ಬಿಸಿ ಬಿಸಿ ಸುದ್ದಿ

ರಂಗಾಯಣ ನಿರ್ದೇಶಕರ ವಜಾ: ತೀವ್ರ ವಿರೋಧ

ಕಲಬುರಗಿ: ಹೊಸದಾಗಿ ಅಸ್ತಿತ್ವಕ್ಕೆ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರಂಗಾಯಣ ನಿರ್ದೇಶಕರನ್ನು ವಜಾ ಮಾಡಿರುವುದಕ್ಕೆ ನಿರ್ದೇಶಕರು ರಂಗ ಸಮಾಜ ಸದಸ್ಯರು ಹಾಗೂ ರಂಗ ಕಲಾವಿದರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆಯೊಂದನ್ನು ನೀಡಿರುವ ಅವರುಗಳು, ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅದರಂತೆ ಕಲಬುರಗಿ ರಂಗಾಯಣದ ನಿರ್ದೇಶಕ ಮಹೇಶ ವಿ. ಪಾಟೀಲ ಅವರು ಸಹ ಬೇಸರ ವ್ಯಕ್ತಪಡಿಸಿ ಈ ಸ್ಪಷ್ಟೀಕರಣ ನೀಡಿರುತ್ತಾರೆ.

“ಯಾವುದೇ ರೀತಿಯ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಯಾವುದೇ ಪಕ್ಷಗಳಿಗೆ ಸಂಬಂಧಪಟ್ಟಿರುವುದಿಲ್ಲ . ಬದಲಾಗಿ ಅವುಗಳು ಪಕ್ಷಾತೀತವಾಗಿರುತ್ತವೆ. ದೇಶದ ಸಾಂಸ್ಕೃತಿಕ ಕಲೆ, ಅಭಿವೃದ್ಧಿ ಮತ್ತು ಮನುಷ್ಯರನ್ನು ಸುಸಂಸ್ಕೃತ ಗೋಳಿಸುವುದಕ್ಕಾಗಿ ಸಾಂಸ್ಕೃತಿಕ ಸಂಸ್ಥೆಗಳಾದ ಎಲ್ಲ ತರಹದ ಅಕಾಡೆಮಿಗಳು, ಪ್ರಾಧಿಕಾರಗಳು, ರಂಗಾಯಣಗಳು ಮತ್ತು ತರಬೇತಿ ಕೇಂದ್ರಗಳು ಸರಕಾರದಿಂದ ನಿಯೋಜಿತ ವಾಗಿರುತ್ತವೆ . ಇವುಗಳಿಗೆ ಸ್ವಾಯತ್ತ ಸಂಸ್ಥೆಗಳು ಎಂದು ಹೇಳುತ್ತೇವೆ. ಸಾಂಸ್ಕೃತಿಕ ಕಲೆಗಳು ಇಡೀ ದೇಶಕ್ಕೆ , ಸಮುದಾಯಕ್ಕೆ , ಜನಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತವೆ .

ಆಡಳಿತದಲ್ಲಿರುವ ರಾಜಕೀಯ ಪಕ್ಷ ಎಲ್ಲ ಸ್ವಾಯತ್ತ ಸಂಸ್ಥೆಗಳ ನಿರ್ದೇಶಕರನ್ನು , ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ನೇಮಕ ಮಾಡಿದ ಮೇಲೆ ಕಾರಣಾಂತರಗಳಿಂದ ಆ ಪಕ್ಷ / ಸರಕಾರ ಉರುಳಿ ಹೋದ ಮೇಲೆ ಮತ್ತೊಂದು ಪಕ್ಷ/ ಸರಕಾರ ಆಡಳಿತಕ್ಕೆ ಬಂದ ನಂತರ ಹಿಂದಿನ ಪಕ್ಷ ನೇಮಕ ಮಾಡಿರುವ ವ್ಯಕ್ತಿಗಳನ್ನು ಕಾರಣವಿಲ್ಲದೆ ಅಕಾಲಿಕವಾಗಿ ವಜಾ ಮಾಡುವುದು ಸರ್ಕಾರದ ಯಾವ ಶ್ರೇಷ್ಠ ಕೆಲಸವಾಗಿದೆ . ಅವರ ಅವಧಿ ಮುಗಿಯುವವರೆಗೂ ಅವರಿಗೆ ಕಾರ್ಯನಿರ್ವಹಿಸಲು ಸ್ವತಂತ್ರವಾಗಿ ಬಿಡಬೇಕು. ಯಾವುದೇ ರಾಜಕೀಯ ಒತ್ತಡ ಅವರ ಮೇಲೆ ಹೇರಬಾರದು .

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ನಿರ್ಮಿತವಾದ ಪ್ರಜಾಪ್ರಭುತ್ವ ಸರ್ಕಾರದಲ್ಲಿರುವ ರಾಜಕೀಯ ಪಕ್ಷಗಳು ಇವತ್ತು ಪ್ರಜೆಗಳ ಹಿತವನ್ನು ಗಾಳಿಗೆ ತೂರಿ, ನಿರಂಕುಶವಾಗಿ ಸರ್ವಾಧಿಕಾರ ಚಲಾಯಿಸುತ್ತಿವೆ. ಪ್ರಜಾಪ್ರಭುತ್ವದ ಯಾವ ತತ್ವಗಳನ್ನು ಇವತ್ತು ಯಾವ ರಾಜಕೀಯ ಪಕ್ಷಗಳು ಪಾಲಿಸುತ್ತಿಲ್ಲ. ಸಾಂಸ್ಕೃತಿಕ ಕಲೆಗಳು , ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಸ್ವಾಯತ್ತ  ಸಂಸ್ಥೆಗಳು ಇವು ರಾಜಕೀಯದಿಂದ ಹೊರ ಗುಳಿದಿರುತ್ತವೆ. ಪಕ್ಷಗಳಿಗೆ ಮೀರಿ ಇರುತ್ತವೆ. ಅಕಾಡೆಮಿಗಳ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಹಾಗೂ ರಂಗಾಯಣಗಳ ನಿರ್ದೇಶಕರನ್ನು ರಂಗಸಮಾಜದ ಸದಸ್ಯರನ್ನು ಅಕಾಲಿಕವಾಗಿ ವಜಾ ಮಾಡಿರುವುದು ಈಗಿರುವ ಸರ್ಕಾರಕ್ಕೆ ಯಾವ ಘನತೆ ತಂದುಕೊಟ್ಟಿದೆ …?

ನಾನು ಬೇರೆ ರಾಜ್ಯದಲ್ಲಿ ರಂಗಭೂಮಿ, ಸಿನೆಮಾ ಮತ್ತು ಟಿವಿಯಲ್ಲಿ ಕಾರ್ಯನಿರತವಾಗಿದ್ಧೆ. ಮಾಜಿ ರಂಗ ಸಮಾಜದ ಸದಸ್ಯರು ರಂಗಾಯಣ ಕಲಬುರಗಿಗೆ  ನಿರ್ದೇಶಕನಾ ಗುವಂತೆ ನನಗೆ ಒತ್ತಾಯಿಸಿದರು . ಮೂಲತಃ ನಾನು ಬೀದರ್ ಜಿಲ್ಲೆಯವನಾಗಿದ್ದು, ದೆಹಲಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯದಿಂದ ನಿರ್ದೇಶನದಲ್ಲಿ  ತರಬೇತಿ ಪಡೆದು ಎನ್.ಎಸ್.ಡಿ ಪದವೀಧರ ನಾಗಿದ್ದೇನೆ. ನೆಲದ ನಂಟು ನೆಲ ಋುಣ  ಎಂದು ನಾನು ರಂಗಾಯಣ ಕಲಬುರಗಿಗೆ ನಿರ್ದೇಶಕನಾಗಲು ಒಪ್ಪಿಕೊಂಡೆ .ನಿರ್ದೇಶಕನಾಗಿ ನೇಮಕಗೊಂಡ ಮೇಲೆ ಅನೇಕ ಕ್ರಿಯಾ ಯೋಜನೆಗಳನ್ನು  ಹಮ್ಮಿಕೊಂಡಿದ್ದೆ. ಆದರೆ ಮಾಜಿ ಆಡಳಿತ ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಯಾವುದೇ ರೀತಿಯ ಸಹಕಾರವಿರಲಿಲ್ಲ. ಆದರೂ  ನಾನು ನನ್ನ ಛಲ ಬಿಡದೆ ನನ್ನ ಶಕ್ತಿ ಮೀರಿ ದುಡಿದಿದ್ದೇನೆ .

ರಂಗಾಯಣ ಕಲಬುರಗಿಯ ಕ್ರಿಯಾ ಯೋಜನೆಗಳು ಮತ್ತು ಸಿದ್ಧತೆಯಾಗಿರುವ ನಾಟಕಗಳು

1) ಡಾ ಸ್ವಾಮಿರಾವ ಕುಲಕರ್ಣಿ ಅವರು ಬರೆದಿರುವ ಹಳೆಗನ್ನಡ ನಾಟಕ *ನಿನ್ನಿ ಕೇಶ  ಪಾಶ೦

2) ಪ್ರಕಾಶ ಗರುಡ ಅವರ ರಂಗರೂಪ *ಸಾಗ್ರ ಸಂಗೀತ ಮೃಚ್ಛಕಟಿಕ ಇದಕ್ಕೆ ಪಿ. ಗಂಗಾಧರ ಸ್ವಾಮಿ ಯವರು ನಿರ್ದೇಶನವನ್ನು ಮಾಡಿದ್ದಾರೆ.

3) ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಎಲ್.ಬಿ.ಕೆ. ಅಲ್ದಾಳ್ ಅವರು ಬರೆದಿರುವ *ಸುರಪುರದ ಸ್ವಾತಂತ್ರ್ಯ ಸೇನಾನಿ ರಾಣಿ ಈಶ್ವರಮ್ಮ ಉತ್ತರ ಕರ್ನಾಟಕದ ನಾಟಕ .

4) ಕಲ್ಯಾಣ ಕರ್ನಾಟಕ ವೈಭವ …ಸುವರ್ಣ ಯುಗ ಎಂಬ ಬೃಹತ್ ನಾಟಕವನ್ನು ಕಲಬುರ್ಗಿ ವಿಭಾಗದ 6 ಜಿಲ್ಲೆಗಳಿಂದ 26 ಜನ ಹಿರಿಯ ಸಾಹಿತಿಗಳಿಂದ ರಚಿತವಾಗಿದೆ . 1ನೇ ಶತಮಾನದಿಂದ 20ನೇ ಶತಮಾನದವರೆಗಿನ ಕಲಬುರ್ಗಿ ವಿಭಾಗದ ದಾಸ ಸಾಹಿತ್ಯ, ವಚನ ಸಾಹಿತ್ಯ, ಶರಣ ಸಾಹಿತ್ಯ, ಮತ್ತು  ಸೂಫಿ-ಸಂತರ ಇತಿಹಾಸವನ್ನು  ಒಳಗೊಂಡಿದೆ.

5) ಕಳೆದ ಬೆಂಗಳೂರು ಮೀಟಿಂಗ್ ನಲ್ಲಿ 4 ರಂಗಾಯಣದವರು ಸರ್ವರಿಗೂ ಸಂವಿಧಾನ ನಾಟಕ ಮಾಡಬೇಕು ಎಂದು ಹೇಳಿ ಆದೇಶವನ್ನು ಹೋರಡಿಸಿದ್ದರು . ಆದೇಶದನ್ವಯ ಸರ್ವರಿಗೂ ಸಂವಿಧಾನ ಎನ್ನುವ ನಾಟಕದ ಸ್ಕ್ರಿಪ್ಟ್ ಅನ್ನು  4 ರ೦ಗಾಯಣದವರು ಸಿದ್ಧಪಡಿಸಿದ್ಧಾರೆ. ಈ ಪ್ರಾಜೆಕ್ಟ್  ರಂಗಾಯಣದ ಅತಿ ದೊಡ್ಡ ಜವಾಬ್ದಾರಿ ಮತ್ತು  ಕೆಲಸವಾಗಿದೆ.

6) 2020 ರಲ್ಲಿ ಚಿಣ್ಣರ ಮೇಳ – 4 ರ ದಿನಾಂಕವನ್ನು ನಾವು ಮುಂಚಿತವಾಗಿ ಘೋಷಣೆ ಮಾಡಿದ ನಂತರ  ಅದರ ಯೋಜನೆ ಕೂಡ ಮಾಡಲಾಗಿತ್ತು .

7) ಭಾನುವಾರ ಮಕ್ಕಳ ವಿಶೇಷ ಕಾರ್ಯಾಗಾರವನ್ನು ಕಲಾವಿದರು ತಂತ್ರಜ್ಞರು ಮತ್ತು  ನಿರ್ದೇಶಕರು ಕಚೇರಿ ವತಿಯಿಂದ ಯಾವುದೇ ಬಜೆಟ್ ಇಲ್ಲದೇ 12  ಭಾನುವಾರ ಯಶಸ್ವಿಯಾಗಿ ಪಾಠ ಮಾಡಿದ್ದರು . ಇನ್ನೂ ಮುಂದುವರೆದು ಮಕ್ಕಳಿಂದ ನಾಟಕ ಮಾಡಿಸಬೇಕಾಗಿತ್ತು . ಆದರೆ ಈಗ ಅರ್ಧದಲ್ಲಿ ನಿಂತು ಹೋಯಿತು .

8) ಕಲಬುರ್ಗಿ ವಿಭಾಗದ ಎಲ್ಲ ನಿರ್ದೇಶಕರಿಗೆ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ 21 ದಿನಗಳ ವಿಶೇಷ ತಾಂತ್ರಿಕ ಕಾರ್ಯಾಗಾರ ಯೋಜನೆಯಲ್ಲಿತ್ತು.

9) ನವರಸ ನವರಂಗ ದಶಾವತಾರ ನಾಟ್ಯ ಮಹೋತ್ಸವ ಯೋಜನೆಯಲ್ಲಿತ್ತು.

10) 6 ಜಿಲ್ಲೆಗಳಲ್ಲಿ ಚಿಕ್ಕ ಮಕ್ಕಳ ನಾಟಕೋತ್ಸವ ಯೋಜನೆಯಲ್ಲಿತ್ತು.

11) ಅಂತಾರಾಷ್ಟ್ರೀಯ ನಾಟಕ ಮಹೋತ್ಸವ ಯೋಜನೆಯಲ್ಲಿತ್ತು.

12) ಕಲಬುರಗಿ ವಿಭಾಗದ ಹವ್ಯಾಸಿ  ಕಲಾ ತಂಡಗಳಿಂದ ನಾಟಕಗಳ ಪ್ರದರ್ಶನಗಳು ಯೋಜನೆಯಲ್ಲಿತ್ತು.

13) ಏಕಪಾತ್ರ ಅಭಿನಯ ನಾಟಕ ಮಹೋತ್ಸವ ಯೋಜನೆಯಲ್ಲಿತ್ತು.

14) ವೃತ್ತಿ ರಂಗಭೂಮಿ ನಾಟಕ ಮಹೋತ್ಸವ ಯೋಜನೆಯಲ್ಲಿತ್ತು.

15) ರಂಗಭೂಮಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಗೋಷ್ಠಿ ಮತ್ತು  ಸಂವಾದಗಳ ಕಾರ್ಯಕ್ರಮ ಯೋಜನೆಯಲ್ಲಿತ್ತು.

16) ರಂಗಾಯಣ ಕಲಬುರಗಿ ನಾಟಕಗಳ ತಿರುಗಾಟ ಯೋಜನೆಯಲ್ಲಿತ್ತು.

17) 3500 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ಮಲ್ಹಾರ ಬಯಲು ರಂಗಮಂದಿರದ ನಿರ್ಮಾಣ ಕಾರ್ಯ ಯೋಜನೆಯಲ್ಲಿತ್ತು.

18) ಕಲಬುರಗಿ ವಿಭಾಗದ 6 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎಲ್ಲ ತರಹದ ಕಲೆ ಮತ್ತು ಕಲಾವಿದರ ಕಿರು ಪರಿಚಯ ಪುಸ್ತಕ ಹೊರ ತರಲು ಸುಮಾರು 2200 ಕಲಾವಿದರ ಮಾಹಿತಿಯನ್ನು ಸಂಗ್ರಹ ಮಾಡಲಾಗಿದೆ.

19) ಮರೆಯಾಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿಕೊಳ್ಳಲು ತಜ್ಞರಿಂದ ಕಲಾವಿದರಿಗೆ ತರಬೇತಿ ತಾಂತ್ರಿಕ ಕಾರ್ಯ ರಂಗಾಯಣ ಕಲಬುರಗಿ ಪ್ರಾರಂಭವಾಗಿ 5 ವರ್ಷ ಕಳೆದರೂ ಒಂದು  ರೆಪರ್ಟರಿಗೆ ಬೇಕಾಗುವ ಯಾವ  ಇಕ್ಯುಪ್ಮೆಂಟ್ ಇಲ್ಲ. ಲೈಟ್ ಸೌಂಡ್ ಮೇಕಪ್ ವಸ್ತುಗಳು ಎಲ್ಲ ಇಕ್ಯುಪ್ಮೆಂಟ್ ಮತ್ತು ವಸ್ತುಗಳನ್ನು ತರುವ ಎಲ್ಲ ಸಿದ್ಧತೆಗಳು ಆಗಿತ್ತು .

1) ರಂಗಾಯಣಗಳಿಗೆ ಬೇರೆ ನಿರ್ದೇಶಕರನ್ನು ನೇಮಕ ಮಾಡುವ ಹಾಗಿದ್ದರೆ ಈಗಿರುವ ನಿರ್ದೇಶಕರ ಕಾಲಾವಧಿ ಮುಗಿಯುವ ಮುನ್ನ ಅಕಾಲಿಕವಾಗಿ ವಜಾ ಮಾಡಿರುವುದು ಯಾಕೆ …?

2) ರಂಗಭೂಮಿಯ ಬಗ್ಗೆ ಮತ್ತು ರಂಗಭೂಮಿಯಲ್ಲಿ ಬಳಸುವ ಸೈಡ್ವಿಂಗ್ ಕರ್ಟನ್ಸ್ ಲೈಟ್ ಸೌಂಡ್ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ ತಿಳಿದಿರುವುದಿಲ್ಲ.ಹಾಗಿದ್ದ ಮೇಲೆ ರಂಗಭೂಮಿಯ ಗತಿ ಏನು …?

3) ಅವಧಿ ಮುಗಿಯುವ ಮುಂಚಿತವಾಗಿ ನಮ್ಮನ್ನು ವಜಾ ಮಾಡಿದ್ದಿರಿ… ನಮ್ಮ ವೈಯಕ್ತಿಕ ಯೋಜನೆಗಳನ್ನು 3 ವರ್ಷಕ್ಕಾಗಿ ನಾವು ಪೋಸ್ಟ್ ಪೌಂಡ್ ಮಾಡಿಕೊಂಡಿದ್ದೆವು. ಈಗ ನಮ್ಮ ವೈಯಕ್ತಿಕ ಜೀವನ ಮತ್ತು ಯೋಜನೆಗಳ ಗತಿ ಏನು …? ಸರ್ಕಾರ ನಮಗೆ ಸುಳ್ಳು ಪ್ರಮಾಣ ಏಕೆ ಮಾಡಿತು …? ನಮಗೆ ಆಗಿರುವ ನಷ್ಟ ಯಾರು ಭರಿಸುತ್ತಾರೆ …?

