ಬಿಸಿ ಬಿಸಿ ಸುದ್ದಿ

ಡಾ.ಸಿದ್ದಯ್ಯ ಪುರಾಣಿಕ ಸಾಹಿತ್ಯ ಪ್ರಶಸ್ತಿಗೆ `ರಾಜಗಂಭೀರ’ ಕೃತಿ ಆಯ್ಕೆ

ಬೆಂಗಳೂರು: ಡಾ.ಸಿದ್ದಯ್ಯ ಪುರಾಣಿಕ ಸ್ಮಾರಕ ಟ್ರಸ್ಟ್ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ `ಡಾ.ಸಿದ್ದಯ್ಯ ಪುರಾಣಿಕ ಸ್ಮಾರಕ ಸಾಹಿತ್ಯ ಪ್ರಶಸ್ತಿ’ಯನ್ನು ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಕಲಬುರಗಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಅವರ `ರಾಜಗಂಭೀರ’ ಗ್ರಂಥಕ್ಕೆ ಲಭಿಸಿದೆ.

ಆಗಸ್ಟ್ 24 ರಂದು ಕೊಪ್ಪಳದಲ್ಲಿ ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಟ್ರಸ್ಟ್ ಮತ್ತು ಕೊಪ್ಪಳ ಜಿಲ್ಲಾ ನಾಗರಿಕರ ಸಾಂಸ್ಕøತಿಕ ವೇದಿಕೆ ವತಿಯಿಂದ ನಡೆಯಲಿರುವ 17 ನೆಯ ಜಿಲ್ಲಾ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಾದವಾಡಗಿ ಹಾಗೂ ಸಂಚಾಲಕ ಮಹೇಶ್ ಬಾಬು ತಿಳಿಸಿದ್ದಾರೆ.

ಸೇಡಂನ ಮಾಜಿ ಶಾಸಕರು, ಶಿಕ್ಷಣ ಪ್ರೇಮಿಗಳು ಹಾಗೂ ಕೃಷಿಕರು ಆಗಿದ್ದ ಡಾ.ನಾಗರೆಡ್ಡಿ ಪಾಟೀಲ ರವರ ಜೀವನಗಾಥೆ ಇರುವ ಈ ಗ್ರಂಥವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

emedialine

Recent Posts

ದೌರ್ಜನ್ಯ ಪ್ರಕರಣದಲ್ಲಿ ವಿಳಂಬವಿಲ್ಲದೆ ಪರಿಹಾರ ನೀಡಬೇಕು; ಎಸ್‌.ಸಿ-ಎಸ್.ಟಿ ದೌರ್ಜನ್ಯ ಮೇಲುಸ್ತುವಾರಿ ಸಮಿತಿ ಸಭೆ

ಕಲಬುರಗಿ; ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣದಲ್ಲಿ ಕುಟುಂಬದ ಅವಲಂಭಿತ ಸದಸ್ಯರಿಗೆ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು…

57 mins ago

ನಮೋಶಿಗೆ ವಿಪಕ್ಷ ನಾಯಕ ಮಾಡಲು ಹರ್ಷಾನಂದ ಗುತ್ತೇದಾರ ಮನವಿ

ಆಳಂದ; ಕಲ್ಯಾಣ ಕರ್ನಾಟಕ ಭಾಗದ ಹಿರಿಯ ರಾಜಕಾರಣಿ ಹಾಗೂ ವಿಧಾನ ಪರಿಷತನ ಸದಸ್ಯ ಶಶೀಲ ನಮೋಶಿ ಅವರಿಗೆ ವಿಧಾನ ಪರಿಷತ ವಿರೋಧ…

59 mins ago

ಸಂಗೀತದ ರಾಗಗಳಿಂದ ರೋಗ ನಿವಾರಣೆ

ಕಲಬುರಗಿ : ಸಂಗೀತವು ಇಂದಿನ ದಿನ ಮಾನದಲ್ಲಿ ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತಿದೆ. ಸಂಗೀತದ ರಾಗಗಳಿಂದ ರೋಗ ನಿವಾರಣೆ…

1 hour ago

ಬದಲಾಗುವ ಜಗತ್ತಿನಲ್ಲಿ ಸಾಹಿತ್ಯದ ಬದಲಾವಣೆ ಬಹು ಮುಖ್ಯ

ಕಲಬುರಗಿ; ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ “ಆಧುನಿಕ ಕನ್ನಡ ಕಾವ್ಯ ಧಾರೆಗಳು” ಎಂಬ…

1 hour ago

ಮೋಹನ್ ಕುಮಾರ್ ದಾನಪ್ಪಗೆ ಸನ್ಮಾನ

ಬೆಂಗಳೂರು: 28 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬಿ.ವಿ.ಗೌಡರವರ ನಿಯೋಗವು ಇತ್ತೀಚೆಗೆ…

1 hour ago

ಮಾದಕವಸ್ತಗಳು ಭವಿಷ್ಯಕ್ಕೆ ಮಾರಕ; ಗಂಜಗಿರಿ

ಚಿಂಚೋಳಿ: ವಿದ್ಯಾರ್ಥಿಗಳ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳವ ಮಹತ್ವದ ಘಟ್ಟವಾಗಿದೆ ಈ ಹಂತದಲ್ಲಿ ಮಾದಕವಸ್ತು ಮತ್ತು ಮದ್ಯಸೇವನೆ ಯಂತಹ ಚಟಗಳಿಗೆ…

5 hours ago