ಬಿಸಿ ಬಿಸಿ ಸುದ್ದಿ

ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ನಿಷೇಧ

ಬೆಂಗಳೂರು; ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ The Food Safety and Standards Act, 2006  ರ ನಿಯಮ 3 (1)(zz)(viii) ಮತ್ತು The Food Safety and Standards (Food Products Standards and Food Additives) Regulations,  2011ರ ನಿಯಮ 16.0 ಗಳಡಿ ಅವಕಾಶವಿಲ್ಲದಿರುವುದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 30(2)(ಎ)ರಡಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ವೆಜ್/ಚಿಕನ್/ಫಿಶ್ ಇತರೆ ಕಬಾಬ್‍ಗಳ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದನ್ನು ನಿಬರ್ಂಧಿಸಿ ಆದೇಶಿಸಲಾಗಿದೆ.

ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ಶಿಕ್ಷೆಯನ್ನು ಮತ್ತು ರೂ.10.00 ಲಕ್ಷಗಳವರೆಗೆ ದಂಡವನ್ನು ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಗುವುದು.

ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‍ನ ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಕಳಪೆಯಿಂದ ಕೂಡಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‍ನ 39 ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಫಲಿತಾಂಶದನ್ವಯ 08 ಮಾದರಿಗಳು ಸನ್‍ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಕೃತಕ ಬಣ್ಣಗಳು ಕಂಡು ಬಂದಿದ್ದು, The Food Safety and Standards Act, 2006 ರ ನಿಯಮ 3(1)(zz)(viii)ರನ್ವಯ ಅಸುರಕ್ಷಿತವಾಗಿರುತ್ತವೆ.

The Food Safety and Standards (Food Products Standards and Food Additives) Regulations, 2011 ರ ನಿಯಮ 16.0 ರನ್ವಯ ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ.

ಕೃತಕ ಬಣ್ಣಗಳನ್ನು ಬಳಸಿರುವ ತಿಂಡಿ ತಿನಿಸುಗಳನ್ನು ದೀರ್ಘಕಾಲ ಬಳಸುವುದರಿಂದ ಚಿಕ್ಕಮಕ್ಕಳೂ ಸೇರಿದಂತೆ ಬಳಕೆದಾರರಿಗೆ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಕೃತಕ ಬಣ್ಣಗಳನ್ನು ಬಳಸಿ ಉಪಯೋಗಿಸದಂತೆ/ಮಿತವಾಗಿ ಬಳಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ದೌರ್ಜನ್ಯ ಪ್ರಕರಣದಲ್ಲಿ ವಿಳಂಬವಿಲ್ಲದೆ ಪರಿಹಾರ ನೀಡಬೇಕು; ಎಸ್‌.ಸಿ-ಎಸ್.ಟಿ ದೌರ್ಜನ್ಯ ಮೇಲುಸ್ತುವಾರಿ ಸಮಿತಿ ಸಭೆ

ಕಲಬುರಗಿ; ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣದಲ್ಲಿ ಕುಟುಂಬದ ಅವಲಂಭಿತ ಸದಸ್ಯರಿಗೆ ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದು…

1 hour ago

ನಮೋಶಿಗೆ ವಿಪಕ್ಷ ನಾಯಕ ಮಾಡಲು ಹರ್ಷಾನಂದ ಗುತ್ತೇದಾರ ಮನವಿ

ಆಳಂದ; ಕಲ್ಯಾಣ ಕರ್ನಾಟಕ ಭಾಗದ ಹಿರಿಯ ರಾಜಕಾರಣಿ ಹಾಗೂ ವಿಧಾನ ಪರಿಷತನ ಸದಸ್ಯ ಶಶೀಲ ನಮೋಶಿ ಅವರಿಗೆ ವಿಧಾನ ಪರಿಷತ ವಿರೋಧ…

1 hour ago

ಸಂಗೀತದ ರಾಗಗಳಿಂದ ರೋಗ ನಿವಾರಣೆ

ಕಲಬುರಗಿ : ಸಂಗೀತವು ಇಂದಿನ ದಿನ ಮಾನದಲ್ಲಿ ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತಿದೆ. ಸಂಗೀತದ ರಾಗಗಳಿಂದ ರೋಗ ನಿವಾರಣೆ…

1 hour ago

ಬದಲಾಗುವ ಜಗತ್ತಿನಲ್ಲಿ ಸಾಹಿತ್ಯದ ಬದಲಾವಣೆ ಬಹು ಮುಖ್ಯ

ಕಲಬುರಗಿ; ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ “ಆಧುನಿಕ ಕನ್ನಡ ಕಾವ್ಯ ಧಾರೆಗಳು” ಎಂಬ…

2 hours ago

ಮೋಹನ್ ಕುಮಾರ್ ದಾನಪ್ಪಗೆ ಸನ್ಮಾನ

ಬೆಂಗಳೂರು: 28 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಬಿ.ವಿ.ಗೌಡರವರ ನಿಯೋಗವು ಇತ್ತೀಚೆಗೆ…

2 hours ago

ಮಾದಕವಸ್ತಗಳು ಭವಿಷ್ಯಕ್ಕೆ ಮಾರಕ; ಗಂಜಗಿರಿ

ಚಿಂಚೋಳಿ: ವಿದ್ಯಾರ್ಥಿಗಳ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳವ ಮಹತ್ವದ ಘಟ್ಟವಾಗಿದೆ ಈ ಹಂತದಲ್ಲಿ ಮಾದಕವಸ್ತು ಮತ್ತು ಮದ್ಯಸೇವನೆ ಯಂತಹ ಚಟಗಳಿಗೆ…

6 hours ago