ಬಿಸಿ ಬಿಸಿ ಸುದ್ದಿ

ಹುಣಸಿಹೊಳೆ:ಕಣ್ವ ಮಠದಲ್ಲಿ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ

ಸುರಪುರ: ತಾಲ್ಲೂಕಿನ ಹುಣಸಿಹೊಳೆ ಗ್ರಾಮದ ಕಣ್ವಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ವಿದ್ಯಾತಪೋನಿಧಿ ತೀರ್ಥರ ಆರಾಧನೆ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಣ್ವಮಠದ ಪೀಠಾಧಿಪತಿ ವಿದ್ಯಾ ಕಣ್ವವಿರಾಜ ತೀರ್ಥರು ಅನುಗ್ರಹ ಸಂದೇಶ ನೀಡಿ, ಮಹಾತಪಸ್ವಿಗಳಾಗಿದ್ದ ವಿದ್ಯಾ ತಪೋನಿಧಿ ತೀರ್ಥರು ಕಠಿಣವಾದ ವೃತ ಮತ್ತು ಅನುಷ್ಠಾನದಿಂದ ವಿಠಲಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿದ್ದರು ಎಂದು ಹೇಳಿದರು.

ಮಹಾಭಾರತದ ಭೀಷ್ಮಾಚಾರ್ಯರು ಆಚರಿಸಿದ್ದ ಪಾಯೋವೃತ ಸ್ವೀಕರಿಸಿ 54 ದಿನಗಳ ಕಾಲ ನಿರಂತರವಾಗಿ ಉಪವಾಸವಿದ್ದು ದೇಹತ್ಯಾಗ ಮಾಡಿ ವೃಂದಾವನಸ್ಥರಾಗಿ 36 ವರ್ಷಗಳು ಗತಿಸಿದರೂ ಈಗಲೂ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ,ತಮ್ಮ ತಪಶಕ್ತಿ ಮತ್ತು ಸಾಧನೆ ಮಾಡಿಕೊಂಡಿದ್ದ ಮಂತ್ರಗಳಿಂದ ಅನೇಕ ಭಕ್ತರ ರೋಗ ರುಜಿಗಳನ್ನು ಶಮನ ಮಾಡಿದ್ದರು. ಅವರು ಮಂತ್ರಿಸಿದ ತೆಂಗು ಮತ್ತು ಉತ್ತತ್ತಿ ಸ್ವೀಕರಿಸಿದ ಹಲವರಲ್ಲಿ ಸಂತಾನ ಭಾಗ್ಯ ದೊರೆತಿದೆ ಎಂದು ಹೇಳಿದರು.

ಆರಾಧನೆ ಅಂಗವಾಗಿ ಶ್ರೀಪಾದಂಗಳವರು ವಿಠಲಕೃಷ್ಣನ ಸಂಸ್ಥಾನ ಪೂಜೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಮಹಾಭಿಷೇಕ, ನೈವೇದ್ಯ, ಮಹಾ ಮಂಗಳಾರುತಿ ನೆರವೇರಿಸಿದರು. ವಿದ್ಯಾತಪೋನಿಧಿ ತೀರ್ಥರ ವೃಂದಾವನಕ್ಕೆ ಅಭಿಷೇಕ, ಪೂಜೆ, ಅಲಂಕಾರ, ಮಂಗಳಾರುತಿ, ಹಸ್ತೋದಕ ನೆರವೇರಿಸಿದರು.

ಜಗನ್ನಾಥಾಚಾರ್ಯ ಕೊಡೇಕಲ್, ಶಂಕರಭಟ್ ಜೋಷಿ ವೈದಿಕತ್ವದಲ್ಲಿ ಹಣಹೋಮ ನಡೆಯಿತು. ಕೊಪ್ರೇಶಾಚಾರ್ಯ ಸಿಂಧನೂರ ಅವರಿಂದ ಭಗವದ್ಗೀತೆ, ವಿಷ್ಣು ಸಹಸ್ರನಾಮ ಕುರಿತು ಪ್ರವಚನ ಜರುಗಿತು. ವೇಣುಗೋಪಾಲ ಭಜನಾ ಮಂಡಳಿಯವರು ದೇವರನಾಮ ಹಾಡಿದರು.

ಕಣ್ವಮಠ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮನೋಹರ ಮಾಡಿಗೇರಿ, ಗುರುಪುತ್ರ ಔದುಂಬರಭಟ್ಟ ಜೋಷಿ, ಮಠದ ಕಾರ್ಯದರ್ಶಿ ಸುರೇಶ ಕುಲಕರ್ಣಿ, ರಾಜು ಜೋಷಿ, ಪ್ರಲ್ಹಾದ ಕನಸಾವಿ, ಸುಭಾಷ ಮಾಡಿಗೇರಿ, ಭೀಮಸೇನಾಚಾರ್ಯ ವನದುರ್ಗ, ರಾಧಾಕೃಷ್ಣ ಜೋಷಿ, ಪ್ರಶಾಂತ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ, ಅರುಣ ಜೋಷಿ, ರಘುನಾಥ ಜೋಷಿ, ಪ್ರಾಣೇಶಾಚಾರ್ಯ ಗೋಲಗೇರಿ, ರಮೇಶ ಕಾಮನಟಗಿ ಇತರರು ಭಾಗವಹಿಸಿದ್ದರು.

emedialine

Recent Posts

ಮಾದಕವಸ್ತಗಳು ಭವಿಷ್ಯಕ್ಕೆ ಮಾರಕ; ಗಂಜಗಿರಿ

ಚಿಂಚೋಳಿ: ವಿದ್ಯಾರ್ಥಿಗಳ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳವ ಮಹತ್ವದ ಘಟ್ಟವಾಗಿದೆ ಈ ಹಂತದಲ್ಲಿ ಮಾದಕವಸ್ತು ಮತ್ತು ಮದ್ಯಸೇವನೆ ಯಂತಹ ಚಟಗಳಿಗೆ…

1 hour ago

ಸುರಪುರ-ಕಲಬುರ್ಗಿ ಸಗರನಾಡು ಬಸ್‍ಗಳ ಸಂಚಾರ ಹೆಚ್ಚಿಸಿ; ರಮೇಶ ದೊರೆ

ಸುರಪುರ: ನಗರದಿಂದ ಕಲಬುರಗಿ ನಗರಕ್ಕೆ ಸಗರನಾಡು ಬಸ್‍ಗಳ ಸಂಚಾರದಲ್ಲಿ ಸಾಕಷ್ಟು ಕಡಿಮೆಗೊಂಡಿದ್ದು ಇದರಿಂದಾಗಿ ಸುರಪುರ ದಿಂದ ಕಲಬುರಗಿ ನಗರಕ್ಕೆ ಸಂಚರಿಸಲು…

15 hours ago

ಸುರಪುರ:ಬಸ್ ಪಾಸ್ ನೀಡಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಸುರಪುರ: ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವಂತೆ ಹಾಗೂ ವಿವಿಧ ಗ್ರಾಮಗಳಿಗೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತ…

15 hours ago

ಬೆಂಗಳೂರ ನಿರ್ಮಾತೃ ಕೆಂಪೇಗೌಡ ಹೆಸರು ಅಜಾರಾಮರ

ಸುರಪುರ:ಬೆಂಗಳೂರ ನಿರ್ಮತೃ ನಾಡಪ್ರಭು ಕೆಂಪೇಗೌಡ ಅವರು ಭಾರತದ ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾತ ಮಾತನಾಡಿದರು. ನಗರದ…

15 hours ago

ಸಿಮೆಂಟ್ ಕಾರ್ಖಾನೆಗಳಲ್ಲಿ 50% ಸ್ಥಳಿಯರಿಗೆ ಉದ್ಯೋಗ ನೀಡಲು ಕೇಂದ್ರ ಸಚಿವರಿಗೆ ಮನವಿ

ಶಹಾಬಾದ, ಕಡೇಚೂರು-ಬಾಡಿಯಾಳ ಕಾರ್ಖಾನೆ ಪುನರ ಪ್ರಾರಂಭಿಸಲು ಮನವಿ ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ…

15 hours ago

ಶಾಲೆ-ಅಂಗನವಾಡಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆ ವೀಕ್ಷಣೆ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ  ಕಲಬುರಗಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ…

15 hours ago