ಕೊಪ್ಪಳ: ತಾಲ್ಲೂಕಿನ ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 72ನೇ ವರ್ಷದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಯಿತು.
ಮುಖ್ಯೋಪಾಧ್ಯಾಯ ಫಕೀರಪ್ಪ .ಎನ್. ಅಜ್ಜಿ. ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತಕ್ಕೆ 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕರು, ನಮ್ಮ ಭಾಗದ ಆರು ಜಿಲ್ಲೆಗಳಿಗೆ ೦೧ ವರ್ಷ ೦೯ ತಿಂಗಳು ತಡವಾಗಿ ಸಿಕ್ಕಿದೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಬಹಳ ಸಂತೋಷ. ಆದರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿ ಶೈಕ್ಷಣಿಕವಾಗಿ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟು ಎಲ್ಲರೂ ಅಭಿವೃದ್ಧಿ ಪಥದತ್ತ ಸಾಗಿದಾಗ ಮಾತ್ರ ಈ ಕಲ್ಯಾಣ ಕರ್ನಾಟಕ ಉತ್ಸವದ ಆಚರಣೆ ಸಾರ್ಥಕ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಜೀವಗೌಡ್ರ ಪೋಲೀಸ್ ಪಾಟೀಲ್ ಮಾತನಾಡಿ, ಮುರಡಿ ಭೀಮಜ್ಜ, ಚಳ್ಳೂರು, ರಾಘವೇಂದ್ರರಾವ್ ಶಿವಮೂರ್ತಿ ಸ್ವಾಮಿ ಅಳವಂಡಿ ಇಂಥವರ ತ್ಯಾಗ ಬಲಿದಾನ ನಮ್ಮೆಲ್ಲರಿಗೂ ಮಾದರಿ ಎಂದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸ. ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕ ಶಂಕ್ರಪ್ಪ ಜನಾದ್ರಿ, ಉಪಕೇಂದ್ರದ ಕಿ. ಆ. ಸ. ಪ್ರಮೀಳಾ ಹುಳ್ಳಿಕಾಶಿ, ರಮೇಶ್ ಡಂಬ್ರಳ್ಳಿ,ಕೊಟ್ರಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ಮಲ್ಲೇಶಪ್ಪ ಸೋಂಪುರ, ಅಧ್ಯಕ್ಷ ಈಶಪ್ಪ ಸೋಂಪುರ, ಬದಿಯಪ್ಪ ಇಟಗಿ, ಪರಶುರಾಮ ಕಟ್ಟಿಮನಿ, ಮಂಜಪ್ಪ ಮಾಲಿ ಪಾಟೀಲ್, ಚಿದಾನಂದಪ್ಪ ಕುಂಬಾರ, ಶಿವಕುಮಾರ ಏಣಿಗಿ, ಪ್ರಮೋದ್ ಬಾಳಮ್ಮನವರ ಲಕ್ಷಣ್ ಎಚ್.ಕೆ ಫಕೀರಮ್ಮ ತಳವಾರ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುನೀತಾ ಉಳ್ಳಾಗಡಿ ಪ್ರಾರ್ಥಿಸಿದರೆ, ಅನುಶ್ರೀ ಗಣಪ ಸ್ವಾಗತಿಸಿ, ನಾಗರಾಜ ಹಿರೇಮಠ ನಿರೂಪಿಸಿ, ಭಾವನಾ ರಾಠೋಡ್ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…