ಕಲಬುರಗಿ ವಿಭಾಗದ 1,008 ಶಾಲೆಗಳಲ್ಲಿ ಎಲ್.ಕೆ.ಜಿ/ಯು.ಕೆ.ಜಿ. ತರಗತಿ ಪ್ರಾರಂಭ

ಪ್ರಾಥಮಿಕ ಹಂತದಲ್ಲಿಯೇ ಗುಣಾತ್ಮಕ ಶಿಕ್ಷಣಕ್ಕೆ ಒತ್ತು: ಡಾ.ಆಕಾಶ ಎಸ್.

ಕಲಬುರಗಿ; ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಮತ್ತು ಆರಂಭದಲ್ಲಿಯೆ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರವು ಪ್ರಸಕ್ತ 2024-25ನೇ ಸಾಲಿನಲ್ಲಿ ಕಲಬುರಗಿ ವಿಭಾಗದ ಆಯ್ದ 1,008 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ-ಯು.ಕೆ.ಜಿ.) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು, ಅದರಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಲ್.ಕೆ.ಜಿ-ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ ಎಸ್. ತಿಳಿಸಿದ್ದಾರೆ.

ಸರ್ಕಾರದ ಆದೇಶ ದಿನಾಂಕ: 11.06.2024ರ ಪ್ರಕಾರ ಬೀದರ ಜಿಲ್ಲೆಯಲ್ಲಿ 98, ಬಳ್ಳಾರಿಯಲ್ಲಿ 119, ಕಲಬುರಗಿಯಲ್ಲಿ 234, ಕೊಪ್ಪಳದಲ್ಲಿ 131, ರಾಯಚೂರಿನಲ್ಲ್ಲಿ 190, ವಿಜಯನಗರದಲ್ಲಿ 142 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 94 ಸೇರಿದಂತೆ ಒಟ್ಟಾರೆ ವಿಭಾಗದ 1,008 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ಅನುಮತಿ ದೊರೆತಿದೆ ಎಂದರು.

ಆರಂಭಿಕ ಹಂತದಿಂದಲೇ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಅರ್ಹ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಮಕ್ಕಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ “ಆರಂಭಿಕ ಶಿಕ್ಷಣದ” ಸೌಲಭ್ಯವನ್ನು ಕಲ್ಪಿಸಿಕೊಡುವುದು ಸರ್ಕಾರದ ಅಭಿಲಾಷೆಯಾಗಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರಾಧೇಶಿಕ ಅಭಿವೃದ್ಧಿ ಮಂಡಳಿಯು ಸಹ “ಅಕ್ಷರ ಆವಿμÁ್ಕರ” ಕಾರ್ಯಕ್ರಮದ ಮೂಲಕ ಕೈಜೋಡಿಸಿದೆ.

ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ ತರಗತಿಗಳು ನಡೆಯುತ್ತಿವೆ. ಅಲ್ಲಿ ದಾಖಲಾದ ಮಕ್ಕಳ ವಿವರಗಳನ್ನು ಅವಲೋಕಿಸಿದಾಗ, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅದರ ಸಂಖ್ಯೆ ತೀರಾ ಕಡಿಮೆ ಇದೆ ಎಂಬುದು ಅಂಕಿ-ಸಂಖ್ಯೆಯಿಂದ ಗೊತ್ತಾಗುತ್ತದೆ. ಬೆಂಗಳೂರು ವಿಭಾಗದಲ್ಲಿ 3,073 ಶಾಲೆಗಳಲ್ಲಿ ಅತೀ ಹೆಚ್ಚು 1,71,523 ಮಕ್ಕಳು ಪ್ರವೇಶ ಪಡೆದರೆ, ಕಲಬುರಗಿ ವಿಭಾಗದಲ್ಲಿ 967 ಶಾಲೆಗಳಲ್ಲಿ 32,805 ಅತೀ ಕಡಿಮೆ ಮಕ್ಕಳು ಪ್ರವೇಶಾತಿ ಪಡೆಯುತ್ತಿದ್ದಾರೆ. ಧಾರವಾದ ವಿಭಾಗದಲ್ಲಿ 1,102 ಶಾಲೆಗಳಲ್ಲಿ 48,805 ಮಕ್ಕಳು ಮತ್ತು ಮೈಸೂರು ವಿಭಾಗದಲ್ಲಿ 1,099 ಶಾಲೆಗಳಲ್ಲಿ 57,569 ಮಕ್ಕಳು ಎಲ್.ಕೆ.ಜಿ-ಯು.ಕೆ.ಜಿ. ಪ್ರವೇಶಾತಿ ಪಡೆಯುತ್ತಿದ್ದಾರೆ. ಇನ್ನು ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷ ವರೆಗಿನ ಮಕ್ಕಳ ದಾಖಲಾತಿ ಪ್ರಮಾಣ ನೋಡಿದಾಗ ಬೆಂಗಳೂರು ವಿಭಾಗದಲ್ಲಿ ಶೇ.40.94, ಧಾರವಾಡ ವಿಭಾಗದಲ್ಲಿ ಶೇ.61.61, ಮೈಸೂರು ವಿಭಾಗದಲ್ಲಿ ಶೇ.34.48 ಹಾಗೂ ಕಲಬುರಗಿ ವಿಭಾಗದಲ್ಲಿ ಅತಿ ಹೆಚ್ಚು ಶೇ.70.93 ರಷ್ಟು ಮಕ್ಕಳು ಅಂಗನವಾಡಿ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂಗನವಾಡಿ ಮೇಲಿನ ಹೊರೆ ಸಹ ತಪ್ಪಲಿದೆ ಎಂದರು.

ಕೇಂದ್ರ ಅನುದಾನದ ನಿರೀಕ್ಷೆ: ಪೂರ್ವ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಕ್ರಿಯಾತ್ಮಕ ಚಟುವಟಿಕೆ ಸೇರಿದಂತೆ ಇನ್ನಿತರ ಮಾನದಂಡ ಅಧರಿಸಿ ಕೇಂದ್ರ ಸರ್ಕಾರವು ಅಂತಹ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪ್ರೊಜೆಕ್ಟ್ ಅಪ್ರೂವಲ್ ಬೋರ್ಡ್‍ನಿಂದ ಅನುಮೋದನೆ ನೀಡಿ ಹೆಚ್ಚಿನ ಅನುದಾನ ನೀಡುತ್ತದೆ. ಆ ಮೂಲಕ ರಾಜ್ಯದ ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ದೊರೆಯಲು ಸಹಕಾರಿಯಾಗುವುದಲ್ಲದೆ ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರ ಅನುದಾನ ಸಹ ಬರಲಿದೆ ಎಂದು ಡಾ.ಆಕಾಶ ಎಸ್. ತಿಳಿಸಿದರು.

ಅತಿಥಿ ಶಿಕ್ಷಕರ ಹಾಗೂ ಆಯಾಗಳ ನೇಮಕಾತಿ: ರಾಜ್ಯ ಸರ್ಕಾರ ಕಲಬುರಗಿ ವಿಭಾಗದ 1,008 ಆಯ್ದೆ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ. ತರಗತಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಹಂತಕ್ಕೆ ಶಾಲಾ ಹಂತದಲ್ಲಿಯೆ ನಿಯಮಾನುಸಾರ ಅತಿಥಿ ಶಿಕ್ಷಕರ ಮತ್ತು ಮಕ್ಕಳ ಪಾಲನೆಗೆ ಆಯಾ ನೇಮಕ ಮಾಡಿಕೊಳ್ಳಲಾಗುತ್ತದೆ.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

1 hour ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

2 hours ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

2 hours ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

2 hours ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

2 hours ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420