ಬಿಸಿ ಬಿಸಿ ಸುದ್ದಿ

ಕಲ್ಯಾಣ ಕರ್ನಾಟಕ ಎನ್ನಲು ಮನಸ್ಸು ಒಪ್ಪುತ್ತಿಲ್ಲ-ವೇಣುಗೋಪಾಲ ಜೇವರ್ಗಿ ಅಭಿಮತ

ಸುರಪುರ: ತಾಲ್ಲೂಕು ಆಡಳಿತದಿಂದ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಡೆಸಲಾಯಿತು. ಸರ್ದಾರ ವಲ್ಲಭಬಾಯಿ ಪಟೇಲ್ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಮಾತನಾಡಿ,ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರು ನಮ್ಮ ಭಾಗಕ್ಕೆ ಸ್ವಾತಂತ್ರ್ಯ ಸಿಗದಿದ್ದಾಗ,ಅಂದಿನ ಗೃಹಮಂತ್ರಿಗಳಾಗಿದ್ದ ಸರ್ದಾರ ವಲ್ಲಭಬಾಅಯಿ ಪಟೇಲರ ದಿಟ್ಟ ನಿರ್ಧಾರದಿಂದ ನಾವೆಲ್ಲ ಇಂದು ಸ್ವತಂತ್ರರಾಗಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಾರಾಗಿ ಭಾಗವಹಿಸಿದ್ದ ವೇಣುಗೋಪಾಲ ಜೇವರ್ಗಿ ಮಾತನಾಡಿ,ಹಿಂದೆ ಹೈದರಾಬಾದ ಕರ್ನಾಟಕ ಎಂದು ಕರೆಯಲಾಗುತ್ತಿತ್ತು,ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣಗೊಳಿಸಿದ್ದಾರೆ.ಆದರೆ ನನಗೆ ಕಲ್ಯಾಣ ಕರ್ನಾಟಕ ಎಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ ಇದನ್ನು ಸುರಪುರ ಕರ್ನಾಟಕ ಎಂದು ಕರೆಯುವುದು ಸೂಕ್ತವಾಗಿದೆ.ಆದರೆ ಸರಕಾರದ ನಿರ್ಧಾರವನ್ನು ಎಲ್ಲರು ಒಪ್ಪಲೆ ಬೇಕಿದೆ ಎಂದರು. ಬೀದರಿನಿಂದ ಕೊಪ್ಪಳದವರೆಗೆ ಸುರಪುರ ಅರಸರ ಆಳ್ವಿಕೆಯಿತ್ತು,ಅಲ್ಲದೆ ದೇಶವನ್ನೆ ಜಯಿಸಿದ್ದ ಔರಂಗಜೇಬನನ್ನು ಸೋಲಿಸಿದವರು ಸುರಪುರ ಅರಸು ಆದ್ದರಿಂದ ಇದು ಸುರಪುರ ಕರ್ನಾಟಕವಾಗಬೇಕಿತ್ತು.ರಾಜಾ ಪಿಡ್ಡನಾಯಕರು ಶಾಸಕರಾಗಿದ್ದಾಗ ಅವರನ್ನು ಅಂದಿನ ಮುಖ್ಯಮಂತ್ರಿಗಳು ಸಚಿವರಾಗುವಂತೆ ತಿಳಿಸಿದಾಗ ರಾಜಾ ಪಿಡ್ಡನಾಯಕರು ನಾನು ರಾಜನಿದ್ದು ಮಂತ್ರಿಯಾಗಲಾರೆ ಎಂದು ತಿರಸ್ಕರಿಸಿದ್ದರು ಆದ್ದರಿಂದ ಇದು ಸುರಪುರ ಕರ್ನಾಟಕವಾಗಬೇಕಿತ್ತು.ಇನ್ನು ಹಿಂದೆ ದಕ್ಷಿಣ ಭಾರತದ ಎಲ್ಲಾ ರಾಜರು ಸೇರಿ ಸುರಪುರ ಅರಸ ನಾಲ್ವಡಿ ರಾಜಾ ವೆಂಕಟಪ್ಪ ನಾಯಕನನ್ನು ದಕ್ಷಿಣ ಭಾರತದ ಅರಸನಾಗುವಂತೆ ಕೊರಿದ್ದರು,ಇಂತಹ ಇತಿಹಾಸವಿರುವ ಈ ಭಾಗಕ್ಕೆ ಸುರಪುರ ಕರ್ನಾಟಕ ಎನ್ನುವುದು ಸೂಕ್ತವಾಗಿದೆ ಎಂದರು.

ಅನೇಕರು ಸರ್ದಾರ ವಲ್ಲಭಬಾಯಿಯವರನ್ನು ಮುಸ್ಲಿಂ ವಿರೋಧಿ ಎನ್ನುತ್ತಾರೆ.ಆದರೆ ಒಬ್ಬ ನಿಜಾಮನಿಂದ ಇಡೀ ಈ ಭಾಗದ ಜನತೆಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿ ಸ್ವಾತಂತ್ರ್ಯಗೊಳಿಸಿದ ಪಟೇಲರು ಹೇಗೆ ಮುಸ್ಲಿಮರ ವಿರೋಧಿಗಳಾಗುತ್ತಾರೆ ಎಂದು ಪ್ರಶ್ನಿಸಿದರಲ್ಲದೆ,ಇಲ್ಲಿ ಎಲ್ಲರು ಸಹೋದರತೆಯ ಸಾಮರಸ್ಯದಿಂದ ಬಾಳುತ್ತಿದ್ದಾರೆ ಅದಕ್ಕೆ ಪಟೇಲರು ಕಾರಣ ಆದ್ದರಿಂದ ಪಟೇಲರು ಮುಸ್ಲಿಮರ ವಿರೋಧಿಯಲ್ಲ,ಯಾರಿಗಾದರೂ ಪಟೇಲರ ವಿರೋಧಿಗಳೆನಿಸಿದರೆ ಅವರು ದೇಶ ವಿರೋಧಿಗಳು ಅಂತವರು ದೇಶದಲ್ಲಿರಲು ಲಾಯಕ್ಕಲ್ಲ ಬೇಕಾದ ಅವರಿಷ್ಟ ಬಂದಲ್ಲಿಗೆ ಹೋಗಬಹುದು ಎಂದರು.ಹಾಗು ನಮ್ಮಲ್ಲಿರುವ ಸರ್ದಾರ ಪಟೇಲರ ಮೂರ್ತಿ ಭಾರತದಲ್ಲಿಯೇ ಎರಡಿವೆ,ಒಂದು ಕಲ್ಕತ್ತಾದಲ್ಲಿ ಇನ್ನೊಂದು ಸುರಪುರದಲ್ಲಿ ಹಾಗಾಗಿ ಇಂತಹ ಭವ್ಯವಾದ ಮೂರ್ತಿ ಆವರಣ ಉದ್ಯಾನವನಗೊಳಿಸಬೇಕು ಇದಕ್ಕೆ ಶಾಸಕರು ಅನುದಾನ ನೀಡುವುದಾಗಿ ತಿಳಿಸಿದ್ದಾರೆ.ಹಿಂದೆ ಇದನ್ನು ಪಬ್ಲಿಕ್ ಪಾರ್ಕ್ ಎನ್ನಲಾಗುತ್ತಿತ್ತು,ಪುನಃ ಇದನ್ನು ಮೊದಲಿನಂತೆ ಅಭೀವೃಧ್ಧಿಪಡಿಸುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿ,ಹಿಂದಿನವರ ತ್ಯಾಬ ಮತ್ತು ಬಲಿದಾನದ ಫಲವಾಗಿ ಇಂದು ನಾವೆಲ್ಲರು ಸ್ವತಂತ್ರರಾಗಿದ್ದೆವೆ.ಅವರ ನೆನಪನ್ನು ಸದಾ ನಮ್ಮಲ್ಲಿರಿಸಿಕೊಂಡು ಉತ್ತಮ ಸಮಾಜ ಮತ್ತು ದೇಶದ ಅಭೀವೃಧ್ಧಿಗೆ ಶ್ರಮಿಸೋಣ ಎಂದರು.

ವೇದಿಕೆ ಮೇಲೆ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ,ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಬಿಇಒ ನಾಗರತ್ನ ಓಲೆಕಾರ,ಸಸರಕಾರಿ ನೌಕರರ ಸಂಘದ ತಾಲ್ಲುಕಾಧ್ಯಕ್ಷ ಸಂಜೀವ ದರಬಾರಿ ಇದ್ದರು.ಕಾರ್ಯಕ್ರಮ ಆರಂಭಕ್ಕು ಮುನ್ನು ಶೀಪ್ರಭು ಕಾಲೇಜಿನ ಎನ್.ಸಿ.ಸಿ ತಂಡ ಹಾಗು ಇತರೆ ಶಾಲಾ ಮಕ್ಕಳು ನಗರದ ಮುಖ್ಯ ಬೀದಿಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಕುರಿತು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶ್ರೀಹರಿರಾವ್ ಆದವಾನಿ,ಬಾಲರಾಜ ಚಿನ್ನಾಕಾರ,ಭೀಮಣ್ಣ ಬೇವಿನಾಳ,ಉಸ್ತಾದ ವಜಾಹತ್ ಹುಸೇನ,ವೆಂಕಟೇಶ ಭಕ್ರಿ,ಯಲ್ಲಪ್ಪ ಹುಲಕಲ್ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳಾದ ಲಾಲಸಾಬ್,ಮೌನೇಶ ಕಂಬಾರ,ಆರ್.ಐ ಗುರುಬಸಪ್ಪ ಸೇರಿದಂತೆ ಅನೇಕ ಇಲಾಖೆಗಳ ಅನುಷ್ಟಾನಾಧಿಕಾರಿಗಳಿದ್ದರು.ಬಿಆರ್‌ಸಿ ಹಣಮಂತ್ರಾಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago