ಕಲಬುರಗಿ: ಚಿತ್ರಕಲಾ ಶಿಕ್ಷಕರ ಹಾಗೂ ಗೆಳಯರ ಬಳಗ ಹುಮನಾಬಾದ್ ಮತ್ತು ಹಿರೇಮಠ ಪರಿವಾರದಿಂದ ಜೂ.14ರಂದು ಸಂಜೆ 4ಕ್ಕೆ ಹುಮನಾಬಾದ್ನ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ವರ್ಣ ಚಿಲುಮೆ ಗ್ರಂಥ ಬಿಡುಗಡೆ ಹಾಗೂ ಅಶೋಕಕುಮಾರ ಹಿರೇಮಠರವರ ವಯೋನಿವೃತ್ತಿ ಪ್ರಯುಕ್ತ ಅಭಿನಂದನಾ ಸಮಾರಂಭ ನಡೆಯಲಿದೆ.
ಹಾರಕೂಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ. ರೇಣುಕ ಗಂಗಾಧರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ. ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ.
ಕೆಎಎಸ್ ಅಧಿಕಾರಿ ಸಿದ್ದಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಎಲ್ಸಿ ಡಾ.ಚಂದ್ರಶೇಖರ ಪಾಟೀಲ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಭೀಮರಾವ ಪಾಟೀಲ್ ಅವರು ವರ್ಣ ಚಿಲುಮೆ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಶಹಾಪುರ ಏಕದಂಡಗಿ ಮಠದ ಪೀಠಾಧಿಪತಿ ಅಜೇಂದ್ರ ಸ್ವಾಮಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಚನ್ನಬಸವಣ್ಣಾ ಲಂಗೋಟೆ ಐ.ಪಿ.ಎಸ್. ಪೋಲಿಸ್ ವರಿಷ್ಠಾಧಿಕಾರಿಗಳು, ಬೀದರ, ನಾಡೋಜ ಜೆ. ಎಸ್. ಖಂಡೇರಾವ ಕಲಬುರಗಿ. ನಾಡೋಜ ಡಾ॥ ವಿ. ಜಿ. ಅಂದಾನಿ ನಿವೃತ್ತ ಪ್ರಾಚಾರ್ಯರು, ಕಲಬುರಗಿ. ಅನುರಾಧಾ ವಸ್ತ್ರದ ಕೆ.ಎ.ಎಸ್. (ಕಿರಿಯ ಶ್ರೇಣಿ) ಕುಲಸಚಿವರು, ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ. ನವನಗರ, ಹುಬ್ಬಳ್ಳಿ.
ಬಸವರಾಜ ರೆ. ಉಪ್ಪಿನ ನಿವೃತ್ತ ಚಿತ್ರಕಲಾ ಶಿಕ್ಷಕರು.
ಕಲಬುರಗಿ. ಜೆ. ಎಸ್. ನ್ಯಾಮಗೌಡರು ಡಿ.ವಾಯ್.ಎಸ್.ಪಿ. ಹುಮನಾಬಾದ. ವೆಂಕಟೇಶ ಎಸ್. ಗುಡಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹುಮನಾಬಾದ. ರವೀಂದ್ರರೆಡ್ಡಿ ಎನ್. ಮಾಲಿಪಾಟೀಲ ಅಧ್ಯಕ್ಷರು, ಕ.ರಾ.ಪ್ರಾ.ಶಾ.ಶಿ. ಸಂಘ, ಬೀದರ. ಶೇಖ್ ಮೆಹಬೂಬ ಪಟೇಲ, ಅಧ್ಯಕ್ಷರು, ಕ.ರಾ.ಪ್ರೌ.ಶಾ.ಶಿ. ಸಂಘ, ಬೀದರ.ರಾಜಣ್ಣಾ ಮುಗಳಿ ಅಧ್ಯಕ್ಷರು, ಚಿತ್ರಕಲಾ ಶಿಕ್ಷಕರ ಸಂಘ, ಹುಮನಾಬಾದ. ಸೋಮನಾಥ ಪಾಟೀಲ ಹುಡಗಿ ಭಾ.ಜ.ಪ. ಜಿಲ್ಲಾಧ್ಯಕ್ಷರ, ಬೀದರ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಚಿತ್ರಕಲಾವಿದ ಮತ್ತು ಪತ್ರಿಕಾ ಛಾಯಾಗ್ರಾಹಕ ನಾರಾಯಣ ಎಂ ಜೋಶಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…