ಬಿಸಿ ಬಿಸಿ ಸುದ್ದಿ

ಕಲಬುರಗಿ ಸೇರಿದಂತೆ ಕಲ್ಯಾಣ ನಾಡಲ್ಲಿ ಕಾಂಗ್ರೆಸ್‌ ಜಯಭೇರಿ: ಶಾಸಕ ಅಜಯ್ ಸಿಂಗ್‌ ಸಂತಸ

ಕಲಬುರಗಿ: ಲೋಕಸಭೆ ಕ್ಷೇತ್ರದಲ್ಲಿನ ಕಾಂಗ್ರೆಸ್‌ ಪಕ್ಷದ ಹುರಿಯಾಳಾಗಿದ್ದ ರಾಧಾಕೃಷ್ಣ ದೊಡ್ಮನಿಯವರ ಗೆಲುವಿಗೆ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್‌ ಸಂತಸ ಹೊರಹಾಕಿದ್ದಾರೆ.

ಇಲ್ಲಿನ ಜ್ಞಾನಗಂಗೆ ಅಂಗಳದಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಜನತೆ, ಅದರಲ್ಲೂ ಗ್ರಾಮೀಣ ಜನತೆ ರಾಜ್ಯದಲ್ಲಿನ ಕಾಂಗ್ರೆಸ್‌ ಪಂಚ ಗ್ಯಾರಂಟಿಗಳಿಗೆ ಮನಸೋತು ಮತ ಹಾಕಿದ್ದಾರೆ. ಇದಲ್ಲದೆ ಎಐಸಿಸಿ ಅಧ್ಯಕ್ಷರು ಲೋಕಸಭೆಯಲ್ಲಿ ಘೋಷಿಸಿರುವ ಅನೇಕ ಗ್ಯಾರಂಟಿ ಯೋಜನೆಗಳಿಗೂ ಗಮನ ಕಟ್ಟು ಜನ ಮತ ಹಾಕಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಎರಡಂಕಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ಆದಾಗ್ಯೂ ಬಿಜೆಪಿ- ಜೆಡಿಎಸ್‌ ಮೈತ್ರಿ ದಕ್ಷಿಣದಲ್ಲಿ ಕಾಂಗ್ರೆಸ್‌ ಗೆಲುವಿಗೆ ಅಡ್ಡಿಯಾಗಿರಬಹುದು. ಆಜರೆ ನಾವು ಕಲ್ಯಾಣ ನಾಡಲ್ಲಿರುವ ಎಲ್ಲಾ 5 ಸ್ಥಾನ ಗೆದ್ದು ಬೀಗಿದ್ದೇವೆ. ಎಐಸಿಸಿ ಅದ್ಯಕ್ಷರ ತವರು ನಾಡು ಈ ಬಾಗದಲ್ಲಿ ಕಾಂಗ್ರೆಸ್‌ ಮತ್ತೆ ಎಂದಿನಂತೆ ಕಳೆಗಟ್ಟಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಕಾಂಗ್ರೆಸ್‌ ಕಲ್ಯಾಣಕ್ಕೆ ನೀಡಿರುವ ಕಲಂ 371 ಜೆ ಕೊಡುಗೆ ಫಲ ಕೊಟ್ಟಿದೆ. ಎಐಸಿಸಿ ಅಧ್ಯಕಕ್ಷರಾದ ಡಾ. ಖರ್ಗೆಯವರು, ಮಾಜಿ ಸಿಎಂ ದಿ. ಧರಂಸಿಂಗ್‌ ಅವರ ಶ್ರಮದ ಫಲವಾಗಿ ಕಲಂ 371 ನಮಗೆ ಸಿಕ್ಕಿದೆ. ಜನತೆಗ ಇದರ ಲಾಭ ಮನವರಿಕೆಯಾಗಿದ್ದು ಅವರೆಲ್ಲರೂ ಕೈ ಹಿಡಿದಿದ್ದಾರೆಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ದೇಶದಲ್ಲೇ ಇಂಡಿಯಾ ಒಕ್ಕೂಟಕ್ಕೆ ಜನ ಬೆಂಬಲಿಸಿದ್ದಾರೆ. ನಾವು 295 ಸ್ಥಾನ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಹೇಳಿಕೆ ನೀಡಿದ್ದೇವು. ಜನತೆಯೂ ನಮಗೆ ಅದೇ ದಿಶೆಯಲ್ಲಿ ಹರಸಿದ್ದಾರೆ. ಜನ ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳ ಒಕ್ಕೂಟದ ಪರ ಇದ್ದಾರೆ. ನಮ್ಮ ಧೋರಣೆಗಳನ್ನು ಮೆಚ್ಚಿಕೊಂಡಿದ್ದಾರ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ.

ದೇಶದ ಜನ ಮಂದಿರ- ಮಸೀದಿಯಂತಹ ವಿವಾದಗಳಿಗೆ ಎಡೆಮಾಡಿಕೊಡದೆ, ದಿನದ ಬದುಕಿಗೆ ಮೂಲ ಸವಲತ್ತು ಕೊಟ್ಟು ಹಸನು ಮಾಡುವ ಧೋರಣೆಗಳಿರುವ ಕಾಂಗ್ರೆಸ್‌ ಮೆಚ್ಚಿದ್ದಾರೆ ಎಂಬುದಕ್ಕೆ ಇದೇ ಚುನಾವಣೆ ಸಾಕ್ಷಿ. ರಾಮ ಮಂದಿರ ಸೇರಿದಂತೆ ಅನೇಕ ಭಾವನಾತ್ಮಕ ಸಂಗತಿಗಳು ಈ ಚುನವಣೆಯಲ್ಲಿ ಬಿಜೆಪಿಯವರ ನಿರೀಕ್ಷೆಯಂತೆ ಕೆಲಸ ಮಾಡಲಿಲ್ಲ. ಜನ ಇಂತಹ ಭಾವನಾತ್ಮಕ ಸಂಗತಿಗಳನ್ನು ಪುರಸ್ಕರಿಸೋದಿಲ್ಲ ಎಂಬುದು ಮತ್ತೊಮ್ಮೆ ಚುನಾವಣೆಯ ಫಲಿತಾಂಶ ಸಾಬೀತು ಮಾಡಿದೆ ಎಂದು ಡಾ. ಅಜಯ್ ಸಿಂಗ್‌ ಹೇಳಿದ್ದಾರೆ.

ಕಲಬುರಗಿಯಲ್ಲಿಯೂ ಅನೇಕ ಭಾವನಾತ್ಮಕ ಸಂಗತಿಗಳನ್ನು ಮುಂದಜೆ ಮಾಡಲು ಬಿಜೆಪಿ ಬಯಸಿತಾದರೂ ಅವು ಜನ ಗಮನ ಕೊಡಲಿಲ್ಲ. ಕಾಂಗ್ರೆಸ್‌ನ ಕನೆಕ್ಟ್‌ ಕಲಬುರಗಿ, ಅಭಿವೃದ್ಧಿ ಸಂಗತಿಗಳನ್ನೇ ಜಿಲ್ಲೆಯ ಜನತೆ ಮೆಚ್ಚಿಕೊಂಡು ರಾಧಾಕೃಷ್ಣರ ಕೈ ಹಿಡಿದಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಕಲಬುರಗಿ ಸೇರಿದಂತೆ ಈ ಭಾಗದ ಪ್ರಗತಿಗೆ ಬದ್ಧವಾಗಿರಲಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago