ಬಿಸಿ ಬಿಸಿ ಸುದ್ದಿ

ಅಲ್ಪಸಂಖ್ಯಾತರ ಸರಕಾರಿ ನೌಕರರ ಮಕ್ಕಳಿಗೆ ಸನ್ಮಾನ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಲ್ಪಸಂಖ್ಯಾತರ ಸರಕಾರಿ ನೌಕರರ ಮಕ್ಕಳಿಗೆ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಪಡೆದು ಉತ್ತೀರ್ಣರಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.

ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೈಯ್ಯದ ನಜೀರೊದ್ದಿನ ಮುತವಲ್ಲಿರವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಡಾ: ಸದಾನಂದ ಪರ್ಲಾ ಅಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಣ ಅಧಿಕಾರಿಗಳು ಮತ್ತು ಅಲಾವೊದ್ದಿನ್ ಸಾಗರ ನಿವೃತ್ತ ಪ್ರಾಂಶುಪಾಲರು ಜೇವರ್ಗಿ ಪಿ.ಯು.ಕಾಲೇಜು ರವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ಹಿರಿಯ ಉಪಾಧ್ಯಕ್ಷರಾದ ಡಾ| ಅಸ್ಲಮ ಸಯೀದ್, ಸಂಘದ ಗೌರವ ಅಧ್ಯಕ್ಷರಾದ ಡಾ? ಎಂ.ಎಂ.ಬೇಗ್, ಹಾಗೂ ಸಂಘದ ಕಾರ್ಯಕಾರಿ ಅಧ್ಯಕ್ಷ ಅಸದ ಆಲಿ ಆನ್ಸಾರಿ ರವರು ವಹಿಸಿಕೊಂಡಿದ್ದರು.

ಕಾರ್ಯಕ್ರಮವನ್ನು ನಾತ ಹಾಗೂ ಖಿರಾತ ಪ್ರಾರ್ಥನೆಯೊಂದಿಗೆ ಅಸದ್ ಆಲಿ ಅನ್ಸಾರಿ ಹಾಗೂ ಮಹುಮ್ಮದ ಬಾಜಾ ಗೇಸುದರಾಜ ರವರು ಪಠಣದೊಂದಿಗೆ ಪ್ರಾರಂಭಿಸಿದರು. ಮುಖ್ಯ ಅತಿಥಿಯಾದ ಸದಾನಂದ ಪರ್ಲಾರವರು ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದವರಿಗೆ ಹಾಗೂ 10ನೇ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕುಟುಂಬದವರಿಗೆ ಅಭಿನಂದನೆಗಳು ಸಲ್ಲಿಸುತ್ತ ಕಲಬುರಗಿ ಜಿಲ್ಲೆಯಲ್ಲಿಯಾ ಫಲಿತಾಂಶದ ಹಿನ್ನಡೆ ಬಗ್ಗೆ ಶಿಕ್ಷಕರು, ಪಾಲಕರು ಮತ್ತು ಸ್ವಯಂ ಸೇವಾ ಸಂಘದವರು ಜಂಟಿ ಆಗಿ ಚಿಂತನೆ ಮಾಡಿ ಫಲಿತಾಂಶ ಹೆಚ್ಚಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಭೆಟ್ಟಿ ಮಾಡಿ ಚರ್ಚಿಸಿ ಮಾರ್ಗೋಪಾಯ ಕಂಡುಕೊಳ್ಳಬೇಕು ಇದು ಅತ್ಯಂತ ಅಗತ್ಯವಾದ ಕೆಲಸ ಎಂದು ಹೇಳಿದರು.

ಅಲವೊದ್ದೀನ್ ಸಾಗರ ಇವರು ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆ ಕಡಿಮೆ ಅಂಕಪಡೆದವರ ಬಗ್ಗೆ ಕೂಡ ಗಮನ ಕೊಡಬೇಕೆಂದು ಮನವಿ ಮಾಡಿ ಮುಂದಿನದಿನಗಳಲ್ಲಿ ಈ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉತ್ತಮವಾಗಿ ಕಂಡುಕೊಳ್ಳಬೇಕು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಾಪಕರು ನಿರಂತರ ಜ್ಞಾನವೃದ್ಧಿಗೆ ಆಸಕ್ತಿವಹಿಸಬೇಕೆಂದು ಹೇಳಿದ್ದರು.

ಇಂಜಿನಿಯರ ಹಾಗೂ ವೈದ್ಯರಷ್ಟೆ ಆಗುವ ಕನಸು ಬಿಟ್ಟು ಆಡಳಿತರಂಗ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಮಾಡಬೇಕು ಸಂಘದ ಉಪಾಧ್ಯಕ್ಷರಾದ ಡಾ| ಅಸ್ಲಂ ಸೈಯಿದ್ ರವರು ಹೇಳಿದರು.

ಸಂಘದ ಅಧ್ಯಕ್ಷರಾದ ಸೈಯ್ಯದ ನಜೀರೊದ್ದಿನ ಮುತವಲ್ಲಿ ರವರು ಅಲ್ಪಸಂಖ್ಯಾತರ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ 10ನೇ ತರಗತಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಮುಂದೆ ಪಿಯುಸಿಯಲ್ಲಿ ಕೂಡ ಹೆಚ್ಚಿನ ಅಂಕಪಡೆದು ಮತ್ತೆ ಮುಂದಿನ ದಿನಗಳಲ್ಲಿ ನಮ್ಮ ಸಂಘದವತಿಯಿಂದ ನಡೆಯುವ ಸನ್ಮಾನ ಕಾರ್ಯರಕ್ರದಮಲ್ಲಿ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕೀವಿ ಮಾತು ಹೇಳಿದ್ದರು.

10ನೇ ತರಗತಿಯಲ್ಲಿ ಉತ್ತೀರ್ಣರಾದ 22 ಪ್ರತಿಭಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಮತ್ತು ಪಿಯುಸಿ ಯಲ್ಲಿ ಉತ್ತೀರ್ಣರಾದ 11 ಜನ ಎರಡು ಸೇರಿ 33 ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಸೊಗಸಾಗಿ ನವಾಬಖಾನ್ ಕಾರ್ಯದರ್ಶಿ ರವರು ನಡೆಯಿಸಿಕೊಟ್ಟರು ಮತ್ತು ಸಂಘದ ಹಿರಿಯ ಉಪಾಧ್ಯಕ್ಷ ಮಹುಮ್ಮದ ಮಿನಹಾಡೊದ್ದಿನ ಹಾಗೂ ಜಂಟಿ ಕಾರ್ಯದರ್ಶಿಯಾದ ಅಬ್ದುಲ ಖದೀರ ಹಾಗೂ ಖಜಾಂಜಿ ಎಸ್.ಎಂ.ಖಾದ್ರಿ ಮತ್ತು ಖಾಯಂ ಸದಸ್ಯರಾದ ಮಹುಮ್ಮದ ಇಸ್ಮಾಯಿಲ್ ಇನಾಮಾರ ಮತ್ತು ಖಾಜಾ ಮೈನೋದ್ದಿನ್ ನಿವೃತ್ತ ಆಡಿಟ ಆಫಿಸರ್ ಹಾಗೂ ಸಮಸ್ಥ ಪದಾಧಿಕಾರಿಗಳು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago