ಬಸವಣ್ಣನವರು ಶಿವನನ್ನು ಭಕ್ತಿಯಿಂದ ಪೂಜಿಸುತ್ತಿದ್ದರು ಎಂಬ ಅಂಶ ಮರೆಯಾಗಿದೆ: ಖ ಒ ಹಿರೇಮಠ

ಕಲಬುರಗಿ: ಸದಾ ಧ್ಯಾನ ದಾರ್ಮಿಕ ನಂಬಿಕೆಗಳು, ಸಮಾಜದಲ್ಲಿ ಅನಿಷ್ಟ ಪದ್ದತಿಗಳ ವಿರುದ್ದ ಶಾಂತವಾಗಿ ಹೋರಾಡಿ ಸಾಮಾಜಿಕ ಸಮಾನತೆಯ, ಕಾಯಕವೇ ಕೈಲಾಸವೆಂಬ ಪರಿಕಲ್ಪನೆ ನೀಡಿದ ಅಣ್ಣ ಬಸವಣ್ಣನವರು ಶಿವನನ್ನು ಶ್ರಧ್ದಾ ಭಕ್ತಿಯಿಂದ ಪೂಜಿಸುತ್ತಿದ್ದರು ಎಂಬ ಅಂಶ ಮರೆಯಾಗಿದೆ ಎಂದು ಕಾನೂನು ಹೋರಾಟಗಾರ ಆರ್ ಎಮ್ ಹಿರೇಮಠ ಅವರು ಗುಂಜಬಬಲಾದದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯ ಬಹಿರಂಗ ಸಭೆಯಲ್ಲಿ ಹೇಳಿದರು.

ಬಸವಣ್ಣನವರು ಸಮಾಜದಲ್ಲಿ ಸದಾ ಶಾಂತಿ ನೆಮ್ಮದಿಯನ್ನು ಬಯಸಿದವರು, ತಮ್ಮ ಜೀವನದ ಹಂಗು ತೋರೆದು ಸಮಾಜದ ಏಳಿಗೆಗಾಗಿ ದುಡಿದವರು ತನಗಿದ್ದ ಸಂಪತ್ತಿನಲ್ಲಿ ಐಷಾರಾಮಿ ಜೀವನ ನಡೆಸಬಹುದಿತ್ತು ಆದರೆ ಬಸವಣ್ಣವನರು ಹಾಗೆ ಮಾಡಲಿಲ್ಲಾ, ತನ್ನ ಬಾಲ್ಯದಲ್ಲಿ ಜನಿವಾರದ ಧಾರಣೆಯ ಕಾರ್ಯಕ್ರಮದಲ್ಲಿ ಜನಿವಾರ ಬರಿ ನನಗೇಕೆ ಕಟ್ಟಬೇಕು ನನಗಿಂತ ದೊಡ್ಡವಳಾದ ನನ್ನ ಅಕ್ಕ ನಾಗಮ್ಮನಿಗೆ ಮೊದಲು ಕಟ್ಟಿ ಆಕೆಗಿಂತ ಸಣ್ಣವನು ನಾನು ಅವಳಿಗೆ ಕಟ್ಟಿದ ನಂತರ ನನಗೆ ಕಟ್ಟಿ ಎಂದಾಗ, ಅಲ್ಲಿದ್ದ ಪುರೋಹಿತರು ಜನಿವಾರ ಬರಿ ಗಂಡು ಮಕ್ಕಳಿಗೆ ಮಾತ್ರ ಕಟ್ಟಬೇಕು ಹೆಣ್ಣುಮಕ್ಕಳಿಗೆ ಕಟ್ಟಬಾರದು ಅದು ನಮ್ಮ ಪದ್ದತಿಗೆ ವಿರುದ್ದವಾಗಿದೆ ಎಂದಾಗ ಬಾಲ್ಯದಲ್ಲಿದ ಎಂಟು ವರ್ಷದ ಬಸವಣ್ಣನವರು ಸಮಾಜದಲ್ಲಿ ಹೆಣ್ಣು ಗಂಡು ಎಂಬ ಭೇದವಿದೆ ಹೆಣ್ಣು ಮಕ್ಕಳಿಗೆ ನ್ಯಾಯದ ಕೊರತೆ ಇದೆ ಎಂದು ಸಮಾಜದಲ್ಲಿ ಬದಲಾವಣೆ ತರಬೇಕೆಂದು ಅರಿತ ಬಾಲ್ಯದ ಬಸವಣ್ಣನವರು ತನ್ನ ಗ್ರಾಮವನ್ನು ತೊರೆದು ಇಂದಿನ ಕೂಡಲ ಸಂಗಮಕ್ಕೆ ಬಂದು ಸತತ ಹನ್ನೆರಡು ವರ್ಷಗಳ ಕಾಲ ದಾರ್ಮಿಕ ವಿಷಯಗಳ ಬಗ್ಗೆ ಅದ್ಯಾಯನ ನಡೆಸಿ ಇಂದಿನ ಹೆಣ್ಣು ಮಕ್ಕಳಿಗೆ ಸಾಮಾಜಿಕ ನ್ಯಾಯ ಕೊಡಸಿದ ಕೀರ್ತಿ ಮೊದಲು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಅಂಗೈಯೊಳಗೆ ಲಿಂಗವನ್ನಿಟ್ಟು ಪೂಜಿಸಿದ ಬಸವಣ್ಣನವರು ದೈವತ್ವವನ್ನು ಸಹ ನಂಬುತ್ತಿದ್ದರು ಆದರೆ ಸಮಾದಲ್ಲಿ ಇಂದು ಕೇಲವರು ಅವರ ವಚನಗಳನ್ನು ತಿರುಚಿ ಬರೆಯುತ್ತಿದ್ದು, ಬಸವಣ್ಣನವರನ್ನು ಧೈವತ್ವಕ್ಕೆ ವಿರುದ್ದವಾಗಿದ್ದರು ಎಂದು ಬಿಂಬಿಸುವ ಪ್ರಯತ್ನದಲ್ಲಿದ್ದಾರೆ ಆದರೆ ಅದು ಫಲಿಸದ ಜಯವೆಂದು ಹೇಳಿದ ಅವರು, ದೈವದ ಮೇಲೆ ಬಸವಣ್ಣನವರಿಗೆ ನಂಬಿಕೆ ಇದೆ ಆದರೆ ಅಪನಂಬಿಕೆ ಇಲ್ಲವೆಂದು ಹೇಳಿದ ಅವರು ಲಿಂಗವೆಂಬುವದು ಪರಮಾತ್ಮನ ಸಂಕೇತವಾಗಿದ್ದು ಲಿಂಗದೊಳಗೆ ಕಾಸ್ಮೀಕ ಏನರ್ಜಿ ಇದ್ದು ಲಿಂಗಕ್ಕೆ ಬಿಟ್ಟರೆ ಆ ಶಕ್ತಿ ಇರುವುದು ಸೂರ್ಯನಿಗೆ ಮಾತ್ರ ಹಾಗಾಗಿ ಬಸವಣ್ಣನವರು ಪರಮಾತ್ಮನನ್ನು ಪೂಜಿಸುತ್ತಿದ್ದು ಆ ವಿಷಯದ ಬಸವ ಅನುಯಾಯಿಗಳು ಸಮಗ್ರವಾದ ಹಿನ್ನೆಲೆಯನ್ನು ಅರಿಯಬೇಕಾಗಿದೆ ಎಂದು ಅವರು ತಿಳಿಸಿದರು.

ಲಿಂಗಪ್ಪಾ ಮಂಗೋಡಿ ಅವರು ಮಾತನಾಡುತ್ತಾ ಸಮಾಜದಲ್ಲಿ ಬದಲಾವಣೆ ತರುವುದರಕ್ಕಿಂತಲೂ ಮೊದಲು ತಮ್ಮ ತಮ್ಮ ಮನಸ್ಸು ಸ್ವಚ್ಚವಾಗಿಟ್ಟಿಕೊಳ್ಳಬೇಕು, ನಾವು ಆಡುವ ಮಾತು, ನೀಡುವ ಭರವಸೆ, ನಡೆಯುವ ಹಾದಿ ಸ್ವಚ್ಚವಾಗಿರಬೇಕು ಅಂದಾಗ ಮಾತ್ರ ಮನಸ್ಸು ಸ್ವಚ್ಚವಾಗಿರುತ್ತದೆ, ಆಧುನಿಕ ಕಾಲದಲ್ಲಿ ಮಕ್ಕಳು ಸುಳ್ಳು ಹೇಳುವಂತಹ ಸ್ವಭಾವ ಬೀಡಬೇಕು ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು ಬರಿ ಪಾಠಶಾಲೆಯಲ್ಲಿ ಬೋಧನೆ ಮಾಡಿದರೆ ಸಾಲದು ಮಕ್ಕಳು ಯಾವ ಧಾರಿ ತುಳಿಯುತ್ತಿದ್ದಾರೆಂಬುವದು ಪಾಲಕರು ಅರಿಯಬೇಕು. ಅಕ್ಷರ ಜ್ಞಾನಕ್ಕಿಂತಲೂ ಸಂಸ್ಕಾರದ ಜ್ಞಾನ ಇಂದಿನ ಕಾಲದಲ್ಲಿ ಅಗತ್ಯವಿದೆ ಆ ನಿಟ್ಟಿನಲ್ಲಿ ಪಾಲಕರು ಮಕ್ಕಳನ್ನು ಸರಿಯಾದ ಧಾರಿಯಲ್ಲಿ ಮಕ್ಕಳನ್ನು ಬೆಳಸಬೇಕು, ಯಾವಾಗ ಪಾಲಕರ ಮನಸ್ಸು ಸ್ವಚ್ಚವಾಗಿರುತ್ತದೆಯೋ ಮಕ್ಕಳ ಮನಸ್ಸು ಸ್ವಚ್ಚವಾಗಿರುತ್ತದೆ, ಅದನ್ನೆ ಬಸವಣ್ಣನವರು ಹೇಳಿದರು ಎಂದು ಮಾತನಾಡಿದರು.

ಮೊದಲಿಗೆ ಕಾರ್ಯಕ್ರಮವನ್ನು ಬಸವೇಶ್ವರರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಪ್ರಾರಂಬಿಸಲಾಯಿತು, ಗುರು ಸಾವಳೆಸೂರ ಅವರು ಸ್ವಾಗತಿಸಿದರು, ನೀತಿನ ಮರಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕಾ ಪಂಚಾಯತ ಸದಸ್ಯರಾದ ಲಕ್ಷ್ಮೀಪುತ್ರ ಯಂಕಂಚಿ, ಗ್ರಾಮದ ಮುಖಂಡರಾದ ಸುಭಾಸಚಂದ್ರ ಮರಡಿ, ಅಶೋಕ ಮರಡಿ, ಬಸವ ಸಮೀತಿಯ ಅದ್ಯಕ್ಷರಾದ ಯುವರಾಜ ಮರಡಿ, ಬಿಜೆಪಿಯ ಮುಖಂಡರಾದ ಗುಂಡಪ್ಪಾ ಪರೀಟ, ಹಾಗೂ ಗ್ರಾಮದ ಹಿರಿಯರಾದ ಶಿವರಾಜ ಪಾಟೀಲ, ಯುವ ಮುಖಂಡರಾದ ಕೇಧರನಾಥ ಬಂಗರಗಿ, ನಾಗರಾಜ ವೇಧಶೇಟ್ಟಿ, ಶಿವಪುತ್ರ ಮರಡಿ, ಜೈ ಹನುಮಾನ ಕಮೀಟಿಯ ಅದ್ಯಕ್ಷರಾದ ಕ್ಷೇಮಲಿಂಗ ಸಲಗರ, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

10 mins ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

14 mins ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

19 mins ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

23 mins ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

28 mins ago

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420