ಬಿಸಿ ಬಿಸಿ ಸುದ್ದಿ

ಮನುಷ್ಯನು ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿ

ಕಲಬುರಗಿ: ದಾನಗಳಲ್ಲಿಯೇ ಶ್ರೇಷ್ಠ ದಾನ ರಕ್ತದಾನ ಪ್ರತಿಯೊಬ್ಬರೂ ಸಹ ಸಕಾಲದಲ್ಲಿ ರಕ್ತದಾನವನ್ನು ಮಾಡಿ ಅಮೂಲ್ಯ ಜೀವನಗಳನ್ನು ಉಳಿಸಬೇಕೆಂದು ಜಿಲ್ಲಾಧಿಕಾರಿ ಬಿ.  ಫೌಜಿಯಾ ತರನ್ನುಮ್ ಅವರು ಹೇಳಿದರು.

ಶುಕ್ರವಾರದಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತದ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ, ಬೆಂಗಳೂರು ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಲಬುರಗಿ, ಜಿಲ್ಲಾ ಸಾರ್ವಜನಿಕರ ಆಸ್ಪತ್ರೆ ಜಿಲ್ಲೆ ರಕ್ತ ನಿಧಿ ಕೇಂದ್ರಗಳು, ರೆಡ್ ರಿಬ್ಬನ ಕ್ಲಬಗಳು, ಸ್ವಯಂ ಸೇವಾ ಸಂಸ್ಥೆಗಳು, ಎನ್.ಎಸ್.ಎಸ್. ಘಟಕ, ಕಲಬುರಗಿ ಇವರಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ರಕ್ತದಾನಿಗಳ ದಿನಾಚರಣೆ” ಮೊದಲಿಗೆ ರೆಡ್ ರಿಬ್ಬನ್  ಮೂಲಕ ಚಾಲನೆ ನೀಡಿ ಅವರು ಮಾತನಾಡಿದ್ದರು.

ಇಂತಹ  ರಕ್ತದಾನ ಶಿಬಿರದಿಂದ ಸಂಗ್ರಹಿಸಿದ ರಕ್ತವು ಸಕಾಲಕ್ಕೆ ರೋಗಿಗಳಿಗೆ ಹಾಗೂ ರಕ್ತದ ಅವಶ್ಯಕತೆ ಇರುವಂತವರಿಗೆ ಬಹಳ ಅನುಕೂಲವಾಗುತ್ತದೆ. ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಬಹುದು. ಹಲವಾರು  ಬಾರಿ ಉಚಿತ ರಕ್ತ ದಾನ ಮಾಡಿದಂತವರಿಗೆ ಸನ್ಮಾನಿಸಿ ಗೌರವಿಸಿದರು ಹಾಗೆ ತಮ್ಮೆಲ್ಲರಿಗೂ ಧನ್ಯವಾದಗಳೊಂದಿಗೆ ಸಂತೋಷ ವ್ಯಕ್ತಪಡಿಸಿದರು.

ಮೊದಲಿಗೆ ಜಿಮ್ಸ್ ಪ್ರಾಂಗಣದಲ್ಲಿ  ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ನವಲೆ  ಮಾತನಾಡುತ್ತಾ ಅವರು ಮನುಷ್ಯನು ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾತಿಯಾಗುತ್ತಿದೆ ರಕ್ತದಾನ ಮಾಡುದರಿಂದ ಹಲವಾರ ಜೀವನವನ್ನೇ ರಕ್ಷಣೆ ಮಾಡುವಂತ ಕಾರ್ಯವನ್ನು ದಾನಿಗಳು ಮಾಡುತ್ತಾರೆ ಎಂದು .

ಅವರು, ಇವತ್ತಿನ ದಿನಗಳಲ್ಲಿ ಎಲ್ಲವೋ ಮಾರಾಟ ವಸ್ತು ಎಲ್ಲವೋ ವ್ಯವಾಹರಕವಾಗಿ ನೋಡುವ ವಾತಾವರಣದಲ್ಲಿಯು ಸಹ ಸಾಕಷ್ಟು ಜನರು ಯಾವುದೇ ಫಲಾಪೇಕ್ಷೆವಿಲ್ಲದೆ   ರಕ್ತದಾನ ಮಾಡಿ ಹಲವರ ಜೀವವನ್ನೆ ಉಳಿಸುವ ಕಾರ್ಯಕ್ರಮ ಏನ ಮಾಡುತ್ತಾರೆ ಅದು ಶ್ಲಾಘನೆಯ ಎಂದು ಹೇಳಿದರು.

ರಕ್ತದಾನ ಮಾಡುವುದರಿಂದ ಆರೋಗ್ಯ ಸಹ ಸುಧಾರಣೆಯಾಗುತ್ತದೆ ಎಂಬ ವರದಿ ಸಹ  ಇದೇ ಎಲ್ಲರ ರಕ್ತದಾನ ಬಗ್ಗೆ ಭಯ ಬಿಟ್ಟು ಹೆಚ್ಚು ಹೆಚ್ಚು ರಕ್ತದಾನ ಮಾಡಲು ಮುಂದೆ ಬರಬೇಕು ಇದರಿಂದ ಅವರಿಗೆ ರಕ್ತ ಧಾನದ  ಶ್ರೇಷ್ಠತೆಯ ಮಹತ್ವ ಕೂಡ ಗೊತ್ತಾಗುತ್ತದೆ. ರಕ್ತದಾನ ಮಾಡುವದರಿಂದ ಇನ್ನೋಬರ ಜೀವವು ಉಳಿಯುತ್ತದೆ  ಆರೋಗ್ಯ ಸಹ ಚನ್ನಾಗಿರುತ್ತದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಾವು ಮಾಡುತ್ತಿದ್ದೇವೆ   ಜಿಲ್ಲೆಯಲ್ಲಿ ಬ್ಲಡ್ ಬ್ಯಾಂಕಗಳ ಹೆಚ್ಚಿಗೆ ಮಾಡಬೇಕು ಅಂತ ಯೋಜನೆಯಲ್ಲಿದ್ದೇವೆ. ಆದರಂತೆ ಬ್ಲಡ್ ಎಲ್ಲಯೋ ಕೊರತೆಯಾಗಬಾರದು ಯಾವ ರೋಗಿಯು ಕೂಡ ರಕ್ತದ ಕೊರತೆ ಅನುಭವಿಸಿದಂತೆ ಕೆಲಸ ನಿರ್ವಸುತ್ತೇವೆ ಎಂದು ಹೇಳಿದರು.

ಅದೇ ರೀತಿಯಾಗಿ ವಿಭಾಗೀಯ ಜಂಟಿ   ಕಾರ್ಯಲಯ ಕಲಬುರಗಿ ಉಪ ನಿರ್ದೇಶಕರು,ಡಾ|| ಶರಣ್ಣಬಸಪ್ಪ ಗಣಜಲಖೇಡ್,  ಮಾತನಾಡಿದರು. ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ಸುರೇಶ್ ಮೇಕಿನ್.

ನಿರ್ದೇಶಕರು ಜಿಮ್ಸ್ ಕಲಬುರಗಿ ಡಾ|| ಉಮೇಶ್ ಎಸ್,ಆರ್. ಜಿಲ್ಲಾ ಆಸ್ಪತ್ರೆ,ಕಲಬುರಗಿ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧಿಕ್ಷಕರು,ಡಾ|| ಓಂ ಪ್ರಕಾಶ ಅಂಬುರೆ, ಜಿಮ್ಸ್ ಕಲಕಬುರಗಿ ವೈದ್ಯಕೀಯ ಅಧೀಕ್ಷಕರು ಡಾ|| ಶಿವಕುಮಾರ ಸಿ.ಆರ್.  ಜಿಮ್ಸ್ ವೈದ್ಯಕೀಯ ಕಾಲೇಜು ಕಲಬುರಗಿ ಪ್ರಾಂಶುಪಾಲರು ಡಾ|| ಅಜಯಕುಮಾರ ಜಿ.  ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಡಾ|| ಚಂದ್ರಕಾಂತ ನರಬೋಳಿ , ವಿಶೇಷ ಎಂ ಸಿ ಹೆಚ್ ಅಧಿಕಾರಿಗಳು ಡಾ|| ಸಂದೀಪ್ ಹರಸಣಾಗಿ,   ಎ ಅರ್ ಟಿ ನೂಡಲ್ ಅಧಿಕಾರಿಗಳು ಡಾ|| ರೀಮಾ ಹರವಾಳ, ಹಾಗೂ  ಜಾಥಾವು  ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ಇದೆ ಸಂಧರ್ಭದಲ್ಲಿ ಅತಿ ಹೆಚ್ಚು ರಕ್ತದಾನ ಮಾಡಿದವರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.  ಜಿಮ್ಸ್ ರಕ್ತ ನಿಧಿ , ಅಲ್ ಬ್ರದರ್ ಮೆಡಿಕಲ್ ಕಾಲೇಜು, ಚಿತ್ತಪುರ ತಾಲ್ಲೂಕು ಆಸ್ಪತ್ರೆ ಇಂದ ಒಟ್ಟು ಉಚಿತ ರಕ್ತದಾನ ಸಂಗ್ರಹ  260 . ಇಎಸ್ಐ. ರಕ್ತ ನಿಧಿಯಿಂದ 25 . ಕೆಬಿಎನ್ ಮೆಡಿಕಲ್ ಕಾಲೇಜ್ ನಿಂದ 25 ಉಚಿತ ರಕ್ತ ಸಂಗ್ರಹ ದಾನಿಗಳಿಂದ ಸಂಗ್ರಹ ವಾಗಿದೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

23 hours ago