ಬಸವಾದಿ ಶರಣರ ತತ್ವ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು

ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರು ಮೂಢನಂಬಿಕೆ, ಜಾತಿ ಪದ್ಧತಿ ವಿರುದ್ಧ ಹೋರಾಟ ನಡೆಸಿ 900 ವರ್ಷಗಳು ಗತಿಸಿದರೂ ಸಮಾಜ ಇಂದಿಗೂ ಜಾತಿ ಪದ್ಧತಿ, ಮೂಢನಂಬಿಕೆಯಿಂದ ಕೂಡಿದೆ ಎಂದು ಹಿರಿಯ ಜನಪರ ಹೋರಾಟಗಾರ ಮರಿಯಪ್ಪ ಹಳ್ಳಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಬಸವ ಉತ್ಸವ-2024 ದಲ್ಲಿ ವಚನ ಸಾಂಸ್ಕøತಿಕ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಶರಣರ ಜಯಂತಿ ಆಚರಿಸಿದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂದು ತಿಳಿದುಕೊಂಡರೆ ಅದು ತಪ್ಪು, ಬಸವಾದಿ ಶರಣರ ತತ್ವ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ಅಂದಾಗ ಮಾತ್ರ ಮಹಾತ್ಮರ ಜಯಂತಿಗೆ ನಿಜವಾದ ಅರ್ಥ ಬರುತ್ತದೆ ಎಂದರು.

ದಲಿತರು, ಹಿಂದುಳಿದ ವರ್ಗದವರೇ ಬಸವಣ್ಣನವರ ನಿಜವಾದ ಅನುಯಾಯಿಗಳು ಎಂದು ಪ್ರತಿಪಾದಿಸಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ರನ್ನು ಭಾರತೀಯರು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದರು.

ಮಹಾತ್ಮರು ಯಾವುದೇ ಒಮದು ಜಾತಿಗೆ ಸೀಮಿತವಲ್ಲ. ಇಂದು ಜಾತಿಗೊಬ್ಬ ಶರಣರನ್ನು ಹಂಚಿಕೊಂಡು ಜಾತಿಪದ್ಧತಿ ಜೀವಂತ ಇಡುವ ಪ್ರಯತ್ನ ನಡೆಯುತ್ತಿದೆ. ಬಸವಣ್ಣನ ಅನುಯಾಯಿಗಳೆಂದು ಹೇಳಿಕೊಲ್ಳುವವರೇ ಬಸವ ತತ್ವವನ್ನು ಅನುಸರಿಸುತ್ತಿಲ್ಲ ಎಂದು ವಿಷಾಧಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ವಿಶ್ವಗುರು ಬಸವಣ್ಣ ನವರು ಬಹು ದೊಡ್ಡ ಸಮಾಜ ಜ್ಞಾನಿಯಾಗಿದ್ದು, ಅಂದಿನ ಕಾಲದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಸಮಾಜದ ಕೆಳವರ್ಗದವರನ್ನು ಕಾಯಕಜೀವಿಗಳನ್ನು ಮುನ್ನೆಲೆಗೆ ಕರೆತಂದು ಎಲ್ಲ ದುಡಿಯುವ ವರ್ಗದವರನ್ನು ಅನುಭವ ಮಂಟಪದ ವೇದಿಕೆಯಲ್ಲಿ ಕುಳ್ಳಿರಿಸಿ ಆತ್ಮಮಥನಕ್ಕೆ ಹಚ್ಚಿದರು ಎಂದು ಹೇಳಿದ ಅವರು, ವೈಚಾರಿಕ ನೆಲೆಗಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.

ಶರಣಾನುಯಾಯಿ ಬಸವರಾಜ ಮೊರಬದ, ಸಿದ್ಧಲಿಂಗ ಜಿ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ ವಿಶ್ವನಾಥ ತೊಟ್ನಳ್ಳಿ ವೇದಿಕೆ ಮೇಲಿದ್ದರು.

ವಚನ ವೈಭವದಲ್ಲಿ ಕು. ಅವಂತಿಕಾ ಬಿ ಘಂಟೆ, ಕು. ಶ್ರಾವಣಿ ರಾಠೋಡ, ಬಾಬುರಾವ ಪಾಟೀಲ ಚಿತ್ತಕೋಟಾ, ಎಂ.ಎನ್.ಸುಗಂಧಿ ರಾಜಾಪೂರ ಅವರು ವಚನ ಸಂಗೀತ ನಡೆಸಿಕೊಟ್ಟು ಪ್ರೇಕ್ಷಕರ ಗಮನ ಸೆಳೆದರು.

ವಿಧವಾ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಸೀರೆ, ಬಟ್ಟೆಗಳನ್ನು ಕೊಡುವ ಮೂಲಕ ಈ ಕಾರ್ಯಕ್ರಮ ಶರಣರ ವೈಚಾರಿಕೆ ಪ್ರಜ್ಞೆಗೆ ಸಾಕ್ಷಿಯಾಯಿತು.

ಜಿಲ್ಲೆಯ ವಿವಿಧ ಕ್ಷೇತ್ರದ ಪ್ರಮುಖರಾದ ವಿದ್ಯಾಸಾಗರ ದೇಶಮುಖ, ಡಾ ಚೆನ್ನಣ್ಣ ಬಾಳಿ ರಾವೂರ, ವಿಜಯಲಕ್ಷ್ಮೀ ನೆಪೆರಿ, ಮಹಾಲಿಂಗಪ್ಪಗೌಡ ಬಂಡೆಪ್ಪಗೌಡರ್, ಪ್ರಭುಲಿಂಗಯ್ಯ ಹಿರೇಮಠ ಕೊಂಡಗುಳಿ, ಶಂಕರ ಹಿಪ್ಪರಗಿ, ಶರಣಬಸಪ್ಪ ಪಾಟೀಲ ಉದನೂರ, ನವಾ¨ ಖಾನ್, ಡಾ. ನೀಲಲೋಹಿತ ಹಿರೇಮಠ ಗಂವ್ಹಾರ, ನಂದಿಕುಮಾರ ಪಾಟೀಲ ಪೋಲಕಪಳ್ಳಿ, ನಾಗಪ್ಪ ಆರ್ ಕೋಟಗಾರ, ಜಗನ್ನಾಥ ಸೂರ್ಯವಂಶಿ ಅವರನ್ನು ಬಸವ ಗೌರವ ಪುರಸ್ಕಾರವನ್ನು ನೀಡಿ ಸತ್ಕರಿಸಲಾಯಿತು.

ಪ್ರಮುಖರಾದ ಶಿವಾನಂದ ಪೂಜಾರಿ, ಗುರುಬಸಪ್ಪ ಸಜ್ಜನಶೆಟ್ಟಿ, ನಾಗಪ್ಪ ಎಂ ಸಜ್ಜನ್, ಎಸ್ ಕೆ ಬಿರಾದಾರ, ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ಸುರೇಶ ಲೇಂಗಟಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ಕಿರಣ ಗೋಡಬಾಲೆ, ರೇವಣಸಿದ್ದಪ್ಪ ಜೀವಣಗಿ, ಶಿವಾನಂದ ಮಠಪತಿ, ಚನ್ನಮಲ್ಲಯ್ಯ ಎಸ್ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಅಣ್ಣಾರಾವ ಬಾಳಿ, ಸಂಗನಬಸಪ್ಪ ಪಾಟೀಲ ದಿಕ್ಸಂಗಿ, ಎಚ್ ಎಸ್ ಬರಗಾಲಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ತಾವು ನೋವು ನುಂಗಿ ಸಮಾಜಕ್ಕೆ ಅಮೃತ ಉಣಬಡಿಸಿದ ಕೀರ್ತಿ ಬುದ್ಧ, ಬಸವ, ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಬುದ್ಧ, ಬಸವ, ಡಾ ಅಂಬೇಡ್ಕರ್ ಅವರು ನೀಡಿರುವ ಸಂದೇಶಗಳು ಜಾತಿ ವ್ಯವಸ್ಥೆಯ ವಿರುದ್ಧವಾಗಿದ್ದವು. ಅಂಬೇಡ್ಕರ ಅವರು ಬಸವನ್ಣನವರ ವಚನಗಳಲ್ಲಿನ ಸಂದೇಶಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಕಾನೂನು ಜಾರಿಗೆ ತಂದು ಸಮಾನತೆ, ಮೀಸಲಾತಿ ಕಲ್ಪಿಸಿದರು. ಆದರೆ, ಇಂದಿಗೂ ಜಾತೀಯತೆ, ಮೂಢನಂಬಿಕೆಗಳು, ಕಂದಾಚಾರಗಳು ಹೋಗದಿರುವುದು ದುರಂತವೇ ಸರಿ. – ವಿಜಯಕುಮಾರ ತೇಗಲತಿಪ್ಪಿ. ಕಸಾಪ ಜಿಲ್ಲಾಧ್ಯಕ್ಷ

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

43 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

53 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

54 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420