ಬಿಸಿ ಬಿಸಿ ಸುದ್ದಿ

ಜಗತ್ತಿನ ಸಂವಿಧಾನ ಬರೆದವರು ವಿಶ್ವಗುರು ಬಸವಣ್ಣನವರು

ಶಹಾಬಾದ: ಭಾರತದ ಸಂವಿಧಾನವನ್ನು ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಆದರೆ ಜಗತ್ತಿನ ಸಂವಿಧಾನ ಬರೆದವರು ವಿಶ್ವಗುರು ಬಸವಣ್ಣನವರು ಎಂದು ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಹೇಳಿದರು.

ಅವರು ಶುಕ್ರವಾರ ತಾಲೂಕಾಡಳಿತ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಬಸವಣ್ಣನವರು ಹಾಗೂ ಬಸವಾಧಿ ಶರಣರು ನೀಡಿದ ವಚನಗಳೇ ನಮಗೆ ಸಂವಿಧಾನ. ಬಸವಣ್ಣನವರು ನಮಗೆ ನೀಡಿದ ಸಂವಿಧಾನವೆಂದರೆ ಅದು ಬದುಕಿನ ಸಂವಿಧಾನ. ಬದುಕು ಹೇಗಿರಬೇಕು ಎನ್ನುವುದು ಕುರಿತು ಸರಳವಾಗಿ ವಚನಗಳ ಮೂಲಕ ನಮಗೆಲ್ಲರಿಗೂ ತಿಳಿಸಿದ್ದಾರೆ.

ಬಸವಣ್ಣ ಒಬ್ಬ ಲೋಕಸೂರ್ಯವಿದ್ದಂತೆ. ಎಲ್ಲಿ ಸೂರ್ಯನ ಬೆಳಕು ಹೋಗುತ್ತದೆಯೋ ಅಲ್ಲಿ ಕತ್ತಲು ಮಾಯವಾಗುತ್ತದೆ.ಅದೇ ರೀತಿ ಬಸವಣ್ಣ ಇರುವಲ್ಲಿ ಅಜ್ಞಾನ, ಮೂಢನಂಬಿಕೆ ಎಂಬ ಕತ್ತಲೆಗೆ ಜಾಗವಿಲ್ಲ. ಅಲ್ಲಿ ಮೇಲು-ಕೀಳೀಲ್ಲ. ಅಸಮಾನತೆ ಮಾತೇ ಇಲ್ಲ.ಇಂತಹ ಬದುಕಿನ ಸಂವಿಧಾನವನ್ನು ಕೊಟ್ಟವರು ಬಸವಣ್ಣನವರು ಎಂದು ಹೇಳಿದರು.

ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಮಾತನಾಡಿ,ಜ್ಞಾನ ಕಣಜವಾಗಿರುವ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು ನಡೆದರೇ ಸಮಾಜದಲ್ಲಿ ಪ್ರೀತಿ, ದಯೆ, ಕರುಣೆ ಉಂಟಾಗಿ ಎಲ್ಲರೂ ಒಂದಾಗಿ ಬಾಳಬಹುದು.ಆದರೆ ಇಂದು ಜಾತಿಗಳ ಮಧ್ಯೆ ದ್ವೇಷ ಬಿತ್ತುವ ಕಾರ್ಯ ನಡೆದಿದ್ದು, ಅದರಿಂದ ಹೊರಬರಬೇಕಾದರೆ ಬಸವಣ್ಣನವರ ವಿಚಾರಗಳು ನೆತ್ತಿಯೊಳಗೆ ಪ್ರವೇಶಮಾಡಬೇಕಿದೆ ಎಂದರು.

ತಾಪಂ ಇಓ ಮಲ್ಲಿನಾಥ ರಾವೂರ ಮಾತನಾಡಿ, ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿದ್ದೆಯಾದರೆ ಈ ಜಗತ್ತು ಸುಂದರ ಮಯವಾಗಿರುತ್ತದೆ. ವಚನಗಳು ನಮ್ಮ ಬದುಕಿಗೆ ದಾರಿ ದೀಪ. ಶರಣರು ನೀಡಿದ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು, ಮತ್ತೊಬ್ಬರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಅಂಧಕಾರವನ್ನು ಹೋಗಲಾಡಿಸಲು ಪ್ರಯತ್ನಪಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣರಾದ ಮಲ್ಲಿಕಾರ್ಜುನ ಚಂದನಕೇರಿ,ಮಾಣಿಕಗೌಡ ಪಾಟೀಲ, ಬಸವರಾಜ ತರನಳ್ಳಿ,ಮಲ್ಲಿಕಾರ್ಜುನ ವಾಲಿ, ಡಾ.ರಶೀದ್ ಮರ್ಚಂಟ್,ಸಾಹೇಬಗೌಡ ಬೋಗುಂಡಿ, ಶಿವುಗೌಡ ಪಾಟೀಲ, ಸೂರ್ಯಕಾಂತ ಕೋಬಾಳ, ನಿಂಗಣ್ಣ ಹುಳಗೋಳಕರ್,ಡಾ.ಅಹ್ಮದ್ ಪಟೇಲ್,ರಾಜೇಶ ಯನಗುಂಟಿಕರ್, ಶರಣು ಪಗಲಾಪೂರ,ಬಸವರಾಜ ದಂಡಗುಲಕರ್, ಸುಭಾಷ ಪಾರಾ, ಸ್ನೇಹಲ್ ಜಾಯಿ, ಶಾಂತಪ್ಪ ಹಡಪದ ಸೇರಿದತೆ ಅನೇಕರು ಇದ್ದರು.
ಶಿಕ್ಷಕ ಗಿರಿಮಲ್ಲಪ್ಪ ವಳಸಂಗ ಪ್ರಾಸ್ತಾವಿಕ ನುಡಿದರು, ವಿಶ್ವನಾಥ ಹಡಪದ ನಿರೂಪಿಸಿದರು, ಕುಪೇಂದ್ರ ತುಪ್ಪದ ಸ್ವಾಗತಿಸಿದರು, ಅರುಣ ಜಾಯಿ ವಂದಿಸಿದರು.

emedialine

Recent Posts

ಕಲಬುರಗಿ: ನೂತನ ಗ್ರಂಥಾಲಯ ಉದ್ಘಾಟನೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…

4 hours ago

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

5 hours ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

5 hours ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

5 hours ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

6 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

9 hours ago