ಬಿಸಿ ಬಿಸಿ ಸುದ್ದಿ

ಆತ್ಮಕಥೆಗಳಿಂದ ಸಾಮಾಜಿಕ ಜೀವನ ಮೌಲ್ಯಗಳು ಅರ್ಥವಾಗುತ್ತವೆ; ಡಾ. ಮನು ಬಳಿಗಾರ

ಕಲಬುರಗಿ: ಆತ್ಮಕಥೆಗಳು ಮರಾಠಿ ಸಾಹಿತ್ಯದಲ್ಲಿ ಹೆಚ್ಚಾಗಿ ಪ್ರಕಟವಾಗಿದ್ದು, ಕನ್ನಡ ಸಾಹಿತ್ಯದಲ್ಲಿಯೂ ಇನ್ನೂ ಹೆಚ್ಚಾಗಿ ಪ್ರಕಟವಾಗಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶ್ವ ಪ್ರಕಾಶನದ ಸಹಯೋಗದೊಂದಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಆಯೋಜಿಸಿದ ಸಮಾರಂಭದಲ್ಲಿ ಹಿರಿಯ ಕಥೆಗಾರ ಪ್ರೊ. ಕೃಷ್ಣ ಎಸ್ ನಾಯಕ ಅವರ ಆತ್ಮಕಥನ ವಲಸೆ ಹಕ್ಕಿಯ ಹಾಡು ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜೀವನ ಪ್ರೀತಿ ಘಟ್ಟಗಳು, ಕಣ್ಮುಂದೆ ಕಟ್ಟಿಕೊಂಡ ಸಂಗತಿಗಳನ್ನು ಬಿಚ್ಚಿಟ್ಟ ಬರಹಗಳು ಆತ್ಮಕಥೆಗಳಾಗಬೇಕು.

ನಾವು ಎದುರಿಸಿದ ಮತ್ತು ಅನುಭವಿಸಿದ ನೋವು-ನಲಿವುಗಳನ್ನು ಸಂಕಥನಗಳಾಗಬೇಕು ಹಾಗೂ ಅಮೂಲ್ಯ ಕ್ಷಣಗಳನ್ನು ಕೂಡ ದಾಖಲಿಸಿದರೆ, ಕೃತಿಯ ಮೌಲ್ಯ ಹೆಚ್ಚುತ್ತದೆ. ಕುವೆಂಪು, ಶಿವರಾಮ ಕಾರಂತ, ಸಿದ್ಧಲಿಂಗಯ್ಯ ಸಾಹಿತಿಗಳ ಆತ್ಮಕಥೆಗಳು ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿ ಕೃತಿಗಳಾಗಿವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಆತ್ಮಕಥೆಗಳು ಬಂದರೆ, ಒಬ್ಬ ವ್ಯಕ್ತಿಯ ಸಾಮಾಜಿಕ ಮೌಲ್ಯ ಮತ್ತು ಜೀವನ ಮೌಲ್ಯಗಳು ಅರ್ಥವಾಗುತ್ತವೆ. ಈ ಭಾಗದಲ್ಲಿ ಶರಣ ಸಾಹಿತ್ಯ ಪರಂಪರೆಯಿದ್ದು, ಅನೇಕ ಕಾರ್ಯಕ್ರಮಗಳು ನಡೆಯಬೇಕಾಗಿವೆ ಎಂದು ಹೇಳಿದರು.

