ಬಿಸಿ ಬಿಸಿ ಸುದ್ದಿ

“ರಾಜಗಂಭೀರ” ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

 

ಕಲಬುರಗಿ: ಶಿಕ್ಷಣ ಪ್ರೇಮಿಗಳು, ಹಿರಿಯ ಮುತ್ಸದ್ದಿಗಳು ಹಾಗೂ ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ್ ಅವರು ಮೇ 6 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.‌

1983 ರಲ್ಲಿ ಶಾಸಕರಾಗಿದ್ದರು. 1985 ವರೆಗೆ ಎರಡೂವರೆ ವರ್ಷ ಅವಧಿಗೆ ಶಾಸಕರಾಗಿದ್ದರು.ಕಳೆದ ಎರಡು ದಶಕಕ್ಕೂ ಹೆಚ್ಚು ವರ್ಷದಿಂದ ಕಾಂಗ್ರೆಸ್ ನಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣರೆಡ್ಡಿ ಪಾಟೀಲ ಅವರ ತಂದೆ ಡಾ.ನಾಗರೆಡ್ಡಿ ಪಾಟೀಲರ 2020 ರಲ್ಲಿ ಅವರ ಕುರಿತಾದ “ರಾಜಗಂಭೀರ” ಗ್ರಂಥವನ್ನು ಹೊರತಂದು, ಅವರಿಗೆ 75 ವರ್ಷ ಸಂದ ಪ್ರಯುಕ್ತ ಅಮೃತ ಮಹೋತ್ಸವದಲ್ಲಿ ಮಹಿಪಾಲರೆಡ್ಡಿ ಮುನ್ನೂರ್ ಅವರು ಈ ಗ್ರಂಥದ ಅರ್ಪಿಸಿದರು.

ಅವರಿಗೆ 79 ವರ್ಷ ವಯಸ್ಸಾಗಿತ್ತು. ಸಹೋದರ ಹಾಗೂ ಸಹೋದರಿಯರು, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೇ 6 ರಂದು ಮಧ್ಯಾಹ್ನ 3.30 ಕ್ಕೆ ಸೇಡಂ ಪಟ್ಟಣದ ಆಶ್ರಯ ಕಾಲೋನಿ ಪಕ್ಕದಲ್ಲಿರುವ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.‌

emedialine

Recent Posts

ಮಹಾತ್ಮರ ಬದುಕು, ಬರಹ ನಮ್ಮದಾಗಬೇಕು: ಸುರೇಶ ಬಡಿಗೇರ

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ, ಅವರ ಬದುಕು ಬೋಧನೆಯನ್ನು ಅನುಸರಿಸಬೇಕು ಎಂದು ಕನ್ನಡ ಅಭಿವೃದ್ಧಿ…

11 hours ago

ಸಿದ್ದಪ್ಪ ಹೊಸಮನಿಗೆ ಪಿಎಚ್.ಡಿ

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಸಿದ್ದಪ್ಪ ಹೊಸಮನಿ ಅವರು " ಡಾ. ಕೆ. ಆರ್.…

11 hours ago

ಕಲಬುರಗಿ; ಜಿಲ್ಲಾ ಮಾಸ್ಟರ್ ಟ್ರೇನರ್ಸ್ ಗಳಿಗೆ ತರಬೇತಿ

ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಗೆ…

12 hours ago

ಸುರಪುರ:ವಾಸವಿ ಜಯಂತಿ ಆಚರಣೆ ಅದ್ಧೂರಿ ಮೆರವಣಿಗೆ

ಸುರಪುರ: ನಗರದಲ್ಲಿ ವಾಸವಿ ಜಯಂತಿ ಆಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.ಮೊದಲಿಗೆ ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕನ್ನಿಕಾ…

12 hours ago

ಕೃಷಿ ಅಧಿಕಾರಿ ಬೀಜ ಗೊಬ್ಬರ ಮಾರಾಟ ಅಂಗಡಿಗೆ ಭೇಡಿ;ಬಿತ್ತನೆ ಬೀಜ ಪರಿಶೀಲನೆ

ಸುರಪುರ: ತಾಲೂಕಿನಲ್ಲಿ ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ಕೃಷಿ ಬೀಜ ಗೊಬ್ಬರ ಮಾರಾಟ ಅಂಗಡಿಗಳಿಗೆ ತಾಲೂಕು ಸಹಾಯಕ ಕೃಷಿ…

12 hours ago

ಶ್ರೀ ವಾಸವಿ ಜಯಂತಿ ನಿಮಿತ್ತ ವಾಸವಿ ಮಾತೆಗೆ ತೊಟ್ಟಿಲ ಸೇವೆ

ಕಲಬುರಗಿ: ನಗರದ ಪುಟಾಣಿ ಗಲ್ಲಿಯಲ್ಲಿ ಶ್ರೀ ನಗರೇಶ್ವರ ದೇವ ಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜ ವತಿಯಿಂದ ಶ್ರೀ ವಾಸವಿ ಜಯಂತಿ…

12 hours ago