ಬಿಸಿ ಬಿಸಿ ಸುದ್ದಿ

ಕಲಬುರಗಿಯಲ್ಲಿ ಮತದಾರರ ಸಂಖ್ಯೆ ಹೆಚ್ಚಳ: ಏ.10ರ ವರೆಗೆ 36,360 ಜನ ಹೊಸದಾಗಿ ಸೇರ್ಪಡೆ | ಚುನಾವಣಾಧಿಕಾರಿ

ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮೇ 7 ರಂದು ಮತದಾನ ನಡೆಯಲಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನುಸಾರ ಕಳೆದ ದಿ.10-04-2024ರ ವರೆಗೆ ಪರಿಷ್ಕರಣೆಯಂತೆ ಜಿಲ್ಲೆಯಾದ್ಯಂತ 36,360 ಜನ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕಳೆದ ಜನವರಿ 22ಕ್ಕೆ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿ ಪ್ರಕಾರ 11,43,159 ಪುರುಷ, 11,25,463 ಮಹಿಳೆ ಹಾಗೂ 322 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 22,68,944 ಮತದಾರರಿದ್ದರು. ಲೋಕಸಭಾ ಚುನಾವಣೆ ಘೋಷಣೆ ಜಾರಿಯಾದ ನಂತರವು ಸಹ ಏಪ್ರಿಲ್ 10ರ ವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಿದ ಪರಿಣಾಮ 17,557 ಪುರುಷ, 18,793 ಮಹಿಳೆ ಹಾಗೂ 10 ಜನ ಇತರೆ ಸೇರಿ ಒಟ್ಟು 36,360 ಜನ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದು, ಬರುವ ಲೋಕಸಭೆ ಚುನಾವಣೆ ಮತದಾನಕ್ಕೆ ಇವರೆಲ್ಲ ಅರ್ಹತೆ ಪಡೆದಿದ್ದಾರೆ ಎಂದರು.

ಏಪ್ರಿಲ್ 10ರ ಅಂತಿಮ ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,21,355 ಪುರುಷ, 1,15,917 ಮಹಿಳೆ, ಇತರೆ 20 ಸೇರಿ 2,37,292, ಜೇವರ್ಗಿಯಲ್ಲಿ 1,25,373 ಪುರುಷ, 1,22,392 ಮಹಿಳೆ, ಇತರೆ 24 ಸೇರಿ 2,47,789, ಚಿತ್ತಾಪೂರದಲ್ಲಿ 1,23,063 ಪುರುಷ, 1,23,910 ಮಹಿಳೆ, ಇತರೆ 16 ಸೇರಿ 2,46,989, ಸೇಡಂನಲ್ಲಿ 1,14,179 ಪುರುಷ, 1,17,678 ಮಹಿಳೆ, ಇತರೆ 32 ಸೇರಿ 2,31,889, ಚಿಂಚೋಳಿಯಲ್ಲ್ಲಿ 1,06,910 ಪುರುಷ, 1,03,791 ಮಹಿಳೆ, ಇತರೆ 15 ಸೇರಿ 2,10,716, ಗುಲಬರ್ಗಾ ಗ್ರಾಮೀಣದಲ್ಲಿ 1,37,031 ಪುರುಷ, 1,31,585 ಮಹಿಳೆ, ಇತರೆ 35 ಸೇರಿ 2,68,651, ಗುಲಬರ್ಗಾ ದಕ್ಷಿಣದಲ್ಲಿ 1,43,775 ಪುರುಷ, 1,47,283 ಮಹಿಳೆ, ಇತರೆ 55 ಸೇರಿ 2,91,113, ಗುಲಬರ್ಗಾ ಉತ್ತರದಲ್ಲಿ 1,58,358 ಪುರುಷ, 1,60,810 ಮಹಿಳೆ, ಇತರೆ 94 ಸೇರಿ 3,19,262 ಹಾಗೂ ಆಳಂದನಲ್ಲಿ 1,30,672 ಪುರುಷ, 1,20,890 ಮಹಿಳೆ, ಇತರೆ 41 ಸೇರಿ 2,51,603 ಜನ ಮತದಾರರ ಪಟ್ಟಿಯಲ್ಲಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟಾರೆ 11,60,716 ಪುರುಷ, 11,44,256 ಮಹಿಳೆ, ಇತರೆ 332 ಸೇರಿ 23,05,304 ಜನ ಜಿಲ್ಲೆಯ ಮತದಾರರಾಗಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಕ್ಷೇತ್ರದಲ್ಲಿ 33,184 ಮತದಾರರು ಹೆಚ್ಚಳ: ಇನ್ನು ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಅಫಜಲಪೂರನಲ್ಲಿ 1,21,355 ಪುರುಷ, 1,15,917 ಮಹಿಳೆ, ಇತರೆ 20 ಸೇರಿ 2,37,292, ಜೇವರ್ಗಿಯಲ್ಲಿ 1,25,373 ಪುರುಷ, 1,22,392 ಮಹಿಳೆ, ಇತರೆ 24 ಸೇರಿ 2,47,789, ಗುರುಮಠಕಲ್‍ದಲ್ಲಿ 1,26,825 ಪುರುಷ, 1,28,386 ಮಹಿಳೆ, ಇತರೆ 6 ಸೇರಿ 2,55,217, ಚಿತ್ತಾಪೂರದಲ್ಲಿ 1,23,063 ಪುರುಷ, 1,23,910 ಮಹಿಳೆ, ಇತರೆ 16 ಸೇರಿ 2,46,989, ಸೇಡಂನಲ್ಲಿ 1,14,179 ಪುರುಷ, 1,17,678 ಮಹಿಳೆ, ಇತರೆ 32 ಸೇರಿ 2,31,889, ಗುಲಬರ್ಗಾ ಗ್ರಾಮೀಣದಲ್ಲಿ 1,37,031 ಪುರುಷ, 1,31,585 ಮಹಿಳೆ, ಇತರೆ 35 ಸೇರಿ 2,68,651, ಗುಲಬರ್ಗಾ ದಕ್ಷಿಣದಲ್ಲಿ 1,43,775 ಪುರುಷ, 1,47,283 ಮಹಿಳೆ, ಇತರೆ 55 ಸೇರಿ 2,91,113 ಹಾಗೂ ಗುಲಬರ್ಗಾ ಉತ್ತರದಲ್ಲಿ 1,58,358 ಪುರುಷ, 1,60,810 ಮಹಿಳೆ, ಇತರೆ 94 ಸೇರಿ 3,19,262 ಜನ ಮತದಾರರ ಪಟ್ಟಿಯಲ್ಲಿದ್ದಾರೆ. ಕ್ಷೇತ್ರದಾದ್ಯಂತ ಒಟ್ಟಾರೆ 10,49,959 ಪುರುಷ, 10,47,961 ಮಹಿಳೆ, ಇತರೆ 282 ಸೇರಿ 20,98,202 ಜನ ಮತದಾರರಿದ್ದಾರೆ. ಇಲ್ಲಿಯೂ ಸಹ ಏಪ್ರಿಲ್ 10ರ ವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಿದ ಪರಿಣಾಮ 33,184 ಜನ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದ್ದಾರೆ.

2,378 ಮತಗಟ್ಟೆಗಳು: ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದಲ್ಲಿ 705 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,673 ಸೇರಿ ಒಟ್ಟು 2,378 ಮತಗಟ್ಟೆ ಗುರುತಿಸಲಾಗಿದೆ. ಅದೇ ರೀತಿ ಗಲಬರ್ಗಾ ಲೋಕಸಭಾ ಕ್ಷೇತ್ರ ನೋಡಿದಾಗ 2,166 ಮತಗಟ್ಟೆಗಳು ಇವೆ ಎಂದು ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ವಿವರಣೆ ನೀಡಿದ್ದಾರೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

5 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

5 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

7 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

7 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

7 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

8 hours ago