4) ರಂಗಭೂಮಿ ಮತ್ತು ಸಾಂಸ್ಕ ಕಲೆಗಳಲ್ಲಿ ಆಗುತ್ತಿರುವ ನಷ್ಟ ಯಾರು ಭರಿಸುತ್ತಾರೆ…?

5) ಸಾಂಸ್ಕೃತಿಕ ಕಲೆಗಳಲ್ಲಿ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡುತ್ತಿರುವುದು ಯಾಕೆ …? ಎಂದು 4 ರಂಗಾಯಣಗಳ  ನಿರ್ದೇಶಕರು ಮತ್ತು  ರಂಗ ಸಮಾಜದ ಸದಸ್ಯರು ಪ್ರಶ್ನಿಸಿದ್ದಾರೆ .

4 ರಂಗಾಯಣದ ನಿರ್ದೇಶಕರಿಗೆ ರಂಗಭೂಮಿಯಲ್ಲಿ ಸುಮಾರು ಮೂವತ್ತೈದು ವರ್ಷಕ್ಕಿಂತ ಹೆಚ್ಚು ಅನುಭವವಿದೆ . ಮೂರು ವರ್ಷ ಕಾಲಾವಧಿಯಲ್ಲಿ ಪ್ರತಿ ತಿಂಗಳ 30 ಸಾವಿರ ರೂಪಾಯಿ ಮಾತ್ರ ಸಂಬಳ ಇರುತ್ತೆ. ಯಾವುದೇ ರೀತಿಯ ಇನ್ಕ್ರಿಮೆಂಟ್, ಪ್ರಮೋಶನ್, ಗ್ರ್ಯಾಚುಟಿ ಮತ್ತು  ಪೆನ್ಶನ್ ಇರುವುದಿಲ್ಲ . ಹಾಗೆ ಇದು ಖಾಯಂ ಹುದ್ದೆ ಕೂಡ ಇಲ್ಲ. ನಿರ್ದೇಶಕರು ತಮ್ಮ ಜೀವನದ ಅಮೂಲ್ಯವಾದ ಸಮಯವನ್ನು ರಂಗಾಯಣಕ್ಕಾಗಿ 3 ವರ್ಷ ಕೊಟ್ಟಿರುತ್ತಾರೆ. ಅಲ್ಲದೇ ಪ್ರತಿ ತಿಂಗಳು ನಟ – ನಟಿಯರಿಗೆ 12000/- ರೂಪಾಯಿ ತಂತ್ರಜ್ಞರಿಗೆ 20000/- ರೂಪಾಯಿ ಮಾತ್ರ ಸಂಬಳವಿರುತ್ತದೆ.

ಈಗಾಗಲೇ ಸಾಂಸ್ಕೃತಿಕ ಸ್ವಾಯತ್ತ ಸಂಸ್ಥೆಗಳಿಗೆ ಆಯ್ಕೆಗೊಂಡ ಆಯಾ ಕ್ಷೇತ್ರದ ಸಾಧಕರಿಗೆ ಅವಮಾನ ಮಾಡಿದಂತೆ ಇದು. ಸಾಂಸ್ಕೃತಿಕ ಕಲೆಗಳಲ್ಲಿ ಮತ್ತು ರಂಗಭೂಮಿಯಲ್ಲಿ ಸರ್ಕಾರ ರಾಜಕೀಯ ಹಸ್ತಕ್ಷೇಪ ಮಾಡುವುದು ನಿಲ್ಲಿಸಿ. ನಮ್ಮ ಯೋಜನೆಗಳ ಪ್ರಕಾರ ಕೆಲಸ ಮಾಡಲು ಮತ್ತೆ ಅನುಮತಿ ಕೊಡಬೇಕು.

ಮಹೇಶ್ ವಿ ಪಾಟೀಲ ನಿರ್ದೇಶಕರು, ರಂಗಾಯಣ ಕಲಬುರ್ಗಿ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago