ಬಿಸಿ ಬಿಸಿ ಸುದ್ದಿ

ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ತಡೆದು, ಬೆಳೆ ಹಾನಿ ಪರಿಹಾರಕ್ಕೆ ಮಮಶೆಟ್ಟಿ ಆಗ್ರಹ

ಕಲಬುರಗಿ; ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗುತ್ತಿದ್ದು, ಅದನ್ನು ಕೂಡಲೇ ತಡೆಯುವಂತೆ ಹಾಗೂ ಬರದಿಂದ ಬೆಳೆಹಾನಿಗೀಡಾದ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆ ಅರ್ಭಟ. ಮುಂಗಾರು ಬಿತ್ತನೆ ರೈತರ ತಯಾರಿ ಜೋರಾಗಿದೆ. ರಸಗೊಬ್ಬರ ಅಭಾವ ಕೃತಕ ಸೃಷ್ಟಿಯಿಂದ ರೈತರು ಪರದಾಡುವಂತಾಗಿದೆ. ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ಜೋರಾಗಿ ನಡೆದಿದೆ. ಸರಿಯಾದ ಸಮಯಕ್ಕೆ ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸರಾಸರಿ ಅಂದಾಜು 522400 ಜನ ರೈತರಿದ್ದಾರೆ. ಅಂದಾಜು 1098900 ಹೆಕ್ಟೆರ್ ಕೃಷಿ ಭೂಮಿ ಇದೆ. ಈ ವರ್ಷ ಅತಿ ಹೆಚ್ಚು ತೊಗರಿ, ಹತ್ತಿ ಮತ್ತು ಸೋಯಾಬಿನ್, ಹೆಸರು, ಮುಂಗಾರು ಮಳೆರಾಯ ಅಬ್ಬರ ಜೋರಾಗಿ ಬಂದಿದೆ ತಳ ಹಸಿ ಆಗಿದೆ. ಅನ್ನದಾತ ರೈತರ ಮುಖದಲ್ಲಿ ಖುಷಿ ತಂದಿದೆ. ಹೀಗಾಗಿ ಬಿತ್ತನೆ ಜೋರಾಗಿ ಈಗಾಗಲೇ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ರೈತರಿಗೆ ಬೇಕಾಗುವಷ್ಟು ಡಿಎಪಿ ಗೊಬ್ಬರ ಬಫರ್ ಸ್ಟಾಕ್ ಇಲ್ಲ ಏನೋ ಎಂದು ಗ್ರಾಮೀಣ ಪ್ರದೇಶದಲ್ಲಿ ಜನರು ಗುಸು ಗುಸು ಮಾತನಾಡುವಂತಾಗಿದೆ ಎಂದು ಅವರು ದೂರಿದರು.

ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರ ಕ್ಕಾಗಿ ರೈತರು ಎಪಿಎಂಸಿ. ವಿಎಸ್‍ಎಸ್ ಎನ್ ಸೊಸೈಟಿ ಮತ್ತು ಟೆಎಪಿಸಿಎಂಎಸ್‍ಗಳಲ್ಲಿ ಸರದಿ ಸಾಲಿನಲ್ಲಿ ನಿಂತರೂ ಸಹ ಗೊಬ್ಬರ ಸಿಗುತ್ತಿಲ್ಲ ಮತ್ತು ಡಿಡಿ ಕಟ್ಟಿದರೂ ಸಹ ಗೊಬ್ಬರ ಸ್ಟಾಕ್ ಇಲ್ಲ ಅಂತ ಹೆಳುತ್ತಿದ್ದಾರೆ. ಗೊಬ್ಬರಕ್ಕಾಗಿ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಪ್ರತಿ ವರ್ಷ ಇದೆ ಗೊಬ್ಬರದ ರೈತರ ಗೋಳಾಟ ಮುಂದುವರೆದು ಬಂದಿದೆ. ಕೃಷಿ ಸಚಿವರು ಇದರ ಬಗ್ಗೆ ಯಾಕೆ ಗಮನ ಹರಿಸಲಿಲ್ಲ. ರಾಜ್ಯ ಸರ್ಕಾರ ಕಲಬುರಗಿ ಜಿಲ್ಲೆಯ ರೈತರಿಗೆ ಬೇಕಾಗುವಷ್ಟು ರಸಗೊಬ್ಬರ ಮುಂದಾಲೋಚನೆ ಮಾಡಿ ತರಿಸಿ ಗೋಡೌನ್‍ನಲ್ಲಿ ಬಪರ್ ಸ್ಟಾಕ್ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಸಗೊಬ್ಬರ ವಿತರಣೆ ಮಾಡುವ ಕಾರ್ಯರೂಪಕ್ಕೆ ತಂದರೆ ಮಾತ್ರ ಮುಂಗಾರು ಬಿತ್ತನೆ ಗೆ ರೈತರಿಗೆ ಅನುಕೂಲವಾಗುತಿತ್ತು ಎಂದು ಅವರು ಹೇಳಿದರು.

ಆದಾಗ್ಯೂ, ಅದನ್ನು ಬಿಟ್ಟು ಹಳ್ಳಿಯಲ್ಲಿ ಒಂದು ಗಾದೆ ಮಾತು ಇದೆ ನಿರಡಿಕೆಯಾದಗ ಮಾತ್ರ ತೆಗ್ಗು ತೊಡುವುದು ಹಾಗಾಗಿದೆ ರೈತರ ತಮ್ಮ ಕೃಷಿ ಕೆಲಸ ಬಿಟ್ಟು ಗೊಬ್ಬರ ತರಲು ಸರ್ಕಾರಿ ಸೊಸೈಟಿಗಳು ಎದುರು ಕಾಯುವ ಪರಿಸ್ಥಿತಿ ಎದುರಾಗಿದೆ. ಈಗಲಾದರೂ ಸರ್ಕಾರ ಈ ಜಿಲ್ಲೆಯ ಉಸ್ತುವಾರಿ ಸಚಿವರು ತಕ್ಷಣವೇ ರೈತರ ನೆರವಿಗೆ ಧಾವಿಸಿ ಸರಳವಾಗಿ ಮತ್ತು ಎಲ್ಲ ರೈತರಿಗೆ ಸಮಾನವಾಗಿ ರಸಗೊಬ್ಬರ ಸಿಗುವಂತಾಗಬೆಕು ಮತ್ತು ಕಾಳ ಸಂತೆಯಲ್ಲಿ ರಸಗೊಬ್ಬರ ಅಭಾವ ಕೃತಕ ಸೃಷ್ಟಿ ಆಗದಂತೆ ನೋಡಿಕೊಳ್ಳುವುದು ಎಚ್ಚರಿಕೆ ವಹಿಸಬೇಕು. ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಬೇಕಾ ಬಿಟ್ಟಿಯಾಗಿ ರಸಗೊಬ್ಬರ ವ್ಯಾಪಾರ ಮಾಡಿ ರೈತರಿಗೆ ಮೋಸ ಮಾಡುವವರು ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪೆÇೀಲಿಸ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಬರಗಾಲದ ಬರ ಪರಿಹಾರ ಎಲ್ಲ ರೈತರ ಖಾತೆಗೆ ಜಮೆ ಆಗಿದೆ ಅಂತ ಹೇಳಿ ಪ್ರತಿ ತಾಲ್ಲೂಕಿನ ತಹಸಿಲ್ದಾರರ ಕಚೇರಿಯಲ್ಲಿ ಟ್ರೋಲ್ ಫ್ರೀ ನಂಬರ್ ಇದೆ ಮತ್ತು ಬರ ಪರಿಹಾರ ಹಣ ರೈತರ ಖಾತೆಗೆ ಜಮಾ ಆಗಲಾರದ ರೈತರು ತಹಸಿಲ್ದಾರರ ಕಚೇರಿಗೆ ಹೋಗಿ ತಮ್ಮ ಆಧಾರ ಕಾರ್ಡ್ ಪಹಣಿ ಬ್ಯಾಂಕ್ ಖಾತೆ ತಗೊಂಡು ಹೋಗಬೆಕು ಅಂತ ಹೇಳಿದ್ದಾರೆ. ಪರಿಹಾರ ಹಣ ಬರಲಾರದ ರೈತರು ತಹಸಿಲ್ದಾರರ ಕಚೇರಿ ಅಲೆದಾಡಿದರೂ ಯಾರು ಕೇಳುತ್ತಿಲ್ಲ. ಪೂಕಾರ್ ಸಹ ಇಲ್ಲ. ರೈತರು ಹೋದವರಿಗೆ ಸರ್ವರ್ ಇಲ್ಲ. ಸರ್ವರ್ ಬೀಜಿ ಇದೆ ಅಂತ ನೆಪ ಹೇಳಿ ದಿನ ದಾಟಿಸುತ್ತಿದ್ದಾರೆ.

ಹೀಗಾಗಿ ರೈತರು ಅಲೆದಾಡಿ ಸುಸ್ತಾಗಿ ಹೋದ ರೈತರು ಇನ್ನೂ ಅನೇಕ ಜನ ರೈತರಿಗೆ ಪರಿಹಾರದ ಹಣ ಬಂದಿಲ್ಲ. ಇದಕ್ಕೆ ಹೊಣೆಗಾರಿಕೆ ಯಾರು?, ಏನು ತಾಂತ್ರಿಕವಾಗಿ ಎನು ದೋಷವಾಗಿದೆ ರೈತರ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣಿ ಹಚ್ಚಿದಂತಾಗಿದೆ. ತಕ್ಷಣವೇ ಜಿಲ್ಲಾ ಆಡಳಿತ ಮತ್ತು ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ದೋಷ ಸರಿಪಡಿಸಿ ಎಲ್ಲ ರೈತರ ಖಾತೆಗೆ ಪರಿಹಾರ ಹಣ ಕೊಡಬೇಕು ಎಂದು ಅವರು ಆಗ್ರಹಿಸಿದರು.

emedialine

Recent Posts

ಸಡಗರ – ಸಂಭ್ರಮದಿಂದ ಜರುಗಿದ ಭಂಕೂರಿನ ಬಂಡಿ ಓಡಿಸಿ ಕರಿ ಹರಿಯುವ ಜಾತ್ರೆ

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿಯ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸಿ ಹಾಗೂ…

11 hours ago

ಶರಣು ಮೋದಿಗೆ ಕಲಬುರಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆಗೆ ಮನವಿ

ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ, ಪಾಲಿಕೆಯ ಮಾಜಿ ಮೇಯರಹಾಗೂ ಕಾಂಗ್ರೆಸ್ ಮುಖಂಡ ಶರಣು ಮೋದಿ ಅವರಿಗೆ…

11 hours ago

ಸಮಾಜ ಸುಧಾರಕ ಕಬೀರದಾಸರ 647ನೇ ಜಯಂತಿ ಆಚರಣೆ

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಕಬೀರದಾಸರ 647ನೆಯ ಜಯಂತಿಯನ್ನು ಆಚರಿಸಲಾಯಿತು. ಈ…

11 hours ago

ಶೆಳ್ಳಗಿ ರಸ್ತೆ ದುರಸ್ತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮನವಿ

ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ…

11 hours ago

ಸುರಪುರ ಕುಂಬಾರ ಸಂಘ ಶಾಸಕ ಆರ್.ವಿ.ನಾಯಕ ಸನ್ಮಾನ

ಸುರಪುರ: ತಾಲೂಕ ಕುಂಬಾರ ಸಂಘದ ವತಿಯಿಂದ ನೂತನ ಶಾಸಕ ರಾಜಾ ವೇಣುಗೊಪಾಲ ನಾಯಕಗೆ ಸನ್ಮಾನಿಸಿ ಗೌರವಿಸಲಾಗಿದೆ.ನಗರದ ಶಾಸಕರ ಗೃಹ ಕಚೇರಿಯಲ್ಲಿ…

11 hours ago

ಮಹಾವಿದ್ಯಾಲಯ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು…

11 hours ago