ಬಿಸಿ ಬಿಸಿ ಸುದ್ದಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು; ಶಿವರಾಜ ಅಂಡಗಿ

ಕಲಬುರಗಿ; ಪ್ರಜಾಪ್ರಭುತ್ವ ಬಲಪಡಿಸಲು ದೇಶದ ಪ್ರತಿಯೊಬ್ಬ ಮತದಾರರು ಬರುವ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಶಿವರಾಜ ಅಂಡಗಿ ಹೇಳಿದರು.

ನಗರದ ರಂಗಾಯಣ ಕಚೇರಿಯ ಎದುರುಗಡೆಯಿರುವ ಪ್ರಶಾಂತ ನಗರದಲ್ಲಿ ರಾಜಶೇಖರ ಐನಾಪೂರ ಅವರು ನೂತನವಾಗಿ ನಿರ್ಮಿಸಿದ ಮನೆ ಗೃಹಪ್ರವೇಶಕ್ಕೆ ಬಂದ ನೂರಾರು ಸಾರ್ವಜನಿಕರಿಗೆ ಟೇಂಗಳಿ ಪ್ರತಿóಷ್ಠಾನ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಕುರಿತು ಮಾತನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳು ಹೇಗೆಂದರೆ ಅವರು ಚಲಾಯಿಸುವ ಪ್ರತಿಯೊಂದು ಮತಕ್ಕೆ ಅದರದೇ ಆದ ಮೌಲ್ಯವಿದೆ. ಹಾಗಾಗಿ ನಾವೂ ನೀವೆಲ್ಲರು ಬರುವ ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಇನ್ನೂ ಗಟ್ಟಿಗೊಳಿಸಬೇಕೆಂದು ಹೇಳುತ್ತಾ ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮಾತನಾಡಿದರು.

ಸದರಿ ಅಭಿಯಾನದಲ್ಲಿ ಬಾಬುರಾವ ಐನಾಪೂರ, ರಾಜಶೇಖರ ಐನಾಪೂರ, ರಾಜಕುಮಾರ ಐನಾಪೂರ, ವಿನಾಯಕ, ಮೀನಾಕ್ಷಿ, ವೀರಮಣಿ, ಲಕ್ಷ್ಮೀ, ಅರುಣ, ಸಂತೋಷ, ಸಂಗಮೇಶ, ಗುಂಡಾಚಾರ್ಯ, ಮೋತಿರಾಮ, ವೆಂಕಟರೆಡ್ಡಿ, ತುಳಸಿರಾಮ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ಮಹಾತ್ಮರ ಬದುಕು, ಬರಹ ನಮ್ಮದಾಗಬೇಕು: ಸುರೇಶ ಬಡಿಗೇರ

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ, ಅವರ ಬದುಕು ಬೋಧನೆಯನ್ನು ಅನುಸರಿಸಬೇಕು ಎಂದು ಕನ್ನಡ ಅಭಿವೃದ್ಧಿ…

11 hours ago

ಸಿದ್ದಪ್ಪ ಹೊಸಮನಿಗೆ ಪಿಎಚ್.ಡಿ

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಸಿದ್ದಪ್ಪ ಹೊಸಮನಿ ಅವರು " ಡಾ. ಕೆ. ಆರ್.…

11 hours ago

ಕಲಬುರಗಿ; ಜಿಲ್ಲಾ ಮಾಸ್ಟರ್ ಟ್ರೇನರ್ಸ್ ಗಳಿಗೆ ತರಬೇತಿ

ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಗೆ…

12 hours ago

ಸುರಪುರ:ವಾಸವಿ ಜಯಂತಿ ಆಚರಣೆ ಅದ್ಧೂರಿ ಮೆರವಣಿಗೆ

ಸುರಪುರ: ನಗರದಲ್ಲಿ ವಾಸವಿ ಜಯಂತಿ ಆಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.ಮೊದಲಿಗೆ ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕನ್ನಿಕಾ…

12 hours ago

ಕೃಷಿ ಅಧಿಕಾರಿ ಬೀಜ ಗೊಬ್ಬರ ಮಾರಾಟ ಅಂಗಡಿಗೆ ಭೇಡಿ;ಬಿತ್ತನೆ ಬೀಜ ಪರಿಶೀಲನೆ

ಸುರಪುರ: ತಾಲೂಕಿನಲ್ಲಿ ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ಕೃಷಿ ಬೀಜ ಗೊಬ್ಬರ ಮಾರಾಟ ಅಂಗಡಿಗಳಿಗೆ ತಾಲೂಕು ಸಹಾಯಕ ಕೃಷಿ…

12 hours ago

ಶ್ರೀ ವಾಸವಿ ಜಯಂತಿ ನಿಮಿತ್ತ ವಾಸವಿ ಮಾತೆಗೆ ತೊಟ್ಟಿಲ ಸೇವೆ

ಕಲಬುರಗಿ: ನಗರದ ಪುಟಾಣಿ ಗಲ್ಲಿಯಲ್ಲಿ ಶ್ರೀ ನಗರೇಶ್ವರ ದೇವ ಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜ ವತಿಯಿಂದ ಶ್ರೀ ವಾಸವಿ ಜಯಂತಿ…

12 hours ago