ಕಲಬುರಗಿ: ಸದ್ದಿಲ್ಲದೆ ಭಕ್ತರ ಮನದ ಮೈಲಿಗೆ ಕಳೆದು ಸಂಸ್ಕಾರ ಸಮಾಜ ನಿರ್ಮಿಸುತ್ತಿರುವ ರೇವಣಸಿದ್ದ ಶಿವಾಚಾರ್ಯರ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾದ, ಹಿರಿಯ ಸಾಹಿತಿ ಡಾ. ಸಿದ್ದರಾಮ ಹೊನಕಲ್ ಹೇಳಿದರು. ನಿನ್ನೆ ಕಲಬುರಗಿ ನಗರದ ಹೊರವಲಯದಲ್ಲಿರುವ ತಾಜ ಸುಲ್ತಾನಪುರ ಗ್ರಾಮದಲ್ಲಿ ಶ್ರೀ ಚಿನ್ನದ ಕಂತಿ ಚಿಕ್ಕವಿರೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ರೇವಣಸಿದ್ಧ ಶಿವಾಚಾರ್ಯರ
ಶಷ್ಟಿ ಪೂರ್ತಿ ಕಾರ್ಯಕ್ರಮದ ನಿಮಿತ್ಯ ಪ್ರವಚನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಹಿಂದಿನ ಕಾಲದಲ್ಲಿ ಕವಿಗಳಿಗೆ ಕಲಾವಿದರಿಗೆ ರಾಜ ಮಹಾರಾಜರು ಆಶ್ರಯ ನೀಡಿ ಬೆಳೆಸುತ್ತಿದ್ದರು, ಆದರೆ ಇಂದು ನಮ್ಮಂತಹ ಹಲವಾರು ಜನ ಕವಿಗಳಿಗೆ ಆಶ್ರಯ ನೀಡಿ ಆಶೀರ್ವಾದ ಮಾಡಿ ಬೆಳೆಸಿದ ಕೀರ್ತಿ ಪೂಜ್ಯರಾದ ರೇವಣಸಿದ್ದ ಶಿವಾಚಾರ್ಯರಿಗೆ ಸಲ್ಲುತ್ತದೆ. ಶ್ರೀಮಠದ ಕೆಳಗೆ ಆಸ್ತಿ ಅಂತಸ್ತು ಇರದಿದ್ದರೂ ಹೃದಯ ಶ್ರೀಮಂತಿಕೆ ಇರುವ ಭಕ್ತರೆ ಅವರಿಗೆ ಆಸ್ತಿಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಇಂತಹ ಆಧ್ಯಾತ್ಮಿಕ ಚಿಂತನೆಗಳು ಸರ್ವರ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾದ ಉದನೂರಿನ ಅಪ್ಪಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾದ ರಾಜಕುಮಾರ ಉದನೂರ ಮಾತನಾಡುತ್ತಾ ವಾಟ್ಸಪ್ಪ್, ಫೇಸ್ಬುಕ್, ಮೊಬೈಲಿನಲ್ಲಿಯೇ ಜೀವನ ಕಳೆಯುತ್ತಿರುವ ಯುವ ಜನಾಂಗ ಸಂಸ್ಕಾರವಿಲ್ಲದೆ ದುರಂತದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇಂದಿನ ಮಕ್ಕಳು ತಾಯಿ ತಂದೆಗೆ ಗೌರವ ನೀಡದೆ ಹಿರಿಯರ ಮಾತಿಗೆ ಬೆಲೆ ನೀಡದೆ ಅತಿ ಚಿಕ್ಕ ವಯಸ್ಸಿನಲ್ಲಿ ಅಪರಾಧ ಕ್ರಿಯೆಯಲ್ಲಿ ತೊಡಗಿ ಜೈಲು ಪಾಲಾಗುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಸರ್ವರನ್ನು ಒಂದು ಗುಡಿಸಿ ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುತ್ತಿರುವುದು ಚಿನ್ನದಕಂತಿ ಚಿಕ್ಕವರೇಶ್ವರ ಮಠ. ಸರ್ವಭಕ್ತರು ಕೂಡಿ ಪೂಜ್ಯರ “ಶಷ್ಟಿ ಪೂರ್ತಿ” ಸಮಾರಂಭ ಹಮ್ಮಿಕೊಂಡು ಯಾರಿಗೂ ಕೈಚಾಚದೆ ಸರಳತೆಯ ಸ್ವಾಮಿಗಳ ಸಾಲಿನಲ್ಲಿ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಕೂಡ ಒಬ್ಬರು. ಜೀವನದಲ್ಲಿ ಅವಮಾನ, ಅನುಮಾನ, ದಾಟಿದ ಮೇಲೆ ಸನ್ಮಾನ ಪ್ರಾರಂಭವಾಗುತ್ತದೆ. ಪೂಜ್ಯರು ಎಲ್ಲಾ ರೀತಿಯ ನೋವನ್ನು ಅನುಭವಿಸಿ ಈಗ ಸರ್ವ ಭಕ್ತರ ಮನದಲ್ಲಿ ದೈವ ಸ್ವರೂಪಿಯಾಗಿದ್ದಾರೆ ಎಂದು ಹೇಳಿದರು.
ವೇದಿಕೆಯ ಮೇಲೆ ಪೀಠಾಧಿಪತಿಗಳಾದ ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಅವರಾದ(ಬಿ) ಪೂಜ್ಯರಾದ ಮರಳಿಸಿದ್ದ ಶಿವಾಚಾರ್ಯರು, ಗಣಜಲಖೇಡ ಪೂಜ್ಯರಾದ ನಾಗೇಶ ಮುತ್ಯ, ನಾಗೇಂದ್ರಯ್ಯ ಮಠ, ಡಾ. ನಾಗವೇಣಿ ಪಾಟೀಲ, ಮಲ್ಲಮ್ಮ ಕಾಡ್ಲಾ, ಮಾಲಾ ಧಣ್ಣೂರ, ಅಂಬಾರಾಯ ಮಡ್ಡೆ ಕುರಿಕೋಟ, ಶ್ರೀಧರ ಪೂಜಾರಿ, ಚನ್ನವೀರ ಗಣಜಲಖೇಡ, ಆನಂದ ಸಿದ್ದಮಣಿ ಅಂಬಾರಾಯ ಕೋಣೆ, ನಾಗಲಿಂಗಯ್ಯ ಮಠಪತಿ ಇದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ನೂತನ ಸದಸ್ಯರಾದ ಬಿ ಎಚ್ ನೀರಗುಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಚಂದ್ರಕಲಾ ಬಿದರಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾದ ಸಿದ್ದರಾಮ ಹೊನಕಲ್ ಅವರಿಗೆ ಶ್ರೀಮಠದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…