ಬಿಸಿ ಬಿಸಿ ಸುದ್ದಿ

ಹಿಂದುಳಿದ ಬಡ ಕಾರ್ಮಿಕರ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವಂತಾಗಲಿ

ಶಹಾಬಾದ:ಹಿಂದುಳಿದ ಫರ್ಸಿಯ ನಾಡಿನಲ್ಲಿ ಬಡ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶದ ಮಕ್ಕಳಿಗೆ ಶಿಕ್ಷಣ ಸಂಸ್ಥೆಯನ್ನು ತೆರೆಯುವುದರ ಮೂಲಕ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಮೂಲಕ ಅಕ್ಷರ ಜ್ಞಾನ ನೀಡುತ್ತಿರುವುದು ನಿಜಕ್ಕೂ ದಾಸೋಹದ ಕೆಲಸವಾಗಿದೆ ಎಂದು ತಹಸೀಲ್ದಾರ ಮಲಶೆಟ್ಟಿ ಚಿದ್ರಿ ಹೇಳಿದರು.

ಅವರು ನಗರದ ಹೊನಗುಂಟಾ ರಸ್ತೆಯಲ್ಲಿರುವ ಲೊಂಬಿನಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ರವರ ಪ್ರಜ್ಞಾ ಪಬ್ಲಿಕ್ ಇಂಗ್ಲೀμï ಮಾಧ್ಯಮ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಒಳ್ಳೆಯ ನಾಗರಿಕರನ್ನಾಗಿ ಮಾಡುವ ಹೊಣೆಗಾರಿಕೆಯನ್ನು ನಿರ್ವಹಿಸಬೇಕೆಂದು ಹೇಳಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ಅಂಬೇಡ್ಕರ್ ಕನಸಿನಂತೆ ಶಿಕ್ಷಣ, ಸಂಘಟನೆ, ಹೋರಾಟದಲ್ಲೊಂದಾದ ಶಿಕ್ಷಣಕ್ಕೆ ಬಹಳ ಮಹತ್ವ ಸ್ಥಾನ ಪಡೆದಿದೆ,ಶಿಕ್ಷಣ ಒಂದು ಬಲವಾದ ಅಸ್ತ್ರ.ಅದನ್ನು ಪಡೆದಿದ್ದೆ ಆದರೆ ಜೀವನದಲ್ಲಿ ಸಾಧಿಸಲಾಗದ್ದು ಸಾಧಿಸಬಹುದು.ಅದಕ್ಕೆ ಅಂಬೇಡ್ಕರ್ ಅವರೇ ಸಾಕ್ಷಿ.ತಾಲೂಕಿನಲ್ಲಿ ಒಳ್ಳೆಯ ಆಂಗ್ಲ ಮಾಧ್ಯಮ ಶಾಲೆಯ ಕೊರತೆಗಳು ಕಾಣುತ್ತಿವೆ.ಕೆಲವು ಶಾಲೆಗಳಲ್ಲಿ ಬಡಜನರು ವಿದ್ಯಾಭ್ಯಾಸ ಮಾಡುವಂತಿಲ್ಲ. ಕಾರಣ ಅವರ ಶುಲ್ಕ ಇಲ್ಲಿನ ಬಡ ಜನರು ಭರಿಸುವಂತಿಲ್ಲ.ಪಿ.ಎಸ್.ಮೇತ್ರೆ ಹಾಗೂ ಅವರ ಧರ್ಮಪತ್ನಿ ಒಳ್ಳೆಯ ಶಿಕ್ಷಕರಾಗಿದ್ದು, ಈ ಶಾಲೆ ಮಕ್ಕಳಲ್ಲಿ ಆತ್ಮವಿಶ್ವಾಸ ನೀಡುವ ಮೂಲಕ ಯಶಸ್ವಿಯಾಗಿ ಮುಂದೆ ಸಾಗಲಿ ಎಂದು ಹಾರೈಸುವೆ ಎಂದರು.

ನಗರಸಭೆಯ ಪೌರಾಯುಕ್ತ ಡಾ.ಕೆ ಗುರುಲಿಂಗಪ್ಪ ಮಾತನಾಡಿ, ಸಂಸ್ಥೆ ಬೆಳೆಯಬೇಕಾದರೆ ಅಲ್ಲಿನ ಶಿಕ್ಷಕರ ಕಾರ್ಯದಕ್ಷತೆ, ಪ್ರಾಮಾಣಿಕತೆ, ಮಕ್ಕಳ ಪ್ರತಿ ತುಂಬಿರಬೇಕು.ಆ ನಿಟ್ಟಿನಲ್ಲಿ ಸಂಸ್ಥೆ ಸಂಸ್ಥಾಪಕರು ಒಂದು ದಶಕಗಳ ಕಾಲ ಶಿಕ್ಷಣ ರಂಗದಲ್ಲಿ ಕೆಲಸ ಮಾಡಿದ ಅನುಭವವಿದೆ.ಅದನ್ನು ಸರಿಯಾಗಿ ನಿರ್ಔಹಿಸಕೊಂಡು ಹೋಗಬೇಕೆಂದು ತಿಳಿಸಿದರು.

ಮುಖಂಡರಾದ ಮಲ್ಲೇಶಿ ಸಜ್ಜನ್, ಸಿಪಿಐ ನಟರಾಜ ಲಾಡೆ ಮಾತಾಡಿದರು. ವೇದಿಕೆ ಮೇಲೆ ಶಿವಪುತ್ರ ಕರಣಿಕ, ಸತ್ಯನಾರಾಯಣ ವಿಶ್ವಕರ್ಮ, ಹಾಜಪ್ಪ ಬಿರಾಳ, ಗಿರಿಮಲ್ಲಪ್ಪ ವಳಸಂಗ, ಪರಶುರಾಮ ಮತ್ತಗಿಕರ್, ಶಿವಜಾತ ಕೊರಬಾ, ಶಾಂತಾಬಾಯಿ ಕಾಶಿನಾಥ ಪಂಚಾಳ, ಮಲ್ಲಿಕಾರ್ಜುನ ಕಟ್ಟಿ, ಶಿವಶಂಕರ ಹಿರೇಮಠ ಉಪಸ್ಥಿತರಿದ್ದರು. ಅಧ್ಯಕ್ಷತೆ ಸುರೇಖಾ ಮೇತ್ರೆ ವಹಿಸಿದ್ದರು, ಪಿ.ಎಸ್ ಮೇತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

18 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago