ಶಹಾಬಾದ್: ಪಟ್ಟಣದ. ಮುಗಳನಾಗವಿ ಗ್ರಾಮದಲ್ಲಿ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ್ ಕೆ ಎಚ್ ಪಿ ಟಿ ಸ್ಪೂರ್ತಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಹದಿ ಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮ ಮುಗುಳನಾಗವಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದಂತಹ ಜಿಲ್ಲಾ ಎನ್ , ಓ ,ಎಚ್, ಪಿ. ಕಾರ್ಯಕ್ರಮಾಧಿಕಾರಿಗಳು ಕಲಬುರಗಿ ಡಾ. ಸಂಧ್ಯಾ ಕಾನೇಕರ್ ರವರು ಮಾತನಾಡುತ್ತಾ ತಂಬಾಕು ಸಾಂಕ್ರಮಿಯವಾದ ವಿಶ್ವವೂ ಎದುರಿಸಿದ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ತಂಬಾಕು ತಿನ್ನುವ ಎಲ್ಲ ಜನರಿಗೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೊಡ್ಡ ಅಪಾಯವಾಗಿದೆ ಹೃದಯ ಸಂಬಂಧಿ ಕಾಯಿಲೆಗಳು ಉಸಿರಾಟದ ಕಾಯಿಲೆಗಳು ಮತ್ತು ಕ್ಯಾನ್ಸರ್ ದಂತ ದೊಡ್ಡ ಸಾಂಕ್ರಾಮಿಕ ವಲ್ಲದ ರೋಗಗಳು ಇತ್ತೀಚಿನಗಳಲ್ಲಿ ಸಾಮಾನ್ಯವಾಗಿ ಯುವಜನರಲ್ಲಿ ಕಾಣುತ್ತಿದೆ ವಿಶೇಷವಾಗಿ ಬರಿ ಕ್ಯಾನ್ಸರ್ ನಾಲಿಗೆ ಧ್ವನಿ ಪೆಟ್ಟಿಗೆ ಮತ್ತು ಗಂಟಲ ಕುಳಿ ಅನ್ನನಾಳ ಹೊಟ್ಟೆ ಪಿತ್ತಕೋಶ ಶೇಕಡ 40% ಕ್ಷಯ ರೋಗ ಸಂಬಂಧ ಪಟ್ಟಂತ ಕಾಯಿಲೆಗಳು ತಂಬಾಕು ಸೇವನೆಯಿಂದ ಬರುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಿಗರೇಟ್ ಬಿಡಿ ಮತ್ತು ಪಕ್ಕದಂತ ತಂಬಾಕು ಉತ್ಪನ್ನಗಳನ್ನು ಗಳಿಸಿದಾಗ ಅದರಿಂದ ಉಂಟಾಗುವ ಒಗೆಯುವ ಸ್ಥಳವನ್ನು ಆವರಿಸಿ ಅಲ್ಲಿರುವ ಜನರನ್ನು ಉಸಿರಾಡದ ಮೂಲಕ ಸೇವಿಸುವಂಥಾದರೆ ಅದನ್ನು ಪರೋಕ್ಷ ತುಂಬ ಧೂಮಪಾನ ಎನ್ನುತ್ತೇವೆ.ಅದೇ ರೀತಿಯಾಗಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದಂತಹ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ್ ರವರು ಮಾತನಾಡುತ್ತಾ ಭಾರತ ಸರ್ಕಾರ 2007 – 2008ರಲ್ಲಿ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು ತಂಬಾಕು ಉತ್ಪನ್ನಗಳು ಉತ್ಪಾದನೆ ಮತ್ತು ಸರಬರಾಜನ್ನು ಕಡಿಮೆ ಮಾಡುವುದು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು ಕಳೆದ ಎರಡು ಸಾವಿರದ ಮೂರು ಅಡಿಯಲ್ಲಿ ನಿಬಂಧನೆಗಳು ಪರಿಣಾಮಕಾರಿ ಅನುಷ್ಠಾನವನ್ನು ಜಾರಿ ಮಾಡಬೇಕು ಎನ್ನುವ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವು ಒಂದು ಪ್ರಮುಖ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ ತಂಬಾಕು ವಸನೆಗಳಿಗೆ ತಂಬಾಕು ಸೇವನೆಯನ್ನು ತ್ಯಜಿಸಲು ಅವರನ್ನು ಮಾನಸಿಕ ಮಾಡಿ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಕೋಪ್ಟಾ ಕಾಯಿದೆ 2003ರ ಬಗ್ಗೆ ಸೆಕ್ರೆಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹಿರಾತು ನಿಷೇಧ ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ವಿತರಣೆಯ ನಿಯಂತ್ರಣ 2003 ರಲ್ಲಿ ಭಾರತ ಸಂಸತ್ತಿನ ಕಾಯ್ದೆಯಲ್ಲಿ ಜಾರಿ ಗೊಂಡಿತ್ತು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸ್ಪೂರ್ತಿ ಯೋಜನೆಯ ಜಿಲ್ಲಾ ಸಂಯೋಜಕರಾದ ಶಿವಯೋಗಿ ಮಠಪತಿ ರವರು ಮಾತನಾಡುತ್ತಾ ಸ್ಪೂರ್ತಿ ಯೋಜನೆಯಲ್ಲಿ ಹದಿ ಹರಿದವರ ಆರೋಗ್ಯ ಶಿಕ್ಷಣ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಸೌಲಭ್ಯಗಳು ಹದಿಹರೆಯದ ಹೆಣ್ಣು ಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡಿ ಅವರ ವೈಯಕ್ತಿಕ ಸಮಸ್ಯೆಗಳಿಗೆ ಸ್ಪೂರ್ತಿ ಯೋಜನೆ ಸಹಾಯಕವಾಗಿದೆ ಎಂದು ಹೇಳಿದರು.
ಅದೇ ರೀತಿಯಾಗಿ ಆಪ್ತ ಸಮಾಲೋಚಕರು ಅಮರೇಶ್ ಇಟ್ಟಗಿ , ಸ್ನೇಹ ಕ್ಲಿನಿಕ್ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಬಗ್ಗೆ ವಿವರವಾಗಿ ತಿಳಿಸಿದರು. ಅದೇ ರೀತಿಯಾಗಿ ಮುಖ್ಯ ಅತಿಥಿಗಳಾಗಿ ಪಶು ವೈದ್ಯಾಧಿಕಾರಿಗಳು ಡಾ|| ದೀಪ್ತಿ ಅಲ್ವರ್ತಿ ಮಾತನಾಡುತ್ತಾ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಪ್ರಾಣಿಗಳು ಕೂಡ ಸ್ವಚ್ಛವಾಗಿರುತ್ತವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರು ಜಗನ್ನಾಥ್ ರಾವ್ , ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹದಿಹರೆಯದ ಮಕ್ಕಳು ಊರಿನ ನಾಗರಿಕರು ಉಪಸ್ಥಿತರಿದ್ದರು. ತಾಲೂಕು ಸಂಯೋಜಕರು ಸ್ಪೂರ್ತಿ ಯೋಜನೆಯ ರೇಣುಕಾ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…