಲಿನ ನಮ್ಮ ಬಂಜಾರ ಸಮಾಜದ ಪ್ರಮುಖರ ಭೇಟಿ ನೀಡಲಾಗಿದೆ ಈ ಬಾರಿ ನಮ್ಮ ಬಂಜಾರ ಸಮುದಾಯದ ಕಾಂಗ್ರೆಸ್ ಪಕ್ಷದ ಬಹುಮತ ನೀಡುವ ಗುರಿ ಹೊಂದಿದೆ ಎಂದರು.
ಬಿಜೆಪಿ ಪಕ್ಷ ಬರಿ ಮೋದಿ ಅಲೆ ಎಂದು ಬಿಗುತ್ತಿದ್ದಾರೆ ಆ ಮೋದಿ ಅಲೆಯಿಂದ ಜನರ ಹೊಟ್ಟೆ ತುಂಬಲ್ಲ.ನಮ್ಮ ಕಾಂಗ್ರೆಸ್ ಪಕ್ಷದ ಪಂಚ ಯೋಜನೆಗಳಿಂದ ಜನರ ಹೊಟ್ಟೆ ತುಂಬುತ್ತದೆ. ಮೋದಿ ಒಬ್ಬ ಸುಳ್ಳಿನ ಸರ್ದಾರ ಇದ್ದನೇ ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನರು ರಾಧಾಕೃಷ್ಣ ದೂಡ್ಡಮನಿ ಅವರಿಗೆ ಬಹುಮತ ನೀಡಿ ಗೆಲ್ಲಿಸುವುದು ಖಚಿತ ಎಂದರು.
ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ್ ರಾಠೋಡ್ ಮಾತನಾಡಿ ನಮ್ಮ ಬಂಜಾರ ಸಮಾಜಕ್ಕೆ ಉಮೇಶ ಜಾಧವ್ ಹಾಗೆ ಮಾಡುತ್ತಿನಿ ಹೀಗೆ ಮಾಡುತ್ತಿನಿ ಅಂತಹ ಬರಿ ಆಸೆ ತೋರಿಸಿದ್ದಾರೆ ವಿನ:ಅವರ ಕಾರ್ಯ ಬಂಜಾರ ಸಮಾಜಕ್ಕೆ ಶೂನ್ಯ ಅದ್ದರಿಂದ ಜನರು ಅರಿತುಕೊಂಡಿದ್ದಾರೆ ಈ ಭಾರಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲುಸುತ್ತಾರೆ ನೋಡಿ
ಜಿಲ್ಲೆಯಿಂದ ನಮ್ಮ ಬಂಜಾರ ಸಮಾಜದ ಜನರು
ಹೊರ ರಾಜ್ಯಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ನಮ್ಮ ಜನರ ಬಗ್ಗೆ ಕಾಳಜಿಯಿಲ್ಲ.ಕೊರೊನಾ ಸಂದರ್ಭದಲ್ಲಿ ಜನರ ಫೋನ್ ಕೆರೆಗಳಿಗೆ ಸ್ಪಂದನೆ ನೀಡಿಲ್ಲ ತಾಂಡಾಗಳಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಆಗಿಲ್ಲ.ಹೀಗಾಗಿ ಇಂತಹ ಸಂಸದರು ಬೇಡಾ ಎಂದು ಜನರು ನಿರ್ಧಾರ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಅರವಿಂದ್ ಚವ್ಹಾಣ್, ಭೀಮಸಿಂಗ್ ಚವ್ಹಾಣ್, ಮಾಜಿ ತಾಪಂ ಸದಸ್ಯ ನಾಮದೇವ್ ರಾಠೋಡ್ ನಾರಾಯಣ ಪವಾರ್, ಮಾಜಿ ಜಿಪಂ ಸದಸ್ಯ ಚಂದು ಪವಾರ್, ಕಾಂಗ್ರೆಸ್ ಮುಖಂಡರಾದ ಶಿವರಾಮ್ ಪವಾರ್, ಚಂದು ಜಾಧವ್, ರಾಜು ಪವಾರ್, ಜಗದೀಶ್ ಚವ್ಹಾಣ್, ಜೇಮಸಿಂಗ್ ರಾಠೋಡ್ ಸೇರಿದಂತೆ ನೂರಾರು ಸಂಖೆಯಲ್ಲಿ ಬಂಜಾರ ಸಮುದಾಯದ ಜನರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…