ಶಹಾಬಾದ:ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಮತ್ತು ನಿರಂತರ ಕಲಿಕೆಗೆ ಬೇಸಿಗೆ ಶಿಬಿರಗಳು ಅತ್ಯಂತ ಸಹಕಾರಿಯಾಗಿವೆ ಎಂದು ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಹೇಳಿದರು.
ಅವರು ನಗರದ ಪ್ರಜ್ಞಾ ಆಂಗ್ಲ ಮಾಧ್ಯಮ ಕೋಚಿಂಗ್ ಕೇಂದ್ರದಿಂದ ಆಯೋಜಿಸಲಾದ ಬೇಸಿಗೆ ಶಿಬಿರದ ವಿದ್ಯಾರ್ಥಿಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಿನಲ್ಲಿ ಆಟವಾಡಿ ರೋಗಕ್ಕೆ ತುತ್ತಾಗುವುದು.ಊರಿಗೆ ಹೋಗುವುದು.ಕಾಲ ಕಳೆಯುವ ಮೂಲಕ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಕಲಿಕೆಯಿಂದ ದೂರವಾದ ಮಕ್ಕಳು ಅಭ್ಯಾಸವನ್ನು ಮರೆಯುತ್ತಾರೆ.ಆದರೆ ಶಿಬಿರಗಳು ಮಕ್ಕಳ ನಿರಂತರ ಕಲಿಕೆಗೆ ಹಾಗೂ ಜ್ಞಾನ ಅಭಿವೃದ್ಧಿಗೆ ಉಪಯೋಗವಾಗಲಿದೆ.ಅಲ್ಲದೇ ಇತ್ತಿಚ್ಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಅವರ ಕಲಿಕೆಯ ಮಟ್ಟ ಕುಸಿಯುತ್ತಿದೆ. ರೋಗಕ್ಕೆ ತುತ್ತಾಗುತ್ತಿದ್ದಾರೆ.ಆದ್ದರಿಂದ ಪಾಲಕರು ದಯಮಾಡಿ ಮಕ್ಕಳ ಕೈಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ನೀಡಬೇಡಿ.ಬಳಸದಂತೆ ಎಚ್ಚರವಹಿಸಿ ಎಂದರು.
ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಹಿಂದುಳಿದ ಈ ಭಾಗದಲ್ಲಿ ಕೋಚಿಂಗ್ ಶಿಬಿರಗಳಗಿರುವುದು ವಿರಳ.ಅದರಲ್ಲಿ ನವೋದಯ ಕೋಚಿಂಗ್ ನೀಡುವ ಮೂಲಕ ಮಕ್ಕಳಿಗೆ ಒಳ್ಳೆಯ ಜ್ಞಾನ ನೀಡುತ್ತಿದ್ದಾರೆ.ಇದರಿಂದ ಈಗಾಗಲೇ ನವೋದಯಕ್ಕೆ ಆಯ್ಕೆಯಾಗಿದ್ದಾರೆ. ಈ ಕೋಚಿಂಗ್ ಕೇಂದ್ರ ನಿರಂತರವಾಗಿ ಇಲ್ಲಿನ ಬಡ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡಲಿ ಎಂದು ಆಶಿಸುವೆ ಎಂದರು.
ಶಿಕ್ಷಕ ರಮೇಶ ಜೋಗದನಕರ್ ಮಾತನಾಡಿ,ಮಕ್ಕಳ ಸವಾರ್ಂಗೀಣ ವ್ಯಕ್ತಿತ್ವ ವಿಕಸನವಾಗಲು ಮತ್ತು ಮಕ್ಕಳ ಕಲಿಕೆ ಅಭಿವೃದ್ಧಿಗೊಳಿಸುವ ವೇದಿಕೆ ಇದಾಗಿದೆ.ಪ್ರಜ್ಞಾ ಎಂದರೆ ಅರಿವು.ಆ ಜ್ಞಾನದ ಅರಿವು ನೀಡುವ ಪ್ರಜ್ಞಾ ಕೋಚಿಂಗ್ ಕೇಂದ್ರ ಎತ್ತರಕ್ಕೆ ಬೆಳೆಯಲಿ ಮತ್ತು ಮಕ್ಕಳನ್ನು ಚೆನ್ನಾಗಿ ಬೆಳೆಸಲಿ ಎಂದರು.
ಅತಿಥಿಗಳಾಗಿ ಮರೆಪ್ಪ ಮೇತ್ರಿ ಮಾತನಾಡಿ,ವಿದ್ಯಾಭ್ಯಾಸ ಮಾಡು ಎಂದು ಸಾಕಷ್ಟು ಮನೆಗೆಲಸ ಹಾಕಿ ಮಕ್ಕಳ ಮೇಲೆ ಒತ್ತಡ ಹಾಕುವುದರಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಲಿದೆ. ಪಾಲಕರು, ಶಿಕ್ಷಕರು ಮಕ್ಕಳಿಗೆ ನಿರಂತರವಾಗಿ ಓದು, ಬರೆ ಎಂದು ಒತ್ತಡ ಹಾಕದೇ ಮುಕ್ತವಾಗಿ ಕಲಿಯಲು ಬಿಡಿ.ಇದರಿಂದ ಅವರು ಒತ್ತಡದಿಂದ ಮುಕ್ತರಾಗಿ ಸಂತೋಷದಿಂದ ಕಲಿಯುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಸುರೇಖಾ.ಪಿ.ಮೇತ್ರಿ, ಮಕ್ಕಳಿಗೆ ಪಠ್ಯದ ಜತೆಗೆ ನೈತಿಕ ಮೌಲ್ಯಗಳ್ಳುಳ್ಳ ಪಠ್ಯೇತರ ಚಟುವಟಿಕೆಗಳನ್ನು ಮಾಡಿಸುವುದರಿಂದ ಅವರ ಭೌತಿಕ ಮಟ್ಟ ಹೆಚ್ಚಾಗಲಿದೆ. ಅದಕ್ಕಾಗಿಯೇ ಬೇಸಿಗೆ ಶಿಬಿರದಲ್ಲಿ ಪಠ್ಯೇತರ ವಿಷಯಗಳಿಗೆ ಒತ್ತು ನೀಡಿ ಮಕ್ಕಳಿಗೆ ಕಲಿಸಿಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಂಡು ಒಳ್ಳೆಯ ಸಂಸ್ಕಾರವನ್ನು ಬಿತ್ತಲಾಗುವುದು ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಲೋಹಿತ್ ಕಟ್ಟಿ, ನಾಗಣ್ಣ ರಾಂಪೂರೆ ಮಾತನಾಡಿದರು.
ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕಗಳ ಜತೆ ಪೆನ್ನು, ಪುಸ್ತಕಗಳನ್ನು ನೀಡಲಾಯಿತು. ಪ್ರೀತಾ.ವಿ.ಎಮ್ ಸ್ವಾಗತಿಸಿದರು, ಪಿ.ಎಸ್. ಮೇತ್ರಿ ನಿರೂಪಿಸಿ, ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…