ಹೈದರಾಬಾದ್ ಕರ್ನಾಟಕ

ಕಸಾಪ ಸಂಸ್ಥಾಪನಾ ದಿನಾಚರಣೆ: ಕನ್ನಡ ಬಳಸಿದಷ್ಟು ಉಳಿಯಲು ಸಾಧ್ಯ| ಟಿ.ವಿ. ಶಿವಾನಂದನ್

ಪುಸ್ತಕ ಪ್ರದರ್ಶನ:ಕಸಾಪ ಹಿರಿಯ ಸದಸ್ಯರಿಗೆ ಸತ್ಕಾರ

ಕಲಬುರಗಿ: ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಪರಂಪರೆ ಇದೆ. ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ನಿರಂತರ ಪ್ರಯತ್ನಿಸುತ್ತಾ ಬಂದಿದೆ. ಕನ್ನಡದ ಅಸ್ತಿತ್ವ ಹೇಗಿದೆ, ಕನ್ನಡ ಉಳಿಸಿಕೊಳ್ಳಲು ಹೋರಾಟ ಮಾಡುವ ಅನಿವಾರ್ಯತೆ ಯಾಕೆ ಬಂದಿದೆ ಎಂದು ಆತ್ಮಾವಲೋಕನ ಮಾಡುವುದು ಅಗತ್ಯವಿದೆ. ನೆರೆ ರಾಜ್ಯಗಳಾದ ತಮಿಳು ನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರಗಳ ರಾಜ್ಯಗಳಲ್ಲಿ ಮಾತೃಭಾಷೆಗಳಿಗೆ ಪ್ರಥಮಾದ್ಯತೆ ನೀಡುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಮಮಹತ್ವ ನೀಡುತ್ತಿಲ್ಲ. ಪ್ರತಿಯೊಬ್ಬರೂ ಕನ್ನಡ ಬಳಸಿದರೆ ಉಳಿಸಲು ಸಾಧ್ಯ ಇದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ನಗರದ ಕನ್ನಡ ಭವನದ ಆವರಣದಲ್ಲಿ ಜರುಗಿದ ಕಸಾಪ ದ 110 ನೇ ಸಂಸ್ಥಾಪನಾ ದಿನಾಚರಣೆಯ ವಿಶೇಷ ಮತ್ತು ವೈವಿದ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಆಕಾಶವಾಣಿ ಕೇಂದ್ರದ ವಿಶ್ರಾಂತ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಮಾತನಾಡಿ, ಭಾಷಾ ಕೀಳರಿಮೆಯಿಂದ ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಿರುವ ಕನ್ನಡಿಗರಿಂದ ಅಪಾಯವಿದೆ. ಕನ್ನಡವನ್ನು ನಿತ್ಯ ಬಳಕೆ ಮಾಡುವುದರಿಂದ ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದುವುದರಿಂದ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ. ಕನ್ನಡ ಶಾಲೆಗಳಲ್ಲಿ ಓದಿಸುವುದು ಹಾಗೂ ಕನ್ನಡ ಪರಿಸರವನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡು ಕರ್ನಾಟಕದಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಾಗತಿಕ ಒತ್ತಡದ ಜೀವನ ಶೈಲಿಯಲ್ಲಿ ಪರಭಾಷೆ ವ್ಯಾಮೋಹ ಇದ್ದರೂ ನಮ್ಮ ಮಾತೃ ಭಾಷೆ ಹೃದಯದ ಭಾಷೆಯನ್ನಾಗಿ ಬೆಳೆಸಬೇಕಾಗಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಉಳಿಸಿ ಬೆಳೆಸಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನೆಲ, ಜಲ ಭಾಷೆ ಸಂರಕ್ಷನೆಗಾಗಿ ನಿರಂತರ ಸೇವೆ ಮಾಡುತ್ತಿದೆ. ಕಲಬುರಗಿ ಜಿಲ್ಲೆಯನ್ನು ಸಾಂಸ್ಕøತಿಕ ಜಿಲ್ಲೆಯನ್ನಾಗಿ ಮಾಡುವ ಸಂಕಲ್ಪ ತೊಡಲಾಗಿದೆ ಎಂದರು.

ಎಸ್ ಎಸ್ ಎಲ್ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಸವಿತಾ ಗಿರಿ, ಗುಲಬರ್ಗ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿ ಡಾ. ಶೀಲಾದೇವಿ ಎಸ್ ಬಿರಾದಾರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ದರ್ಮಣ್ಣ ಎಚ್ ಧನ್ನಿ, ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ಮಾತನಾಡಿದರು. ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ 110 ಜನ ಜಿಲ್ಲೆಯ ಲೇಖಕರ ಪುಸ್ತಕ ಪ್ರದರ್ಶನ ಪ್ರೇಕ್ಷಕರ ವಿಶೇಷ ಗಮನ ಸೆಳೆಯಿತು. ಪರಿಷತ್ತಿನ ಹಿರಿಯ ಸದಸ್ಯರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಪ್ರಮುಖರಾದ ಮುಡುಬಿ ಗುಂಡೇರಾವ, ರವೀಂದ್ರಕುಮಾರ ಭಂಟನಳ್ಳಿ, ಎಂ ಎನ್ ಸುಗಂಧಿ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಮಂಜುನಾಥ ಕಂಬಾಳಿಮಠ, ನಾಗಪ್ಪ ಎಂ ಸಜ್ಜನ್, ಸುರೇಶ ದೇಶಪಾಂಡೆ, ಪ್ರಭುಲಿಂಗ ಮೂಲಗೆ, ಶಾಮಸುಂದರ ಕುಲಕರ್ಣಿ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಭೀಮರಾಯ ಹೇಮನೂರ, ಸಿ ಎಸ್ ಮಾಲಿಪಾಟೀಲ, ಬಾಬುರಾವ ಪಾಟೀಲ, ರಮೇಶ ಡಿ ಬಡಿಗೇರ, ಧರ್ಮರಾಜ ಜವಳಿ, ರೇವಣಸಿದ್ದಪ್ಪ ಜೀವಣಗಿ, ಎಸ್ ಕೆ ಬಿರಾದಾರ, ಸಂತೋಷ ಕುಡಳ್ಳಿ, ನವಬ್ ಖಾನ್, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ನಾಗರಾಜ ಜಮದರಖಾನಿ, ಮಹೇಶ ಚಿಂತನಪಳ್ಳಿ, ಸಂತೋಷಕುಮಾರ ಕರಹರಿ, ಡಾ. ಕೆ.ಎಸ್ ಬಂಧು, ಶಿವಶರಣ ಹಡಪದ, ಶಿವಶಂಕರ ವರ್ಮಾ, ಎಚ್ ಎಸ್ ಬರಗಾಲಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago