ಸುರಪುರ: ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘವು ಇಪ್ಪತ್ತೈದನೆ ವರ್ಷಕ್ಕೆ ೨೦೨೦ಕ್ಕೆ ಕಾಲಿಡಲಿದೆ,ಸಂಘವು ಕಳೆದ ಇಪ್ಪತ್ನಾಲ್ಕು ವರ್ಷಗಳಲ್ಲಿ ಅನೇಕ ಸಮಾಜಪರ ಕಾರ್ಯಗಳನ್ನು ಮಾಡುತ್ತ ಸಮಾಜವನ್ನು ಅಭೀವೃಧ್ಧಿ ಪಡಿಸುವ ಕೆಲಸವನ್ನು ಮಾಡಿದೆ.ಇದಕ್ಕೆ ಎಲ್ಲರ ಸಹಕಾರವೆ ಮುಖ್ಯವಾದುದಾಗಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗು ವರದಿ ಮಂಡನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿ,ಎಲ್ಲಾ ಶೇರುದಾರರ ಸಹಕಾರ ಹಾಗು ಬ್ಯಾಂಕ್ ಸರಿಯಾಗಿ ನಡೆಸಿಕೊಂಡು ಹೋಗುತ್ತಿರುವುದರ ಫಲವಾಗಿ ಈ ವರ್ಷ ೬೪ಲಕ್ಷ ೭೬ಸಾವಿರದ ಒಂದು ನೂರ ನಲವತ್ತಾರು ರೂಪಾಯಿಗಳ ಲಾಭವನ್ನು ಪಡೆದಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದರು.ಇದರಲ್ಲಿ ಕೆಂಭಾವಿ,ಹುಣಸಗಿ,ಕೊಡೇಕಲ್ ಮತ್ತು ಕಕ್ಕೇರಾ ಶಾಖೆಗಳು ಕೂಡ ಲಾಭವನ್ನು ತಂದಿವೆ ಮುಂದೆಯೂ ಇದೇ ರೀತಿ ಎಲ್ಲಾ ನಮ್ಮ ಬ್ಯಾಂಕಿನ ಶೇರುದಾರರು ಮತ್ತು ಸಾಲಗಾರರು ಪಾವತಿಸುವ ಮೂಲಕ ಬ್ಯಾಂಕಿನ ಅಭೀವೃಧ್ಧಿಗೆ ಸಹಕರಿಸುವಂತೆ ಕರೆ ನೀಡಿದರು.
೨೦೨೦ಕ್ಕೆ ಬ್ಯಾಂಕಿನ ಬೆಳ್ಳಿ ಹಬ್ಬ ಆಚರಿಸುತ್ತಿದ್ದು ಇದರ ಅಂಗವಾಗಿ ನಮ್ಮ ಎಲ್ಲಾ ಶೇರುದಾರರಿಗೆ ಉಡುಗೊರೆಯನ್ನು ನೀಡುವ ಮೂಲಕ ಅಧ್ಧೂರಿ ಕಾರ್ಯಕ್ರಮವನ್ನು ಆಯೋಜಿಸುವ ಗುರಿ ಹೊಂದಲಾಗಿದೆ ಇದಕ್ಕೆ ತಾವೆಲ್ಲರು ಸಹಕಾರ ನೀಡುವಂತೆ ಕೋರಿದರು. ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಾಂತರಾಜ ಬಾರಿ ಮಾತನಾಡಿ,ಬ್ಯಾಂಕಿನಲ್ಲಿ ಸಾಲ ಪಡೆದ ಅನೇಕ ಜನ ಬಾಕಿದಾರರು ಮರು ಪಾವತಿಸದೆ ಉಳಿಸಿಕೊಂಡಿದ್ದು,ಎಲ್ಲರು ಸಕಾಲದಲ್ಲಿ ಮರು ಪಾವತಿ ಮಾಡಿದರೆ ಬ್ಯಾಂಕಿನ ಬೆಳವಣಿಗೆ ಸಾಧ್ಯ.ಇಲ್ಲವಾದಲ್ಲಿ ಸಾಲಗಾರರಿಗೆ ಸಾಕ್ಷಿ ನೀಡಿದವರಿಂದ ವಸೂಲಿ ಮಾಡಬೇಕಾಗಲಿದೆ ಎಂದರು.ನಂತರ ೨೦೧೮-೧೯ನೇ ಸಾಲಿನ ಲಾಭ ವಿಂಗಡಣೆಯ ಕುರಿತ ವಿವರ ಓದಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಬ್ಯಾಂಕಿನ ನಿರ್ದೇಶಕರಾದ ಶಾರದ ಎಂ.ಜಾಲಹಳ್ಳಿ,ಬಸವಲಿಂಗಯ್ಯಸ್ವಾಮಿ ಹಿರೇಮಠ,ವಿರೇಂದ್ರ ನಿಷ್ಠಿ,ಬಸವರಾಜ ಬೂದಿಹಾಳ,ಮಂಜುನಾಥ ಗುಳಗಿ,ಬಸವರಾಜ ಹೂಗಾರ,ಹೊನ್ನಪ್ಪ ದೇಸಾಯಿ,ಸಲಹಾ ಸಮಿತಿಯ ಜಯಲಲಿತ ಪಾಟೀಲ,ಸಂಗನಬಸಪ್ಪ ಪಾಟೀಲ,ಸಿದ್ದಲಿಂಗಯ್ಯ ಸ್ವಾಮಿ,ರಾಜಶೇಖರ ಪಾಟೀಲ,ರವೀಂದ್ರ ಅಂಗಡಿ,ಪ್ರಕಾಶ ಕುಂಬಾರ,ಶಂಕರಗೌಡ ಜೇವರ್ಗಿ,ಆದಿತ್ಯ ಪಾಟೀಲ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ,ಸೋಮಶೇಖರ ಶಾಬಾದಿ,ಶಿವಶರಣಪ್ಪ ಹೆಡಗಿನಾಳ,ವೀರಭದ್ರಪ್ಪ ಕುಂಬಾರ,ಅಮರೇಶ ಕುಂಬಾರ,ರವಿಕುಮಾರ ಹೆಮನೂರ,ಮಡಿವಾಳಪ್ಪ ಪಾಟೀಲ,ಸಿದ್ದನಗೌಡ ಪಾಟೀಲ ಸೇರಿದಂತೆ ಅನೇಕ ಜನ ಶೇರುದಾರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…