ಬಿಸಿ ಬಿಸಿ ಸುದ್ದಿ

ಬ್ರಾಹ್ಮಣರ ಮೀಸಲಾತಿ ಜಾರಿಗೆ ಕಂಕಣ ಬದ್ಧ: ಡಾ.ಉಮೇಶ್ ಜಾಧವ್

ಕಲಬುರಗಿ: ಆರ್ಥಿಕವಾಗಿ ಹಿಂದುಳಿದ ಸಮಾಜಗಳಿಗೆ ಕೇಂದ್ರ ಸರಕಾರವು ಘೋಷಣೆ ಮಾಡಿದ ಮೀಸಲಾತಿಯಡಿ ಬ್ರಾಹ್ಮಣರು ಈ ಹಕ್ಕು ಪಡೆಯಲು ಕರ್ನಾಟಕದಲ್ಲಿ ವಂಚಿತವಾಗಿರುವುದಕ್ಕೆ ಕಾಂಗ್ರೆಸ್ ನೇರ ಹೊಣೆಯಾಗಿದ್ದು ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವಂತೆ ಕಂಕಣಬದ್ಧನಾಗಿ ಕೆಲಸ ಮಾಡುವೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಭರವಸೆ ನೀಡಿದ್ದಾರೆ.

ಕಲ್ಬುರ್ಗಿಯ ಸಂಗಮೇಶ್ವರ ಸಭಾಭವನದಲ್ಲಿ ಶನಿವಾರ ನಡೆದ ವಿಪ್ರ ಸಮಾಜದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಕೇಂದ್ರ ಸರ್ಕಾರವು ದೇಶದಲ್ಲಿರುವ ಆರ್ಥಿಕ ಹಿಂದುಳಿದವರಿಗಾಗಿ ಜಾರಿ ಮಾಡಿದ ಮೀಸಲಾತಿಯಡಿ ಬ್ರಾಹ್ಮಣರು ಒಳಪಡುತ್ತಿದ್ದು ಬೊಮ್ಮಾಯಿ ಸರಕಾರವು ಈ ಮೀಸಲಾತಿಯನ್ನು ಜಾರಿ ಮಾಡಲು ಕ್ರಮಗಳನ್ನು ಕೈಗೊಳ್ಳುವಷ್ಟರಲ್ಲಿ ಸರಕಾರ ಬದಲಾವಣೆಗೊಂಡು ತಾಂತ್ರಿಕ ಅಡಚಣೆಗಳಿಂದಾಗಿ ನಿಲುಗಡೆಯಾಗಿತ್ತು. ಆದರೆ ಕಾಂಗ್ರೆಸ್ ಸರಕಾರವು ಬ್ರಾಹ್ಮಣರ ಬಗ್ಗೆ ಚುನಾವಣೆ ಬಂದಾಗ ಮಾತ್ರ ಸಭೆಗಳನ್ನು ನಡೆಸಿ ಓಟು ಗಿಟ್ಟಿಸಲು ಪ್ರಯತ್ನಿಸುತ್ತಿದ್ದು ಸಮುದಾಯಕ್ಕೆ ನೀಡಬೇಕಾದ ಮೀಸಲಾತಿಯ ಬಗ್ಗೆ ಚಕಾರವೆತ್ತುತ್ತಿಲ್ಲ. ಮೀಸಲಾತಿ ಜಾರಿ ಬಗ್ಗೆ ವಿಪ್ರ ಸಮಾಜದ ಪ್ರಮುಖರ ಜೊತೆ ಚುನಾವಣೆ ಮುಗಿದ ಕೂಡಲೇ ಚರ್ಚಿಸಿ ಅದಕ್ಕೆ ಬೇಕಾದ ಕಾನೂನು ಕ್ರಮಗಳನ್ನು ಕ್ರೋಢೀಕರಿಸಿ ಬ್ರಾಹ್ಮಣ ಸಮಾಜಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರಲ್ಲದೆ ಈ ಸಮಾಜಕ್ಕೆ ಕೂದಲು ಕೊಂಕು ಆಗದ ಹಾಗೆ ರಕ್ಷಣೆ ಮಾಡುವ ದೊಡ್ಡ ಜವಾಬ್ದಾರಿ ಲೋಕಸಭಾ ಸದಸ್ಯನಾಗಿ ನಾನು ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಭಾರತೀಯ ಜನತಾ ಪಕ್ಷದ ಬೆಳವಣಿಗೆಯಲ್ಲಿ ಬ್ರಾಹ್ಮಣರ ಕೊಡುಗೆ ಅಪಾರವಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕರ್ನಾಟಕದ ಪ್ರಹ್ಲಾದ ಜೋಶಿ ಅಂತವರ ಮಾರ್ಗದರ್ಶನವಿದೆ. ಈ ಸಮುದಾಯದ ಅನಂತಕುಮಾರ್ ಹೆಗಡೆ, ತೇಜಸ್ವಿನಿ ಅನಂತ್ ಕುಮಾರ್ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನನ್ನ ತಂದೆಯವರಾದ ಗೋಪಾಲ್ ಜಾಧವ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ರಮಾನಂದ ತೀರ್ಥರು ವಿಜಯ ವಿದ್ಯಾಲಯದಲ್ಲಿ ಬಂಜಾರ ಸಮುದಾಯಕ್ಕಾಗಿ ನಿವೇಶನವನ್ನು ಕೊಟ್ಟು ಲಂಬಾಣಿಗರ ಹಿತಚಿಂತಕರಾಗಿದ್ದರು.

ಬ್ರಾಹ್ಮಣರಲ್ಲಿ ಯಾವುದೇ ಸ್ವಾರ್ಥಪರ ಚಿಂತನೆ ಇಲ್ಲದೆ ದೇಶದ ಅಖಂಡತೆ ಸಮಗ್ರತೆ ಸನಾತನ ಧರ್ಮದ ರಕ್ಷಣೆ ಪ್ರಮುಖ ಅಜೆಂಡಾ ಆಗಿದೆ. ಆದರೆ ಕಾಂಗ್ರೆಸ್ ಮತ್ತು ಅವರ ಮೈತ್ರಿಕೂಟದ ಪಕ್ಷದವರು ಸನಾತನ ಹಿಂದೂ ಧರ್ಮವನ್ನು ಅವಹೇಳನ ಮಾಡಿ ಹಿಂದೂ ಸಂಸ್ಕೃತಿ ಪರಂಪರೆಯನ್ನು ನಾಶ ಮಾಡಲು ಹೊರಟಿದ್ದಾರೆ.

ಕಲ್ಬುರ್ಗಿಯ ಕಾಂಗ್ರೆಸ್ ನಾಯಕರು ಮಳಖೇಡದ ಟೀ ಕಾಚಾರ್ಯರ ಬಗ್ಗೆ ಅವಹೇಳನ ಮಾಡಿ ಮಾತನಾಡಿದಾಗ ಸಭೆಯಿಂದ ಬಹಿಷ್ಕಾರ ಕೂಡ ನಾನು ಮಾಡಿರುವುದಾಗಿ ಹೇಳಿದರು.ಸನ್ನತಿಯ ಚಂದ್ರಲಾಂಬಾ ಕ್ಷೇತ್ರದ ಅಭಿವೃದ್ಧಿಗಾಗಿ ಬೊಮ್ಮಾಯಿ ಸರಕಾರ ನೀಡಿದ ವಿಶೇಷ ಅನುದಾನವನ್ನು ಕಾಂಗ್ರೆಸ್ ನವರು ರದ್ದು ಮಾಡಿದರು.

ದೇಗುಲದಲ್ಲಿ ತಡೆಗೋಡೆ ನಿರ್ಮಾಣ ಬೊಮ್ಮಾಯಿ ಸರಕಾರದ ನೆರವಿನ ಕಾರ್ಯಕ್ರಮವಾಗಿದೆ . ಕಾಂಗ್ರೆಸ್ ಯಾವತ್ತೂ ಬ್ರಾಹ್ಮಣರ ವಿರೋಧಿಯಾಗಿದೆ. ಕಾಂಗ್ರೆಸ್ ಕಾಲದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ಪಂಡಿತರನ್ನು ಹತ್ಯೆ ಮಾಡಿದ್ದು ಅಲ್ಲದೆ ಅಲ್ಲಿಂದ ವಲಸೆ ಹೋಗುವಂತೆ ಮಾಡಿದರೆ ಮೋದಿ ಸರ್ಕಾರವು ಕಾಶ್ಮೀರ ಪಂಡಿತರಿಗಾಗಿ ಮೀಸಲಾತಿಯನ್ನು ಇತ್ತೀಚೆಗಷ್ಟೇ ಜಾರಿ ಮಾಡಿತು. ಆದರೆ ಕಾಂಗ್ರೆಸ್ ಆಂಗ್ಲೋ ಇಂಡಿಯನ್ರಿಗೆ ಮೀಸಲು ಇಡುವುದರ ಬಗ್ಗೆ ಆಸಕ್ತಿಯನ್ನು ವಹಿಸಿದ್ದು ಕಲ್ಬುರ್ಗಿ ಲಕ್ಷ್ಮಿ ನಾರಾಯಣ ದೇವಸ್ಥಾನದ ಅಕ್ರಮ ತೆರವು ಸೇರಿದಂತೆ ಬ್ರಾಹ್ಮಣ ಸಮುದಾಯಕ್ಕೆ ಹೆಚ್ಚಿನ ನೆರವನ್ನು ದತ್ತಾತ್ರೇಯ ಪಾಟೀಲ್ರೆ ಊರು ಚಂದು ಪಾಟೀಲ್ ರಂತೆ ನಾಯಕರು ನೀಡಿ ಸಂರಕ್ಷಣೆ ಬಗಿಸಿದರು ಎಂದು ಹೇಳಿದರು.

ಈ ಸಮುದಾಯದ ಹಿತಚಿಂತಕ ಪಕ್ಷವಾದ ಬಿಜೆಪಿ ಗೆ ಬ್ರಾಹ್ಮಣರ ಆಶೀರ್ವಾದವಿದೆ .ಮೇ ಏಳರಂದು ಅತ್ಯಧಿಕ ಮತಗಳಿಂದ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ನಾಗಿ ಮಾಡಲು ವಿಪ್ರ ಸಮಾಜ ಕೈಜೋಡಿಸಬೇಕು ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಅಧ್ಯಕ್ಷರಾದ ದತ್ತಾತ್ರೇಯ ಪೂಜಾರಿ ಬ್ರಾಹ್ಮಣ ಸಮುದಾಯದ ಹಿರಿಯರಾದ ಗಂಟಿ ರಾಮಾಚಾರ್ಯ, ಕೃಷ್ಣಾಜಿ ಕುಲಕರ್ಣಿ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಶಶಿಲ್ ಜಿ ನಮೋಶಿ ಮಾಜಿ ಶಾಸಕರಾದ ದತ್ತಾತ್ರೇ ಪಾಟೀಲ್ ರೇವೂರು ದಯಾಘನ ಧಾರವಾಡಕರ್ ಅವಿನಾಶ್ ಕುಲಕರ್ಣಿ ಜಗದೀಶ್ ಹುನಗುಂದ ಮುರಳಿಧರ ಭಟ್ ಪೂಜಾರಿ ಪ್ರಹ್ಲಾದ ಬುರ್ಲಿ ವಾದಿರಾಜ ವ್ಯಾಸಮುದ್ರ, ಪ್ರೀತಂ ಪಾಟೀಲ್, ಉಮೇಶ್ ಪಾಟೀಲ್, ವೆಂಕಟೇಶ್ ಪಾಟೀಲ್, ಗುರುರಾಜ ಭರತ್ ನೂರ್ ಮತ್ತಿತರರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago