ಸುರಪುರ: ರೈತರ ಮೊದಲ ಬೆಳೆಗೆ ವಾರಬಂದಿ ಮಾಡಿರುವದು ಇದುವರೆಗೆ ನೋಡಿರಲಿಲ್ಲ,ಹಿಂದೆ ನಾನು ಶಾಸಕನಾಗಿದ್ದಾಗ ಎರಡು ಬೆಳೆಗೆ ನೀರು ತಂದು ರೈತರಿಗೆ ಅನುಕೂಲ ಮಾಡಿದ್ದೆ,ಆದರೆ ಕಳೆದ ಚುನಾವಣೆಯಲ್ಲಿ ರೈತರ ಮೂರು ಬೆಳೆಗೆ ನೀರು ಕೊಡಿಸುವೆ ಎಂದಿದ್ದರು ಆದರೆ ಮೊದಲ ಬೆಳೆಗೆ ವಾರಬಂದಿ ಮಾಡಿದರು,ಈಗ ಮತ್ತೆ ಚುನಾವಣೆ ಬಂದಿದೆ ನೀವು ನನ್ನನ್ನು ಗೆಲ್ಲಿಸಿ ನನ್ನ ಪ್ರಾಣ ಕೊಟ್ಟಾದರು ರೈತರ ಎರಡು ಬೆಳೆಗೆ ನೀರು ಕೊಡಿಸುವುದಾಗಿ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.
ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸು ನಡೆದ ಮೆರವಣಿಗೆಯಲ್ಲಿ ಮಾತನಾಡಿ,ಸರಕಾರ ರೈತರಿಗೆ ಒಂದಿಷ್ಟು ಅನುಕೂಲ ಮಾಡಿಲ್ಲ,ಕೇವಲ ಗ್ಯಾರಂಟಿಗಳ ಬಗ್ಗೆ ಹೇಳುತ್ತಾರೆ,ಗಂಡಸರಿಂದ ಹೆಚ್ಚಿನ ಹಣ ವಸೂಲಿ ಮಾಡಿ ಅದನ್ನು ಮಹಿಳೆಯರ ಖಾತೆಗೆ ಹಾಕುತ್ತಾರೆ,ಆದರೆ ರೈತರ,ಕಾರ್ಮಿಕರ ಬಗ್ಗೆ ಯಾವುದೇ ಕಾಳಜಿ ಇಲ್ಲಾ ಎಂದರು.
ಅಲ್ಲದೆ ಈಗ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿರುವ 19 ಟಿ.ಎಮ್.ಸಿ ನೀರಿನಿಂದ ಯಾದಗಿರಿ,ಕಲಬುರಗಿ,ವಿಜಯಪುರ,ರಾಯಚೂರ ಜಿಲ್ಲೆಗಳ ರೈತರ ಜಮೀನುಗಳಿಗೆ 25 ದಿನಗಳಿಗಾಗುವಷ್ಟು ನೀರು ಕೊಡಬಹುದಿತ್ತು,ಆದರೆ ನಮ್ಮ ರೈತರಿಗೆ ಬೆಳೆಗೆ ನೀರು ಕೊಡದೆ ರೈತರಿಗೆ ಸಂಕಷ್ಟಕ್ಕೆ ದೂಡಿದ್ದಾರೆ,ಡ್ಯಾಂನಲ್ಲಿ ನೀರು ಇಲ್ಲ ಎಂದಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಗುಡುಗಿದರು. ನೀವು ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ನಾನು ಸದಾಕಾಲ ನಿಮ್ಮೊಂದಿಗಿರುವೆ ಎಂದರು.
ಇಂದು ಕೆಲವರು ತುಂಬಾ ಹಗುರವಾಗಿ ಏಕವಚನದಲ್ಲಿ ರಾಜುಗೌಡ ಏನು ಮಾಡಿದ್ದಾನೆ ಎಂದು ಮಾತುನಾಡುತ್ತಾರೆ,ಆದರೆ ಅವರಿಗೆ ಕೇಳಬಯಸುವೆ ಬರೀ ಬಾಯಿ ಮಾತು ಆಡುವುದಲ್ಲ ತಾವು ಅಭವೃಧ್ಧಿ ವಿಷಯವಾಗಿ ಬಹಿರಂಗ ಚರ್ಚೆಗೆ ಬನ್ನಿ,ನಾನು ಏನು ಅಭಿವೃಧ್ಧಿ ಮಾಡಿದ್ದೇನೆ ಎಂದು ಹೇಳುತ್ತೇನೆ,ಹಿಂದೆ ಶಾಸಕರಾಗಿದ್ದವರು ಏನು ಮಾಡಿದ್ದಾರೆ ಎನ್ನುವುದನ್ನು ನೀವು ಕೂಡ ಹೇಳಬನ್ನಿ ಎಂದರು.ಇಂದು ಸೇರಿರುವ ಈ ಜನಸ್ತೋಮ ಸಾಕ್ಷಿಯಾಗಿ ರಾಜುಗೌಡ ಏನು ಕೆಲಸ ಮಾಡಿದ್ದಾನೆ ಎನ್ನುವುದಕ್ಕೆ, ತಾವೆಲ್ಲರು ಒಬ್ಬೊಬ್ಬರು ನಾಲ್ಕು ಹಾಕಿಸಿದರೆ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕೊಪ್ಪಳದ ವಿ.ಪ ಸದಸ್ಯೆ ಹೆಮಲತಾ ನಾಯಕ,ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ,ರಾಜುಗೌಡ ಒಬ್ಬ ಉತ್ಸಾಹಿ ಯುವಕ ಅವರು ಶಾಸಕರಾಗಿ ಮಾಡಿದ ಕೆಲಸ ಕಣ್ಮುಂದೆ ಇದೆ,ನಾನು ಕೂಡ ಇದೇ ಸುರಪುರದ ಹೆಣ್ಣುಮಗಳು ಇಲ್ಲಿ ಕುಡಿಯುವ ನೀರಿನ ತೊಂದರೆ ಎಷ್ಟಿತ್ತು ಎನ್ನುವುದು ಬಲ್ಲೆ,ಆದರೆ ಈಗ ದಿನವಿಡೀ ನೀರು ಬರುತ್ತಿದೆ,ಅದಕ್ಕೆ ರಾಜುಗೌಡ ಕಾರಣ ಎಂದರು.ಅಲ್ಲದೆ ಈಬಾರಿ ರಾಜುಗೌಡರನ್ನು ತಾವೆಲ್ಲರು ಸೇರಿ ಗೆಲ್ಲಿಸಿದರೆ ಮುಂಬರುವ ದಿನಗಳಲ್ಲಿ ಅವರು ಉಪ ಮುಖ್ಯಮಂತ್ರಿ ಆಗುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡ ವೇಣುಗೋಪಾಲ ನಾಯಕ ಜೇವರ್ಗಿ ಮಾತನಾಡಿ,ನರೇಂದ್ರ ಮೋದಿಯವರು,ಯಡಿಯೂರಪ್ಪನವರು ಮನಸ್ಸು ಮಾಡಿದರೆ ರಾಜುಗೌಡ ಮುಖ್ಯಮಂತ್ರಿಯೂ ಆಗುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ರೇಣುಕಾಚಾರ್ಯ ಕಲಬುರ್ಗಿ,ರಾಜಾ ಹನುಮಪ್ಪ ನಾಯಕ,ಯಲ್ಲಪ್ಪ ಕುರಕುಂದಿ,ಡಾ:ಸುರೇಶ ಸಜ್ಜನ್ ಮಾತನಾಡಿದರು.ನಗರಸಭೆ ಮುಂಭಾಗ ದಿಂದ ತಹಸಿಲ್ದಾರ್ ಕಚೇರಿ ಬಳಿಯ ವರೆಗೆ ಮೆರವಣಿಗೆ ನಡೆಸಿ ನಂತರ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ.ಎಸ್.ಮ್ಯಾಕ್ಸ್ ಮಾಲೀಕ ಎಸ್.ಪಿ ದಯಾನಂದ,ಬಸನಗೌಡ ಯಡಿಯಾಪೂರ,ಹಣಮಂತ ನಾಯಕ ಬಬ್ಲೂಗೌಡ,ಮಣಿಕಂಠ ನಾಯಕ,ಟಿ.ಎನ್ ಭೀಮು ನಾಯಕ,ಸಲೀಂ ವರ್ತಿ,ಭೀಮಾಶಂಕರ ಬಿಲ್ಲವ್,ಸಂಗಣ್ಣ ವೈಲಿ,ವೇಣುಮಾಧವ ನಾಯಕ,ಮೇಲಪ್ಪ ಗುಳಗಿ ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಹಿಂದಿನ ಚುನಾವಣೆಯಲ್ಲಿ ಎದುರಾಳಿ ಇದ್ದರು ಈಗ ಅವರಿಲ್ಲ ಸ್ವರ್ಗದಲ್ಲಿದ್ದಾರೆ,ಹಾಗಾಗಿ ಈಗ ಅವರ ಬಗ್ಗೆ ನಾನು ಮಾತನಾಡುವುದಿಲ್ಲ,ನನ್ನ ಅಭಿವೃಧ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿ ಮತ ಬೇಡುವೆ.- ರಾಜುಗೌಡ ಬಿಜೆಪಿ ಅಭ್ಯಥಿ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…