ಶಹಾಬಾದ:ಭಾರತದ ಸಂವಿಧಾನವನ್ನು ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಆದರೆ ಜಗತ್ತಿನ ಸಂವಿಧಾನ ಬರೆದವರು ವಿಶ್ವಗುರು ಬಸವಣ್ಣನವರು ಎಂದು ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಹೇಳಿದರು.
ಅವರು ತಾಲೂಕಾಡಳಿತ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬಸವಣ್ಣನವರು ಹಾಗೂ ಬಸವಾಧಿ ಶರಣರು ನೀಡಿದ ವಚನಗಳೇ ನಮಗೆ ಸಂವಿಧಾನ. ಬಸವಣ್ಣನವರು ನಮಗೆ ನೀಡಿದ ಸಂವಿಧಾನವೆಂದರೆ ಅದು ಬದುಕಿನ ಸಂವಿಧಾನ. ಬದುಕು ಹೇಗಿರಬೇಕು ಎನ್ನುವುದು ಕುರಿತು ಸರಳವಾಗಿ ವಚನಗಳ ಮೂಲಕ ನಮಗೆಲ್ಲರಿಗೂ ತಿಳಿಸಿದ್ದಾರೆ.ಬಸವಣ್ಣ ಒಬ್ಬ ಲೋಕಸೂರ್ಯವಿದ್ದಂತೆ. ಎಲ್ಲಿ ಸೂರ್ಯನ ಬೆಳಕು ಹೋಗುತ್ತದೆಯೋ ಅಲ್ಲಿ ಕತ್ತಲು ಮಾಯವಾಗುತ್ತದೆ.ಅದೇ ರೀತಿ ಬಸವಣ್ಣ ಇರುವಲ್ಲಿ ಅಜ್ಞಾನ, ಮೂಢನಂಬಿಕೆ ಎಂಬ ಕತ್ತಲೆಗೆ ಜಾಗವಿಲ್ಲ. ಅಲ್ಲಿ ಮೇಲು-ಕೀಳೀಲ್ಲ. ಅಸಮಾನತೆ ಮಾತೇ ಇಲ್ಲ.ಇಂತಹ ಬದುಕಿನ ಸಂವಿಧಾನವನ್ನು ಕೊಟ್ಟವರು ಬಸವಣ್ಣನವರು ಎಂದು ಹೇಳಿದರು.
ತಹಸೀಲ್ದಾರ ಮಲಶೆಟ್ಟಿ ಚಿದ್ರೆ ಮಾತನಾಡಿ,ಜ್ಞಾನ ಕಣಜವಾಗಿರುವ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು ನಡೆದರೇ ಸಮಾಜದಲ್ಲಿ ಪ್ರೀತಿ, ದಯೆ, ಕರುಣೆ ಉಂಟಾಗಿ ಎಲ್ಲರೂ ಒಂದಾಗಿ ಬಾಳಬಹುದು.ಆದರೆ ಇಂದು ಜಾತಿಗಳ ಮಧ್ಯೆ ದ್ವೇಷ ಬಿತ್ತುವ ಕಾರ್ಯ ನಡೆದಿದ್ದು, ಅದರಿಂದ ಹೊರಬರಬೇಕಾದರೆ ಬಸವಣ್ಣನವರ ವಿಚಾರಗಳು ನೆತ್ತಿಯೊಳಗೆ ಪ್ರವೇಶಮಾಡಬೇಕಿದೆ ಎಂದರು.
ತಾಪಂ ಇಓ ಮಲ್ಲಿನಾಥ ರಾವೂರ ಮಾತನಾಡಿ, ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿದ್ದೆಯಾದರೆ ಈ ಜಗತ್ತು ಸುಂದರ ಮಯವಾಗಿರುತ್ತದೆ. ವಚನಗಳು ನಮ್ಮ ಬದುಕಿಗೆ ದಾರಿ ದೀಪ. ಶರಣರು ನೀಡಿದ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು, ಮತ್ತೊಬ್ಬರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಅಂಧಕಾರವನ್ನು ಹೋಗಲಾಡಿಸಲು ಪ್ರಯತ್ನಪಡೋಣ ಎಂದು ಹೇಳಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…