ಬಿಸಿ ಬಿಸಿ ಸುದ್ದಿ

ಚಿಂಚೋಳಿ: ಅಧ್ದೂರಿ ಅಶ್ವರೂಢ ಬಸವಣ್ಣ ಪುತ್ಥಳಿ ಅನಾವರಣ

ಚಿಂಚೋಳಿ:-ತಾಲೂಕಿನ ವ್ಯಾಪಾರ ನಗರವೆಂದ ಪ್ರಖ್ಯಾತಿ ಪಡೆದ ಸುಲೇಪೇಟ ಗ್ರಾಮದಲ್ಲಿ ವಚನಕಾರ ಸಂಸ್ಕೃತಿ ಸಾರಿದ ವಿಶ್ವಗುರು ಅಶ್ವರೂಢ ಬಸವಣ್ಣನವರ ಪುತ್ತಳಿಯನ್ನು ಡಾ. ಬಸವಲಿಂಗ ಪಟ್ಟದೇವರು ಲೋಕಾರ್ಪಣೆ ಮಾಡಿದರು.

ನಂತರ ಕಾರ್ಯಕ್ರಮವನ್ನ ಜ್ಯೋತಿ ಬೇಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು
ಬಸವಣ್ಣನವರು ನವ ಚೇತನಕ್ಕೆ, ಬಡವರ ಏಳಿಗೆ ಸಮಾನತೆಗಾಗಿ ಶ್ರಮಿಸಿದವರು ಅವರ ಪುತ್ಥಳಿ ನಿರ್ಮಾಣ ಮಾಡಿದ ತಕ್ಷಣ ಒಳಿತಾಗುವುದಿಲ್ಲ ಪ್ರತಿಯೊಬ್ಬ ವ್ಯಕ್ತಿಯೂ ಬಸವಣ್ಣನವರ ವಚನಗಳು ಪಟಿಸಬೇಕು ಮತ್ತು ಅವರ ಆದರ್ಶ ತತ್ವ ಪಾಲಿಸಬೇಕು ಅಂದಾಗ ಮಾತ್ರ ಒಳಿತಾಗುವದು ಸುಲೇಪೇಟ ಗ್ರಾಮ ಕಲ್ಯಾಣ ಆಗುವುದು ಎಂದು ಹೇಳಿದರು.

ನಂತರ ಸೇಡಂ ಸದಾಶಿವ ಮಾಹಾಸ್ವಾಮಿಗಳು ಮಾತನಡಿದರು.ಇದಕ್ಕೂ ಮೊದಲು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಆರಂಭವಾದ ಬೃಹತ್ ಬೈಕ್ ರ್ಯ್ಯಲಿ ಮಾರ್ಕೆಟ ರಸ್ತೆಯಿಂದ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಬಸವಣ್ಣನವರ ಮೂರ್ತಿಗೆ ಐದು ಸುತ್ತುಹಾಕಲಾಯಿತು ನಂತರ ವೀರಭದ್ರೇಶ್ವರ ದೇವಾಲಯದಿಂದ ಶ್ರೀ ಬಸವಣ್ಣನವರ ಮೇರವಣಿಗೆ ಜಯಘೋಷ ಡೊಳ್ಳು ಡಿಜೆ ಮೇಳದೊಂದಿಗೆ ಭಡಕಲ್,ಮಾರ್ಕೆಟ್ ರಸ್ತೆಯುದ್ದಕ್ಕು ನೃತ್ಯ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮಕ್ಕೆ ಸುಲೇಪೇಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹೊಡಭಿರನ್ನಳಿ, ಕುಪನೂರ,ಗಡಿಕೇಶ್ವರ,ಐನಾಪುರ,ದೇಗಲಮಡಿ,ಚಿಂಚೋಳಿ,ದಸ್ತಾಪುರ,ಎಲಕಪಳ್ಳಿ,ಕೊರಡಂಪಳ್ಳಿ,ಕೇರಳಿ,ಸಿರೊಳ್ಳಿ,ಚಿಮ್ಮಾಇದಲಾಯಿ,ರುದನೂರ,ಸೇರಿದಂತೆ ಅನೇಕ ಹಳ್ಳಿಗಳಿಂದ ಬಸವಣ್ಣ ಭಕ್ತಾಧಿಗಳು ಆಗಮಿಸಿದ್ದರು.

ಮೋಡ ಕವಿದ ವಾತಾವರಣವಿದ್ದ ಕಾರಣ ಜೋರಾದ ಮಳೆ ಬರುವ ಸಂಭವವಿತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಬಸವಾಭಿಮಾನಿಗಳಿಗೆ ವರುಣ ಕೊಂಚ ಚಿಂತೆಮಾಡುವಂತೆ ಮಾಡಿದ ಇಷ್ಟೊಂದು ಒಳ್ಳೆ ಕಾರ್ಯಕ್ರಮ ಜರುಗುತ್ತಿದ್ದು ವರುಣ ಬಂದು ಎಲ್ಲಿ ಕಾರ್ಯಕ್ರಮಕ್ಕೆ ಅಡ್ಡಿಆಗುತ್ತಾನೊ ಎನ್ನುವ ಜನರಲ್ಲಿ ಭಯ ಮನೆಮಾತಾಗಿತ್ತು ಆದರೆ ವರುಣನ ಕೃಪೆಯಿಂದ ಯಾವದೆ ರೀತಿಯ ತೋಂದರೆಯಾಗದೆ ಅಧ್ದೂರಿಯಾಗಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ನಾಡೋಜ ಪುರಸ್ಕೃತ ಪರಮಪೂಜ್ಯ ಡಾಕ್ಟರ್ ಬಸವಲಿಂಗ ಪಟ್ಟದೇವರು ಸಂಸ್ಥಾನ ಹಿರೇಮಠ ಭಾಲ್ಕಿ, ವೀರ ತಪಸ್ವಿ ವೀರಭದ್ರ ಶಿವಾಚಾರ್ಯರು ಮಹಾಂತೇಶ್ವರ ಮಠ ಸುಲೇಪೇಟ, ಶ್ರೀ ಶಿವಶಂಕರ ಶಿವಾಚಾರ್ಯರು ಶಿವಶಂಕರ ಮಠ ಸೇಡಂ,ಡಾ. ಶಿವಾನಂದ ಮಹಾಸ್ವಾಮಿಗಳು ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠ ಹುಲಸುರ್, ಶ್ರೀ ಚಿಕ್ಕ ಗುರುರಾಜ ಮಹಾಸ್ವಾಮಿಗಳು ಭರತನೂರ,ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ ಮುಗಳನಾಗಾಂವ್,ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿರಕ್ತ ಮಠ ರಟಗಲ್,ಶ್ರೀ ರೇವಣಸಿದ್ದ ಶಿವಾಚಾರ್ಯರು ಶಿವಲಿಂಗೇಶ್ವರ ಮಠ ರಾಯಕೋಡ್,ಸಿದ್ದಲಿಂಗ ಶಿವಾಚಾರ್ಯರು ಹಿರೇಮಠ ಹೊಸಳ್ಳಿ,ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಹಿರೇಮಠ ಚಂದನಕೇರ,ಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ,ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಹಾಲಪ್ಪಯ್ಯ ವಿರಕ್ತಮಠ ಸೇಡಂ,ಶ್ರೀ ಸಿದ್ದರಾಮ ಶಿವಾಚಾರ್ಯರು ಸಾಲಿ ಟೆಂಗಿನ ಮಠ ಸುಲೇಪೇಟ,ಶ್ರೀ ಖಂಟ್ವಾಂಗೇಶ್ವರ ದೇವರು ಸುಲೇಪೇಟ, ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಐನಾಪುರ,ಪರಮಪೂಜ್ಯ ಪಂಚಾಕ್ಷರಿ ದೇವರು ಐನಾಪುರ, ಪರಮಪೂಜೆ ಶರಣೆ ಅಕ್ಕ ಗಂಗಾಭಿಕ ಹರಳಯ್ಯ ಪೀಠ ಬಸವಕಲ್ಯಾಣ, ಕಾರ್ಯಕ್ರಮದ ಅಧ್ಯಕ್ಷರಾದ ಮುರಗೇಪ್ಪ ಕುಕ್ಕಡಿ,ಮಹಾರುದ್ರಪ್ಪ ದೇಸಾಯಿ,ವಿರೇಶ ದೇಸಾಯಿ,ಸುನಿಲಕುಮಾರ ಕೋರಿ,ಶಿವಕುಮಾರ ಸೊಂತ,ಶಿವಕುಮಾರ ಸೊಂತ,ಮಲ್ಲಿಕಾರ್ಜುನ ದೇಸಾಯಿ, ಶಿವಾನಂದ ಪಾಟೀಲ, ಶಿವಕುಮಾರ ಕಂತಿ,ಜಯಂತ ಶಿಲವಂತ,ಚಂದ್ರಶೇಖರ ಸ್ವಾಮಿ, ಮಹೇಶ ಬೇಮಳಗಿ,ಶಿವಲಿಂಗಯ್ಯ ಶಾಸ್ತ್ರಿ,ದಯಾನಂದ ರೇಮಣಿ,ವಿರೇಶ ಹಿರೆನ್,ಸುಭಾಷ್ ಪಾಟೀಲ್, ರಾಜಕುಮಾರ ಮಳಖೇಡ್,ಅಮರೇಶ ಸೊಂತ,ನಾಗೇಶ ಚಾಂಗಲೇರಾ,ಶರಣಬಸಪ್ಪ ಸೊಂತ,ರಮೇಶ ದೇಸಾಯಿ,ಶರಣು ಮೇದಾರ,ಸಂಗಮೇಶ ಕಂತಿ,ಮಹೇಶ ಅವರಾದಿ,ವೈಜಿನ್ನಾಥ ದಾದಿ,ಮಂಜು ಪಟವಾದಿ,ಲಿಂಗರಾಜ ಸ್ವಾಮಿ, ಸೇರಿದಂತೆ ಅನೇಕ ಬಸವಾಭಿಮಾನಿಗಳು ಇದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

3 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

4 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

4 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

4 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

5 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

5 hours ago