ಕಲಬುರಗಿ: ಸರಕಾರಿ ನೌಕರಿ ಪಡೆಯುವಂತ ಲಕ್ಷಾಂತರ ಯುವಜನರ ಭವಿಷ್ಯದ ಜೊತೆಗೆ ಚಲ್ಲಾಟ ಆಡುತ್ತಿರುವ ಆರ್.ಡಿ ಪಾಟೀಲ್ ಮನೆಗೆ ಕಲಬುರಗಿ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಸಂಸದ ಡಾ. ಉಮೇಶ್ ಜಾಧವ್ ಅವರು ಮತಯಾಚಿಸಿ ಬೆಂಬಲ ಕೇಳಿರುವುದು ಪಿಎಸ್ಐ, ಕೆಎಐ ಪರೀಕ್ಷೆಯ ಆಕ್ರಮದಲ್ಲಿ ಎಷ್ಟು ಕಮಿಷನ್ ಪಡೆದಿದ್ದಿರಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರೀಕ್ಷೆಗಳಲ್ಲಿ ಆಕ್ರಮ ತಡೆಯು ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿವೆ. ಆದರೆ ಬಿಜೆಪಿ ಪಕ್ಷದ ಸಂಸದರು ಪರೀಕ್ಷೆಗಳಲ್ಲಿ ಆಕ್ರಮ ನಡೆಸುವವ ಮನೆಗೆ ಹೋಗಿ ಬೆಂಬಲ ಕೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಭ್ರಷ್ಟಾಚಾರವನ್ನು ತಡೆಯುತ್ತೇವೆ ಎಂದು ಹೇಳುತ್ತಾರೆ ಮತ್ತೊಂದು ಕಡೆ ಅವರನ್ನು ಭ್ರಷ್ಟಾಚಾರಿಗಳನ್ನು ಬಿಜೆಪಿ ಪಕ್ಷದಲ್ಲಿ ಸೇರಿಸಿಕೊಳ್ಳುತ್ತದೆ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಗೆಲ್ಲವುದಕ್ಕಾಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಪಿಎಸ್ಐ, ಮತ್ತು ಕೆಎಐ ಪರೀಕ್ಷೆಯಲ್ಲಿ ಆಕ್ರಮ ನಡೆಸಿರುವ ಆರೋಪಿಗಳೊಂದಿಗೆ ಊಟೋಪಾಚಾರ ಮಾಡಿ ಬೆಂಬಲ ಕೇಳಿವುದು ಕೇಳಮಟ್ಟದ ರಾಜಕೀಯವಾಗಿದೆ. ಅವರ ಭ್ರಷ್ಟಾಚಾರದಲ್ಲಿ ಅವರು ಎಷ್ಟು ಕಮಿಷನ್ ಪಡೆದಿದ್ದಾರೆ ಎಂದು ಮತದಾರರಿಗೆ ತಿಳಸಬೇಕೆಂದು ಎಂದರು.
ಪಿಎಸ್ಐ ಹರಣದಲ್ಲಿ 100ಕ್ಕೂ ಹೆಚ್ಚು ಜನರ ಬಂಧನವಾಗಿದೆ. ರಾಜ್ಯದಲ್ಲಿ 54 ಅಭ್ಯರ್ಥಿಗಳನ್ನು ಆಕ್ರಮದಲ್ಲಿ ಬಂಧಸಲಾಗಿದೆ. ಸಂಸದರ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳನ್ನು ಬಂಧಿಸಿಲಾಗಿದ್ದು, ತಾಯಿ ತಂಗಿ ಹಾಗೂ ಅಕ್ಕ ಅವರ ಒಡವೇ ಅಡವಿಟ್ಟು ಪರೀಕ್ಷ ಬರೆದಿರುವಂತಹ ಲಕ್ಷಾಂತರಯುವಜನರ ಭವಿಷ್ಯದ ಜೊತೆ ಚೆಲ್ಲಾಟ ಆಡಿ ಜೈಲು ಪಾಲಾಗಿರುವ ದಿವ್ಯ ಹಾಗರಗಿ ಮತ್ತು ಆರ್.ಡಿ ಪಾಟೀಲ್ ಜೊತೆ ಬಿಜೆಪಿ ಸಂಸದರು ಮತ್ತು ಅಭ್ಯರ್ಥಿ ರಾಮ ನವಮಿ ಜಿಲ್ಲೆಯಲ್ಲಿ ಮುಗಿಲ್ಲು ಮುಟ್ಟಿದೆ ಎಂದು ಹೇಳುತ್ತಾರೆ.
ಭ್ರಷ್ಟಾಚಾರಿಗಳ ಜೊಗೆ ರಾಮನವಮಿ ಆಚರಿಸಿ ಇಂತಹ ಹೇಳಿಕೆ ನೀಡುವ ಮೂಲಕ ಬಿಜೆಪಿಯವರು ರಾಮನ ಹೆಸರಲ್ಲಿ ಏನು ಮಾಡಿದರು ನಡೆಯುತ್ತದೆ ಎಂದು ಭಾವಿಸಿದ್ದಾರೆ.
ಹತ್ತು ವರ್ಷಗಳಲ್ಲಿ ಎಲ್ಲಾ ಹಬ್ಬಗಲು ಪೊಲೀಸ್ ಭದ್ರತೆಯಲ್ಲಿ ಆಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಹತ್ತು ವರ್ಷಗಳ ಹಿಂದೆ ಪೊಲೀಸರ ಭದ್ರತೆ ಇಲ್ಲದೇ ಆಚರಸಲಾಗುತ್ತಿತ್ತು. ನಮ್ಮ ಪೊಲೀಸ್ ಸಿಬ್ಬಂದಿಗಳು ಸಹ ಹಬ್ಬ ಆಚರಿಸುತ್ತಿದ್ದರು. ಆದರೇ ಇದೀಗ ಸೆಕ್ಷನ್ 144 ಹಾಗೂ ಪೊಲೀಸ್ ಭದ್ರತೆಯಲ್ಲಿ ಎಲ್ಲಾ ಹಬ್ಬಗಳು ಆಚರಿಸುವ ಸ್ಥಿತಿ ಮೋದಿ ಸರಕಾರ ಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಪ್ರವೀಣ ಹರವಾಳ, ಡಾ ಕಿರಣ ದೇಶಮುಖ, ಫಾರೂಖ್ ಸೇಟ್ , ಪರಶುರಾಮ ನಾಟೀಕಾರ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…