ಬಿಸಿ ಬಿಸಿ ಸುದ್ದಿ

ವಿದ್ಯಾರ್ಥಿಗಳು ಶಿಕ್ಷಕರನ್ನು ಮರೆಯಲ್ಲೂ ಸಾಧ್ಯವಿಲ್ಲ : ಬಿ. ಬಾಬಣ್ಣ

ಕೊಪ್ಪಳ: ಮಕ್ಕಳಿಗೆ ಎಲ್ಲದಕ್ಕಿಂತ ಮುಖ್ಯವಾಗಿ ಉತ್ತಮ ಸಂಸ್ಕಾರ ,ಸಂಸ್ಕೃತಿ ಕಲಿಸಿದ ಶಿಕ್ಷಕರನ್ನು ವಿದ್ಯಾರ್ಥಿಗಳು ಎಂದು ಮರೆಯಲ್ಲೂ ಸಾಧ್ಯವಿಲ್ಲವೇಂದು ಭಾಗ್ಯನಗರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಬಿ. ಬಾಬಣ್ಣ ಹೇಳಿದರು.

ಅವರು ತಾಲೂಕಿನ ಭಾಗ್ಯನಗರದ ಕಠಾರೆ ಕಲ್ಯಣ ಮಂಟಪದಲ್ಲಿ ಸರಕಾರಿ ಫ್ರೌಢ ಶಾಲೆಯ ೧೯೯೮-೯೯ ನೇ ಸಾಲಿನ ಎಸ್,ಎಸ್,ಎಲ್,ಸಿ. ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ,
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅನುವುದಕ್ಕಿಂತ ಅವರಲ್ಲಿ ಎಂತಹ ಸಂಸ್ಕಾರವಿದೆ, ಅವರಿಂದ ದೇಶಕ್ಕೆ ಹಾಗೂ ಸಮಾಜಕ್ಕೆ ಕೊಡುಗೆ ಏನು ಎನ್ನುವುದು ಬಹಳ ಮುಖ್ಯ.
ಉತ್ತಮ ಶಿಕ್ಷಣ ಹಣದಿಂದ ಸಿಗುವ ಮತ್ತು ಗಳಿಸುವ ವಸ್ತುವಲ್ಲ ಅದು ಕೇವಲ ಉತ್ತಮ ಶಿಕ್ಷಕರಿಂದ ಪಡಿಯಬಹುದಾದ ದಾನ ಎಂದರು.

ಶಂಕರ ಮಠದ ಶ್ರೀ ಶಿವಪ್ರಕಾಶನಂದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.ಅಧ್ಯಕ್ಷತೆಯನ್ನು
ಭಾಗ್ಯದನಗರದ ಫೌಡ ಶಾಲೆ ಉಪ ಪ್ರಾಚಾರ್ಯ ಸುರೇಂದ್ರಗೌಡ ಪಾಟೀಲ್ ವಹಿಸಿದ್ದರು.

ವೇದಿಕೆ ಮೇಲೆ ಶಿಕ್ಷಕರಾದ ನಿಂಗಪ್ಪ ಬ್ಯಾಳಿ ಶೆಟ್ಟರ್, ಲಿಂಗಣ್ಣ ಮೇಟಿ, ವೀರಪ್ಪ ಗುನ್ನಹಳ್ಳಿ ಎಂ, ಎಂ ಬಡಿಗೇರ ,ಜೆ. ಎಲ್, ಬಸವಾ, ಶರಣ ಬಸಪ್ಪ ಹಳಿಕೇರಿ, ಶ್ರೀಮತಿ ಮಾಲಾ ಬಡಿಗೇರ, ಲತಾ ಕೆ, ಗೀತಾ ಕೆ, ಬಿ. ಎಸ್ ಬಿ. ಗಂಗೂರ. ಬಸಪ್ಪ ಮಡಿವಾಳರ. ಶೇಖರಪ್ಪ ದೊಡ್ಡಮನಿ. ಮಹಾದೇವಪ್ಪ ವಂದಾಲ ಇತರರು ಶಿಕ್ಷಕರಿಗೆ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.

ವಿದ್ಯಾರ್ಥಿಗಳಿಂದ ಪಂಚಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಪ್ರಭಾಕರ ಪಟವಾರಿ ಸಂಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

13 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

15 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

22 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

22 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago