ಬಿಸಿ ಬಿಸಿ ಸುದ್ದಿ

ಪ್ರೀತಿಯ ಪ್ರವಾಹ ಹರಿಸಿದ ಸಂಕಲನಗಳು: ಡಾ.ಅಂಬುಜಾ ಮಳಖೇಡಕರ್ ರಚಿತ ಐದು ಪುಸ್ತಕಗಳ ಲೋಕಾರ್ಪಣೆ

ಕಲಬುರಗಿ : ಕಾರಣಾಂತರಗಳಿಂದ ಪ್ರೀತಿಸುವ ಮನಸುಗಳಿಗಿಂತ ಮನುಷ್ಯತ್ವದ ಹಿನ್ನೆಲೆಯ ಪ್ರೀತಿ ದೊಡ್ಡದು ಎಂದು ಧಾರವಾಡದ ಹಿರಿಯ ಕಲಾವಿದ ಡಾ.ಶಶಿಧರ ನರೇಂದ್ರ ಹೇಳಿದರು.

ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಭಾಂ ಗಣದಲ್ಲಿ ಭಾನುವಾರ ಸೇಡಂನ ಸಂಸ್ಕೃತಿ ಪ್ರಕಾಶನ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಅಂಬುಜಾ ಮಳಖೇಡಕರ್ ರಚಿಸಿದ ಐದು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ಅವರು ಮಾತನಾಡಿದರು.

ಕೇವಲ ಪದಗಳ ಜೋಡಣೆ ಕಾವ್ಯ ವಾಗಲಾರದು. ಬದಲಿಗೆ ಧ್ವನಿಪೂರ್ಣವಾದ ಮಾತುಗಳೇ ಕಾವ್ಯವಾಗುತ್ತದೆ. ಡಾ.ಅಂಬುಜಾ ಅವರ ಎಲ್ಲ ಕವನಗಳಲ್ಲಿ ಈ ರೀತಿಯ ಸಾಲುಗಳು ಹೇರಳವಾಗಿವೆ ಎಂದರು.

ಡಾ.ಅಂಬುಜಾ ಮಳಖೇಡಕರ್ ರಚಿಸಿದ ‘ ಗೊಂಬೆಯ ಜೀವನ, ಕೃತಿಯನ್ನು ಕನ್ನಡ ಉಪನ್ಯಾಸಕಿ ಡಾ.ವಿದ್ಯಾವತಿ ಪಾಟೀಲ ಪರಿಚಯಿಸಿದರು.

ಮನ ಹರಿ ಧ್ಯಾನ ಮಂದಿರ, ದಡ ಸೇರಿಸೆನ್ನ ಹರಿಯೇ ಕೃತಿಗಳನ್ನು ಕವಯತ್ರಿ ಕಾವ್ಯಶ್ರೀ ಮಹಾಗಾಂವ ಪರಿಚಯಿಸಿದರು.

ಪ್ರೇಮ ಪದನಿಸ ಕೃತಿಯನ್ನು ಉಪನ್ಯಾಸಕ ಡಾ.ಎಂ.ಬಿ.ಕಟ್ಟಿ ಪರಿಚಯಿದರು. ರಾಜನ ನಂಟು ಕನ್ನಡಿಯ ಗಂಟು ಕೃತಿಯನ್ನು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪರಿಚಯಿಸಿದರು.

ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಾಜೇಂದ್ರ ಬಿ.ಕೊಂಡ ಅಧ್ಯಕ್ಷತೆ ವಹಿಸಿದ್ದರು.

ಪುಸ್ತಕಗಳನ್ನು ಪ್ರಕಟಿಸಿದ ಸೇಡಂನ ಸಂಸ್ಕೃತಿ ಪ್ರಕಾಶನದ ಸಂಚಾಲಕ ಪ್ರಭಾಕರ ಜೋಶಿ ಮಾತನಾಡಿ, ತಾಲೂಕು ಕೇಂದ್ರವೊಂದರಲ್ಲಿದ್ದುಕೊಂಡು ನೂರಾರು ಕೃತಿಗಳನ್ನು ಪ್ರಕಟಿಸುವ ಮೂಲಕ ಹಲವಾರು ಯುವ ಲೇಖಕರಿಗೆ ವೇದಿಕೆಯನ್ನು ಒದಗಿಸಿದೆ ಎಂದರು.

ಕವಯತ್ರಿ ಡಾ.ಅಂಬುಜಾ ಮಳಖೇಡಕರ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆರ್.ಜೆ.ಮಂಜು ನಿರೂಪಿಸಿದರು.

ಸಮಾರಂಭದಲ್ಲಿ ಹಿರಿಯ ಕವಿಗಳಾದ ಎ.ಕೆ.ರಾಮೇಶ್ವರ, ಡಾ.ನಾಗೇಂದ್ರ ಮಸೂತಿ, ಡಾ.ಚಿ.ಸಿ.ನಿಂಗಣ್ಣ, ಬಿ.ಎಚ್. ನಿರಗುಡಿ, ಅಂಬಾರಾಯ ಕೋಣಿನ್, ಸತಾಳಕರ್, ಸಂಜೀವ ಸಿರನೂರಕರ್, ರವೀಂದ್ರ ಇಂಜಳ್ಳೀಕರ್, ಸಿದ್ದಪ್ಪ ತಳ್ಳಳ್ಳಿ, ಮಳಖೇಡಕರ್ ಪರಿವಾರದ ಸದಸ್ಯರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago