ಬಿಸಿ ಬಿಸಿ ಸುದ್ದಿ

ವಾಡಿ ಬಿಜೆಪಿ ಕಛೇರಿಯಲ್ಲಿ ಅಮರನಾಥ ಪಾಟೀಲ ಪರ ಪ್ರಚಾರ ಸಭೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಈಶಾನ್ಯ ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಪ್ರಚಾರಕ್ಕಾಗಿ ನಿಯೋಜನೆಗೊಂಡ ಪ್ರಮುಖರನ್ನು ಉದ್ದೇಶಿಸಿ ವಿಧಾನ ಪರಿಷತ ಸದಸ್ಯರಾದ ಡಾ ಸಾಯಬಣ್ಣ ತಳವಾರ ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗಕ್ಕಾಗಿ ಕೌಶಲ ತರಬೇತಿಗಾಗಿ ಪ್ರೋತ್ಸಾಹ ಹಾಗೂ ಈ ಭಾಗದ ಶಿಕ್ಷಕರ ಮತ್ತು ಪದವೀಧರರ ಕಲ್ಯಾಣಕ್ಕಾಗಿ ಹಾಗೂ ಇಲ್ಲಿನ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷದ ವಿವಿಧ ಸ್ತರಗಳ ಹುದ್ದೆಗಳನ್ನು ನಿಭಾಯಿಸುವ ಮೂಲಕ ಅಮರನಾಥ ಪಾಟೀಲ ಅವರು ಶ್ರಮಿಸಿದ್ದಾರೆ.

ನಮ್ಮ ಭಾಗದ ಎಲ್ಲರ ಧ್ವನಿ ಯಾಗಿ ಕೆಲಸಮಾಡುವ ಮನಸ್ಸನ್ನು ಹೊಂದಿರುವಂತ ನಾಯಕರು ಆಯ್ಕೆ ಯಾದರೆ ಮಾತ್ರ ನಮ್ಮ ಮಕ್ಕಳು ಬಿಸಿ ಊಟಕ್ಕಾಗಿ ಎರಡೆರಡು ಕಿಲೋಮೀಟರ್ ನಡೆಯುವಂತ ಪರಿಸ್ಥಿತಿ ಮುಂದೆ ಬರುವುದಿಲ್ಲ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ನಮ್ಮ ಅಮರನಾಥ ಪಾಟೀಲ ಮಾಡುತ್ತಾರೆ
ಎಂದು ಹೇಳಿದರು.

ಈ ಸಂಧರ್ಭದಲ್ಲಿ ಚಿತ್ತಾಪುರದ ಉಸ್ತುವಾರಿ ಶರಣಪ್ಪ ತಳವಾರ,ಮುಖಂಡರಾದ ವಿಠಲ ನಾಯಕ, ಬಸವರಾಜ ಬೆಣ್ಣೂರ,ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಶರಣಗೌಡ ಚಾಮನೂರ, ಪರುತಪ್ಪ ಕರದಳ್ಳಿ,ಭೀಮರಾವ ದೊರೆ,ಕಾಂತು ಗೌಡ ಬೊಮ್ಮನಹಳ್ಳಿ,ಶಿವಶಂಕರ ಕಾಶೆಟ್ಟಿ,ಅಶೋಕ ಹರನಾಳ,
ಈರಣ್ಣ ಮಲ್ಕಂಡಿ, ಮೆಘನಾಥ ಚವ್ಹಾಣ, ರವಿ ಪಡ್ಲ, ಬಸವರಾಜ ಹಾದಿಮನಿ,ಭೀಮರಾಯ ನೀಳದ,ಈರಣ್ಣ ನಾಟೀಕರ,ಶಿವಕುಮಾರ ಹೂಗಾರ,ರಾಜಶೇಖರ ಸಂಗಶೆಟ್ಟಿ,ಗೋಪಿಚಂದ ರಾಠೋಡ, ವೀರೇಶ ಸ್ವಾಮಿ ಹಳಕರ್ಟಿ,ಹರಿ ಗಲಯ, ಭೀಮರಾಯ ಸುಬೇದಾರ,ಜಿತೇಂದ್ರ ನಾಯಕ,ಕಿಶನ ಜಾಧವ, ಪ್ರಕಾಶ ಪುಜಾರಿ,ಭಾರತ ರಾಠೋಡ, ಮಲ್ಲಿಕಾರ್ಜುನ ಸಾತಖೇಡ, ಹೀರಾ ನಾಯಕ,ಚಂದ್ರಶೇಖರ ಬೆಣ್ಣೂರ, ಆನಂದ ಇಂಗಳಗಿ, ರಾಜು ಕೋಲಿ,ಅಂಬದಾಸ ಜಾಧವ, ಸ್ಯಾಮಸನ್ ರೆಡ್ಡಿ, ರವಿ ನಾಯಕ ಅಳೊಳ್ಳಿ,ಪ್ರೇಮ ರಾಠೋಡ,ರಮೇಶ ಜಾಧವ,ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಅನಸುಬಾಯಿ ಪವಾರ ಸೇರಿದಂತೆ ನೂರಾರು ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

17 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

24 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago