ಕೊಪ್ಪಳ,: ಪ್ರಸ್ತುತ ರಾಜ್ಯ ಮತ್ತು ಕೇಂದ್ರದಿಂದ ಯುವಜನರಿಗೆ ಶಕ್ತಿ ನೀಡಲು ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಹಾಗೂ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸುವದಾಗಿ ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಕೊಪ್ಪಳ ಮತ್ತು ಕೊಪ್ಪಳದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಹಯೋಗದೊಂದಿಗೆ 2019-20 ನೇ ಸಾಲಿನ ಕೊಪ್ಪಳ ತಾಲೂಕ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿ, ಯುವಜನರು ನಿತ್ಯ ಯೋಗ, ವ್ಯಾಯಾಮ ರೂಢಿಸಿಕೊಳ್ಳಬೇಕು ಪ್ರತಿ ಕಾಲೇಜಿನಲ್ಲಿ ಅಂಥಹ ಯೋಜನೆಗೆ ಮತ್ತು ಪ್ರತಿ ಗ್ರಾಮ ಪಂಚಾಯತಿಗೊಂದು ಜಿಮ್ ಆರಂಭಿಸಲು ಪ್ರಯತ್ನಿಸಲಾಗುವದು. ಯುವಜನರು ಕ್ರಿಯಾಶೀಲರಾಗಬೇಕು ಎಂದರು. ಇದೇ ವೇಳೆ ಸಿಂಧನೂರಿನ ವಿದ್ಯಾರ್ಥಿನಿ ಚಂದ್ರಯಾನ-2 ಕಾರ್ಯಕ್ರಮದಲ್ಲಿ ಭಾಗಿಯಾದದ್ದು ಮತ್ತು ಕಿನ್ನಾಲ ಗ್ರಾಮದ ನಾಲ್ಕನೆ ತರಗತಿ ಹುಡುಗ ನ್ಯಾಯಾಲಯಕ್ಕೆ ಹೋಗಿ ಹಕ್ಕು ಪಡೆದಿರುವದು ಶ್ಲಾಘನೀಯ ಎಂದರು.
ಅಧ್ಯಕ್ಷತೆವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಶಾಟ್‍ಪುಟ್ ಎಸೆಯುವ ಮೂಲಕ ಕೂಟಕ್ಕೆ ಚಾಲನೆ ನೀಡಿ, ಕ್ರೀಡೆಗೆ ಬೇಕಿರುವ ಸೌಲಭ್ಯ ಮತ್ತು ಗ್ರಾಮೀಣ ಯುವಜನರ ಸಂಕಷ್ಟಕ್ಕೆ ನೆರವಾಗಲು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಸಲ್ಲಿಸಿರುವ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಕ್ರೀಡಾಪಟು ಮತ್ತು ಯುವಜನರ ತಂಡದೊಂದಿಗೆ ಭೇಟಿ ಮಾಡಿ ಅಗತ್ಯ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದ ಅವರು, ಹಿಂದಿನ ಸರಕಾರದಲ್ಲಿ ಹಲವು ಕೋಟಿ ಹಣದಲ್ಲಿ ತಾಲೂಕ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಮತ್ತು ಮೂಲಭೂತ ಸೌಲಭ್ಯ ಮಾಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿ.ವಿ. ಚಂದ್ರಶೇಖರ್ ಮಾತನಾಡಿ, ಯುವಜನರಿಗೆ ಇವತ್ತು ಪಠ್ಯಕ್ರಮವಷ್ಟೇ ಅಲ್ಲದೆ, ಆಟೋಟ ತುಂಬಾ ಮುಖ್ಯವಾಗಿದೆ, ಯುವಜನರಿಗೆ ಕ್ರೀಡೆ ಸಂಸ್ಕಾರವನ್ನು ಕಲಿಸುತ್ತದೆ, ಕ್ರೀಡಾ ಮನೋಭಾವ ಜೀವನದುದ್ದಕ್ಕೂ ಬೇಕಿರುವ ಮನಸ್ಥಿತಿ, ಅದಕ್ಕಾಗಿ ಯುವಜನರು ಶ್ರಮವಹಿಸಿ ಕೆಲಸ, ದುಡಿಮೆ, ಅಭ್ಯಾಸ ಮತ್ತು ತರಬೇತಿ ಮಾಡಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಪದವಿಪೂರ್ವ ಕಾಲೇಜು ಹಂತದಲ್ಲಿ ಕ್ರೀಡೆ ಮಿಸ್ ಆಗಿದೆ, ಪ್ರೌಢ ಶಾಲೆಗಳಿಗೆ ದೈಹಿಕ ಶಿಕ್ಷಕರಿದ್ದಾರೆ, ಪದವಿ ಕಾಲೇಜುಗಳಿಗೆ ದೈಹಿಕ ನಿರ್ದೇಶಕರಿದ್ದಾರೆ ಆದರೆ ನಡುವಿನ ಎರಡು ವರ್ಷ ಮಾತ್ರ ಅದ್ಯಾವುದು ಇಲ್ಲದೇ ಕ್ರೀಡೆ ಸೊರುಗುತ್ತಿದೆ ಇದನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ಶಾಸಕರು ಮುಂದಿನ ಅಧಿವೇಶನದಲ್ಲಿ ಈ ಪ್ರಶ್ನೆ ಎತ್ತಬೇಕು ಎಂದು ಮನವಿ ಸಲ್ಲಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್. ಜಿ. ನಾಡಿಗೀರ, ವಿನೂತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ, ಗುತ್ತಿಗೆದಾರರಾದ ಚಂದ್ರಶೇಖರ್ ಹಳ್ಳಿ, ಚೇತನ್ ಡಾಗಾ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರಸನ್ನ ಗಡಾದ, ಉದ್ಯಮಿಗಳಾದ ಕೌಶಲ್ ಚೋಪ್ರಾ, ಅರಿಹಂತ ಜೈನ್, ಗಣೇಶ ಹೊರತಟ್ನಾಳ, ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವೀರಭದ್ರಯ್ಯ ಪೂಜಾರ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವಿರುಪಾಕ್ಷಪ್ಪ ಬಾಗೋಡಿ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಹನುಮಸಾಗರ, ದೈಹಿಕ ಶಿಕ್ಷಣ ಅಧೀಕ್ಷ ಎ. ಬಸವರಾಜ, ಉಪನ್ಯಾಸಕರಾದ ಸಂತೋಜಿ ಎಸ್. ಬಿ., ಕೊಟ್ರಪ್ಪ ನೀರಲಗಿ, ಶೇಖರ್ ಟಿ. ಆರ್., ರೇಣುಕಾ ಹಡಗಲಿ ಇತರರು ಇದ್ದರು.
ಪ್ರಾಚಾರ್ಯ ಹೆಚ್. ಎಸ್. ದೇವರಮನಿ ಸ್ವಾಗತಿಸಿದರು, ಬಸವರಾಜ ಸವಡಿ ಮತ್ತು ಹೆಚ್.ಎಸ್. ಬಾರಕೇರ ನಿರೂಪಿಸಿದರು, ಉಪನ್ಯಾಸಕ ನೂರಬಾಷಾ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…