ಹೈದರಾಬಾದ್ ಕರ್ನಾಟಕ

ಮೇ 7 ರಂದು ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕಲಬುರಗಿ: ಲೋಕಸಭಾ ಚುನಾವಣೆಯ ಮತದಾನ ಇದೇ ಮೇ 7 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿನ ನೌಕರರು ಹಾಗೂ ಸಿಬ್ಬಂದಿಗಳು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳು, ವಿವಿಧ ಸಂಘ-ಸಂಸ್ಥೆಗಳಿಗೆ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ಮಹಾನಗರ ಪಾಲಿಕೆಯ ಎಲ್ಲಾ ಸ್ಥಳೀಯ ಹಾಗೂ ನಗರ ಸಂಸ್ಥೆಗಳು, ರಾಷ್ಟ್ರೀಕೃತ ಬ್ಯಾಂಕ್‍ಗಳು, ಇತರೆ ಬ್ಯಾಂಕ್‍ಗಳು ಮುಂತಾದ ಕಚೇರಿಗಳಿಗೆ ರಾಜ್ಯ ಸರ್ಕಾರವು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 135ಬಿ ರಡಿ ವೇತನ ಸಹಿತ ರಜೆ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳು, ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು (Industrial Undertaking) ಮತ್ತು ಇತರೆ ಸಾರ್ವಜನಿಕ ಸಂಸ್ಥೆ (Establishment) ಗಳಲ್ಲಿ ಖಾಯಂ ಮತ್ತು ದಿನಗೂಲಿ (Casual work) ಮೇಲೆ ಕಾರ್ಯನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಮೇಲ್ಕಂಡ ದಿನದಂದು ವೇತನ ಸಹಿತ ರಜೆ ನೀಡಲು ಸಂಬಂಧಪಟ್ಟ ಪ್ರಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖೆ ಹಾಗೂ ಸಂಘ ಸಂಸ್ಥೆಗಳು ವ್ಯವಸ್ಥೆ ಮಾಡತಕ್ಕದ್ದು. ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಜೂನ್ 4ಕ್ಕೆ ಗುಲಬರ್ಗಾ ವಿ.ವಿಗೆ ರಜೆ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯುವ ಪ್ರಯುಕ್ತ ವಿಶ್ವವಿದ್ಯಾಲಯಕ್ಕೆ ಸೀಮಿತಗೊಳಿಸಿ 2024ರ ಜೂನ್ 4 ರಂದು ರಜೆ ಘೋಷಿಸಲಾಗಿದೆ.

emedialine

Recent Posts

ಮಹಾತ್ಮರ ಬದುಕು, ಬರಹ ನಮ್ಮದಾಗಬೇಕು: ಸುರೇಶ ಬಡಿಗೇರ

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ, ಅವರ ಬದುಕು ಬೋಧನೆಯನ್ನು ಅನುಸರಿಸಬೇಕು ಎಂದು ಕನ್ನಡ ಅಭಿವೃದ್ಧಿ…

11 hours ago

ಸಿದ್ದಪ್ಪ ಹೊಸಮನಿಗೆ ಪಿಎಚ್.ಡಿ

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಸಿದ್ದಪ್ಪ ಹೊಸಮನಿ ಅವರು " ಡಾ. ಕೆ. ಆರ್.…

11 hours ago

ಕಲಬುರಗಿ; ಜಿಲ್ಲಾ ಮಾಸ್ಟರ್ ಟ್ರೇನರ್ಸ್ ಗಳಿಗೆ ತರಬೇತಿ

ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಗೆ…

12 hours ago

ಸುರಪುರ:ವಾಸವಿ ಜಯಂತಿ ಆಚರಣೆ ಅದ್ಧೂರಿ ಮೆರವಣಿಗೆ

ಸುರಪುರ: ನಗರದಲ್ಲಿ ವಾಸವಿ ಜಯಂತಿ ಆಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.ಮೊದಲಿಗೆ ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕನ್ನಿಕಾ…

12 hours ago

ಕೃಷಿ ಅಧಿಕಾರಿ ಬೀಜ ಗೊಬ್ಬರ ಮಾರಾಟ ಅಂಗಡಿಗೆ ಭೇಡಿ;ಬಿತ್ತನೆ ಬೀಜ ಪರಿಶೀಲನೆ

ಸುರಪುರ: ತಾಲೂಕಿನಲ್ಲಿ ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ಕೃಷಿ ಬೀಜ ಗೊಬ್ಬರ ಮಾರಾಟ ಅಂಗಡಿಗಳಿಗೆ ತಾಲೂಕು ಸಹಾಯಕ ಕೃಷಿ…

12 hours ago

ಶ್ರೀ ವಾಸವಿ ಜಯಂತಿ ನಿಮಿತ್ತ ವಾಸವಿ ಮಾತೆಗೆ ತೊಟ್ಟಿಲ ಸೇವೆ

ಕಲಬುರಗಿ: ನಗರದ ಪುಟಾಣಿ ಗಲ್ಲಿಯಲ್ಲಿ ಶ್ರೀ ನಗರೇಶ್ವರ ದೇವ ಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜ ವತಿಯಿಂದ ಶ್ರೀ ವಾಸವಿ ಜಯಂತಿ…

12 hours ago