ಹುಣಸಿಹೊಳೆ:ಕಣ್ವ ಮಠದಲ್ಲಿ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ

0
27

ಸುರಪುರ: ತಾಲ್ಲೂಕಿನ ಹುಣಸಿಹೊಳೆ ಗ್ರಾಮದ ಕಣ್ವಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ವಿದ್ಯಾತಪೋನಿಧಿ ತೀರ್ಥರ ಆರಾಧನೆ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಣ್ವಮಠದ ಪೀಠಾಧಿಪತಿ ವಿದ್ಯಾ ಕಣ್ವವಿರಾಜ ತೀರ್ಥರು ಅನುಗ್ರಹ ಸಂದೇಶ ನೀಡಿ, ಮಹಾತಪಸ್ವಿಗಳಾಗಿದ್ದ ವಿದ್ಯಾ ತಪೋನಿಧಿ ತೀರ್ಥರು ಕಠಿಣವಾದ ವೃತ ಮತ್ತು ಅನುಷ್ಠಾನದಿಂದ ವಿಠಲಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡಿದ್ದರು ಎಂದು ಹೇಳಿದರು.

Contact Your\'s Advertisement; 9902492681

ಮಹಾಭಾರತದ ಭೀಷ್ಮಾಚಾರ್ಯರು ಆಚರಿಸಿದ್ದ ಪಾಯೋವೃತ ಸ್ವೀಕರಿಸಿ 54 ದಿನಗಳ ಕಾಲ ನಿರಂತರವಾಗಿ ಉಪವಾಸವಿದ್ದು ದೇಹತ್ಯಾಗ ಮಾಡಿ ವೃಂದಾವನಸ್ಥರಾಗಿ 36 ವರ್ಷಗಳು ಗತಿಸಿದರೂ ಈಗಲೂ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ,ತಮ್ಮ ತಪಶಕ್ತಿ ಮತ್ತು ಸಾಧನೆ ಮಾಡಿಕೊಂಡಿದ್ದ ಮಂತ್ರಗಳಿಂದ ಅನೇಕ ಭಕ್ತರ ರೋಗ ರುಜಿಗಳನ್ನು ಶಮನ ಮಾಡಿದ್ದರು. ಅವರು ಮಂತ್ರಿಸಿದ ತೆಂಗು ಮತ್ತು ಉತ್ತತ್ತಿ ಸ್ವೀಕರಿಸಿದ ಹಲವರಲ್ಲಿ ಸಂತಾನ ಭಾಗ್ಯ ದೊರೆತಿದೆ ಎಂದು ಹೇಳಿದರು.

ಆರಾಧನೆ ಅಂಗವಾಗಿ ಶ್ರೀಪಾದಂಗಳವರು ವಿಠಲಕೃಷ್ಣನ ಸಂಸ್ಥಾನ ಪೂಜೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಮಹಾಭಿಷೇಕ, ನೈವೇದ್ಯ, ಮಹಾ ಮಂಗಳಾರುತಿ ನೆರವೇರಿಸಿದರು. ವಿದ್ಯಾತಪೋನಿಧಿ ತೀರ್ಥರ ವೃಂದಾವನಕ್ಕೆ ಅಭಿಷೇಕ, ಪೂಜೆ, ಅಲಂಕಾರ, ಮಂಗಳಾರುತಿ, ಹಸ್ತೋದಕ ನೆರವೇರಿಸಿದರು.

ಜಗನ್ನಾಥಾಚಾರ್ಯ ಕೊಡೇಕಲ್, ಶಂಕರಭಟ್ ಜೋಷಿ ವೈದಿಕತ್ವದಲ್ಲಿ ಹಣಹೋಮ ನಡೆಯಿತು. ಕೊಪ್ರೇಶಾಚಾರ್ಯ ಸಿಂಧನೂರ ಅವರಿಂದ ಭಗವದ್ಗೀತೆ, ವಿಷ್ಣು ಸಹಸ್ರನಾಮ ಕುರಿತು ಪ್ರವಚನ ಜರುಗಿತು. ವೇಣುಗೋಪಾಲ ಭಜನಾ ಮಂಡಳಿಯವರು ದೇವರನಾಮ ಹಾಡಿದರು.

ಕಣ್ವಮಠ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮನೋಹರ ಮಾಡಿಗೇರಿ, ಗುರುಪುತ್ರ ಔದುಂಬರಭಟ್ಟ ಜೋಷಿ, ಮಠದ ಕಾರ್ಯದರ್ಶಿ ಸುರೇಶ ಕುಲಕರ್ಣಿ, ರಾಜು ಜೋಷಿ, ಪ್ರಲ್ಹಾದ ಕನಸಾವಿ, ಸುಭಾಷ ಮಾಡಿಗೇರಿ, ಭೀಮಸೇನಾಚಾರ್ಯ ವನದುರ್ಗ, ರಾಧಾಕೃಷ್ಣ ಜೋಷಿ, ಪ್ರಶಾಂತ ಕುಲಕರ್ಣಿ, ಪ್ರಸನ್ನ ಆಲಂಪಲ್ಲಿ, ಅರುಣ ಜೋಷಿ, ರಘುನಾಥ ಜೋಷಿ, ಪ್ರಾಣೇಶಾಚಾರ್ಯ ಗೋಲಗೇರಿ, ರಮೇಶ ಕಾಮನಟಗಿ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here