ಕೃತಿ ಪರಿಚಯ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ್ ವಿಸಾಜಿ, ವಲಸೆ ಹಕ್ಕಿಯ ಹಾಡು ಎಂಬ ಆತ್ಮಕಥನ ಕೃತಿಯಿಂದ ಜೀವನದ ಸತ್ಯ ಸಂಗತಿಗಳನ್ನು ಅವಲೋಕಿಸುವುದಾಗಿದೆ. ನಿರೂಪಿಸುವ ಬರಹಗಳ ಕ್ರಮ ಸಾರ್ಥಕವಾಗಬೇಕು. ಮನಸ್ಸಿನ ಭಾವಗಳು ಬದುಕಿನ ಮೌಲ್ಯಗಳಾಗಬೇಕು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಶೋಷಿತ ಸಮುದಾಯಗಳ ಆತ್ಮಕಥನಗಳು ಬರಬೇಕು. ಅದಕ್ಕೆ ವಿಶಿಷ್ಟ ಸ್ಥಾನವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಾಹಿತಿಗಳಾದವರು ತಮ್ಮ ನಡವಳಿಕೆಗೂ, ಸಾಹಿತ್ಯ ಬರವಣಿಗೆಗೂ ವ್ಯತ್ಯಾಸ ಇರಬಾರದು. ಇವೆರಡು ಒಂದಕ್ಕೊಂದು ಪೂರಕವಾಗಿರಬೇಕು.ಬದುಕಿಗೂ, ನಿಲುವಿಗೂ ಏಕಸೂತ್ರತೆ ಬೇಕು. ಬದುಕು ಬರಹ ಒಂದಾಗಿಸಿಕೊಂಡಿರುವ ಬದುಕು ಪ್ರೊ. ಕೆ.ಎಸ್. ನಾಯಕ ಅವರದ್ದಾಗಿದೆ. ನಾಯಕ ಅವರ ಸಾಹಿತ್ಯದಿಂದ ಸಮಾಜವನ್ನು ತಿದ್ದಿ ತೀಡಿ ಪರಿಚರ್ತನೆ ಮಾಡಬಹುದು. ಸರಳ ಮತ್ತು ಸಾತ್ವಿಕ ಜೀವನ ಅವರದ್ದಾಗಿದೆ ಎಂದು ಹೇಳಿದರು.

ಶರಣಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವರಾಜ ಶಾಸತ್ರೀ ಹೇರೂರ, ಹಿರಿಯ ಲೇಖಕಿ ಪ್ರಮೀಳಾ ಜಾನಪ್ಪಗೌಡ, ಸಾಹಿತಿ ಸಿ.ಎಸ್. ಆನಂದ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ವಿಶ್ವ ಪ್ರಕಾಶನದ ಉಷಾ ನಾಯಕ, ಸಿ.ಎಸ್. ಮಾಲಿ ಪಾಟೀಲ ವೇದಿಕೆ ಮೇಲಿದ್ದರು.

ಪ್ರಮುಖರಾದ ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ವೀರೇಂದ್ರಕುಮಾರ ಕೊಲ್ಲೂರ, ಎಸ್ ಕೆ ಬಿರಾದಾರ, ಆನಂದ ನಾಯಕ್, ಗೀತಾ ರಾಣಿ ನಾಯಕ್, ವಿನೋದಕುಮಾರ ಜೇನವೇರಿ, ಅಪ್ಪಾರಾವ ಅಕ್ಕೋಣೆ, ಡಾ. ಎಚ್.ಟಿ.ಪೋತೆ, ಸೂರ್ಯಕಾಂಥ ಸೊನ್ನದ್, ಶಿವಲಿಂಗಪ್ಪ ಅಷ್ಟಗಿ, ಸಿದ್ಧರಾಮ ಹೊನ್ಕಲ್, ಸೂರ್ಯಕಾಂತ ಸುಜ್ಯಾತ್, ಡಾ. ಮಲ್ಲಿನಾಥ ತಳವಾರ, ದತ್ತಾತ್ರೇಯ ಕುಲಕರ್ಣಿ, ಗುರುಬಸಪ್ಪ ಸಜ್ಜನಶೆಟ್ಟಿ, ಎಸ್ ಕೆ ಬಿರಾದಾರ, ಸಿದ್ಧಲಿಂಗ ಬಾಳಿ, ವೀರೇಂದ್ರಕುಮಾರ ಕೊಲ್ಲೂರ, ವಿ ಎಂ ಪತ್ತಾರ, ಡಾ. ವೆಂಕಟರೆಡ್ಡಿ ರುದ್ರವಾರ, ಶಂಕರ ಚವ್ಹಾಣ, ಬಾಬು ಜಾಧವ, ಡಾ. ಜಯದೇವಿ ಗಾಯಕವಾಡ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago