ಕಲಬುರಗಿ: 4 ವರ್ಷದೊಳಗಿನ ಮಕ್ಕಳಿಗೆ ಆರ್.ಡಿ.ಪಿ.ಆರ್ ರೂಪಿಸುವ ಯಾವುದೇ ಕಾರ್ಯ ಕ್ರಮಗಳನ್ನು ಮತ್ತು – ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವುಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಅಂಗನವಾಡಿ ನೌಕರರ ಸಂಘ ರಾಜ್ಯ ಸಮಿತಿಯಿಂದ ಗುರುವಾರ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆಯ ಮುಂದೆ ಧರಣಿಯನ್ನು ನಡೆಸಿದ್ದು ಇಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಮುಂದೆ ಧರಣಿಯನ್ನು ಹಮ್ಮಿಕೊಂಡಿದ್ದಾರೆ.
ಶಿಕ್ಷಣ ಇಲಾಖೆ ಇದೀಗ ಆರಂಭಿಸಿರುವ ಎಲ್. ಕೆ.ಜಿ, ಯುಕೆಜಿಗೆ ದಾಖಲಾಗುವ ಮಕ್ಕಳು ಈಸಿಡಿಎಸ್ ನಲ್ಲಿ ಈಗಾಗಲೇ ದಾಖಲಾಗಿರುವುದರಿಂದ ಎರಡು ಕಡೆ ಮಕ್ಕಳು ದಾಖಲು ಆಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಹೇಳಿಕೊಡುವ ಅನೌಪಚಾರಿಕ ಶಿಕ್ಷಣವನ್ನು ಮತ್ತು ಎಬಿಸಿಡಿ ಇಂಗ್ಲಿಷ್ ವರ್ಣಮಾನೆ ಮತ್ತು ಪದಗುಂಚನಗಳನ್ನು ಮಾತ್ರವೇ ಬೋಧಿಸುವುದು ಇರುತ್ತದೆ. ಮಕ್ಕಳ ಅಪೌಷ್ಟಿಕತೆಯಡೆಗೆ ಅವರ ಗಮನವಿರುವುದಿಲ್ಲ.ಅಂಗನವಾಡಿ ಕೇಂದ್ರ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಪಿಯುಸಿ, ಡಿಎಡ್ ಮಾಡಿರುವ ಯವಕ-ಯುವತಿಯರ ನ್ನು ಅತಿಥಿ ಶಿಕ್ಷಕರು ಎಂದು ನೇಮಿಸಲು ಸೂಚಿಸಲಾಗಿದೆ.
ಈಗಿನ ಯುವಕ-ಯುವತಿಯರು 30 ಮಕ್ಕಳ ನೋಡಿಕೊಳ್ಳಲು ಪ್ರಾಯೋಗಿಕವಾಗಿ ಸಾಧ್ಯವಿದೆಯೇ? ಮಾತ್ರವಲ್ಲ ಇವರಿಗೆ ಇಂಗ್ಲಿಷ್ ನೈಪುಣ್ಯತೆ ಇರಲು ಸಾಧ್ಯವೆ? ಎಂದು ಮಲವಿಯಲ್ಲಿ ಪ್ರಶ್ನಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು 40 ಪರ್ಸ್‍ಂಟೆಜ್ ಪಿಯುಸಿ, ಬಿ.ಎ ಪದವಿಗಳನ್ನು ಹೊಂದಿದ್ದಾರೆ. ಮತ್ತು ತಾಯಿ ಮನಸ್ಸಿನ ಅನುಭವವಿದೆ. ಇವರು ಮಕ್ಕೊಳದಿಗೆ ಒಡನಾಟ ಮಾಡುವುದನ್ನು ಹೊಸದಾಗಿ ಬರುವವರಿಗೂ ಬದ್ಧತೆಯಲ್ಲಿ ವ್ಯತ್ಯಾಸವಿದೆಯೇಲ್ಲವೆ?.ಶಿಕ್ಷಣ ಇಲಾಖೆ ಈಗಾಗಲೇ 36 ಸಾವಿರ ಶಿಕ್ಷಕರಿಲ್ಲ, ಶಾಲಾ ಕಟ್ಟಡಗಳಿಲ್ಲದ ಪರಿಸ್ಥಿತಿಗಳಿವೆ. ಸರಕಾರ ಈಗಾಗಲೇ ಆರ್ಥಿಕ ಮುಗ್ಗಟ್ಟಿನ ಲ್ಲಿರುವ ನಕಲು ಯೋಜನೆಗಳಿಂದ ಇರುವ ಮೂಲ ಯೋಜನೆ (ಐಸಿಓಎಸ್) ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಐಸಿಡಿಎಸ್ ಅಡಿಯಲ್ಲಿರುವ ಮಕ್ಕಳ ಸ್ಥಿತಿ-ಗತಿಯ ಬಗ್ಗೆ ಅಧ್ಯಯನ ಮಾಡಬೇಕು. ಅಧ್ಯಯನ ಮಾಡಲು ಮಕ್ಕಳ ತಜ್ಞರು, ಮಕ್ಕಳ ವೈದ್ಯರು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರು ಹಾಗೂ ನಮ್ಮ ಸಂಘದ ಆ ಪ್ರತಿನಿಧಿಗಳು ಮತ್ತು ಎರಡು ಇಲಾಖೆಯ ಪ್ರಮುಖರ ನ್ನೊಳಗೊಂಡ ಸಮಿತಿಯನ್ನು ರಚಿಸಿ ಕಾಲಮಿತಿಯೊಳಗೆ ವರದಿ ಮಾಡಲು ಸೂಚಿಸಬೇಕು ಹಾಗೂ ಈ ವರದಿ ಬರುವ ತನಕ ಶಿಕ್ಷಣ ಇಲಾಖೆ ಹೊಸದಾಗಿ ಇಸಿಸಿಡಿಯನ್ನು ಪ್ರಾರಂಭಿಸದ ಹಾಗೂ ಸೂಚಿಸಬೇಕೆಂದು ಹಾಗೂ ಶಿಕ್ಷಣ ಇಲಾಖೆ ಏನೇ ಬದಲಾವಣೆಗಳು ತರುವಾಗ ಡಬ್ಲ್ಯೂಸಿಓ ಇಲಾಖೆಯ ಒಪ್ಪಿಗೆ ಪಡೆಯುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ಸಂಘಟನೆಯವರು ಶುಕ್ರವಾರ ಇದೇ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯ ಗೌರಮ್ಮ ಪಾಟೀಲ, ಗೊಂಬಿ, ಮಂಜುಳಾ, ನೀಲಮ್ಮ ಶರಣಸಿರಸಗಿ, ಈರಮ್ಮಾ ದೊಡ್ಡಮನಿ, ಗಂಗಮ್ಮ ಮಹಗಾಂವ, ಜಯಶ್ರೀ ಕಮಲಾಪೂರ, ಜಯಲಕ್ಷ್ಮೀ ಕಮಲಾಪೂರ, ಶರಣಮ್ಮಾ ಫರಹತಾಬಾದ, ಪ್ರಭಾವತಿ ನಂದೂರ, ನಿರ್ಮಲ ಎಸ್.ಬಿ ನಂದೂರ, ಸುನೀತಾ ಆರ್. ಧಮ್ಮ ನಾಪೂರ, ಪಾರ್ವತಿ ಆರ್. ನಂದೂರ, ಗೌರಮ್ಮ ನಂದೂರ ಸೇರಿದಂತೆ ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…