ಬಿಸಿ ಬಿಸಿ ಸುದ್ದಿ

ಸಂಗೀತದ ರಾಗಗಳಿಂದ ರೋಗ ನಿವಾರಣೆ

ಕಲಬುರಗಿ : ಸಂಗೀತವು ಇಂದಿನ ದಿನ ಮಾನದಲ್ಲಿ ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತಿದೆ. ಸಂಗೀತದ ರಾಗಗಳಿಂದ ರೋಗ ನಿವಾರಣೆ ಮಾಡಲಾಗುತ್ತದೆ ಎಂದು ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮುಖಿಮ್ ಮೀಯಾ ಅಭಿಪ್ರಾಯಪಟ್ಟರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಸಂಗೀತ ವಿಭಾಗದ ವತಿಯಿಂದ ವಿಶ್ವಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಂಗೀತಕ್ಕೆ ಯಾವುದೇ ಜಾತಿ, ಧರ್ಮ ಸೀಮಿತವಾಗಿಲ್ಲ ಅದು ವಿಶ್ವವ್ಯಾಪಿಯಾಗಿದೆ. ಸಂಗೀತವು ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಸಂತೋಷ, ಸಕಾರಾತ್ಮಕತೆ ಮತ್ತು ಮನರಂಜನೆ ತರುತ್ತದೆ. ಇದು ಭಾವನೆಗಳನ್ನು ಹೊತ್ತುಕೊಂಡು ವಿವಿಧ ಸಮಸ್ಯೆಗಳನ್ನು ಪರಿಹರಿಸುತ್ತದೆ. ಖಿನ್ನತೆ, ಅಘಾತ ಮತ್ತು ಆತಂಕದಲ್ಲಿ ಸಂಗೀತವು ಸಹಾಯಕವಾಗುತ್ತದೆ ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಸಂಗೀತವು ಪುರಾತನವಾದದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನರಿಂದ ಜನರಿಗೆ ಅನೇಕ ಜನಪದಗೀತೆಗಳು ಬೆಳೆದುಕೊಂಡು ಬಂದಿವೆ. ಸಂಗೀತವು ಪ್ರತಿಯೊಂದು ಜೀವಿಗಳಿಗೂ ಇಂಪನ್ನು ನೀಡುತ್ತದೆ. ಇಂದಿನ ಆಧುನಿಕ ಯುಗದಲ್ಲಿ ವೈದ್ಯರು ರೋಗಿಗಳಿಗೆ ಸಂಗೀತ ಆಲಿಸುವಂತೆ ಸೂಚಿಸುತ್ತಿದ್ದಾರೆ ಎಂದು ತಿಳಿಸಿದರು.

ನಂತರ ಆಕಾಶವಾಣಿ ಹಿರಿಯ ಸಂಗೀತ ಕಲಾವಿದರಾದ ಶಿವರುದ್ರಯ್ಯ ಕಲಬುರ್ಗಿಮಠ ಗೌಡಗಾಂವ ಇವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಡಾ.ಸಿದ್ಧಲಿಂಗರೆಡ್ಡಿ, ವಿಭಾಗದ ಮುಖ್ಯಸ್ಥರಾದ ಡಾ.ಸೀಮಾ ಪಾಟೀಲ ವೇದಿಕೆ ಮೇಲಿದ್ದರು.

ಸಂಗೀತ ಪ್ರಾಧ್ಯಾಪಕರಾದ ವೀರಭದ್ರಯ್ಯ ಸ್ಥಾವರಮಠ ಸ್ವಾಗತಿಸಿ, ನಿರೂಪಿಸಿದರು. ಕು. ಅಕ್ಷತಾ ಹಿರೇಮಠ ಮತ್ತು ಕು.ಸ್ಫೂರ್ತಿ ಪಂಚಾಳ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

emedialine

Recent Posts

ನಿಧನ ವಾರ್ತೆ: ಹಣಮಂತರಾವ್ ನಾಟೀಕಾರ

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಆಲೂರು ನಿವಾಸಿ ಹಾಗೂ ಕಲಬುರಗಿ ಡಯಟ್ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಹಣಮಂತರಾವ್ ನಾಟೀಕಾರ(53)…

2 hours ago

ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ಪತ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್ ಆರ್ ಐ ಕೋಟಾ ಕೊಡಿ 508…

4 hours ago

ಆಂದೋಲಾ ಸ್ವಾಮೀಜಿಗೆ ಘತ್ತರಗಾ ಗ್ರಾಮಸ್ಥರ ಸವಾಲು

ಭಾಗ್ಯ ವಂತಿ ದೇವಸ್ಥಾನ ಅಭಿವೃದ್ಧಿ ಘತ್ತರಗಾಕ್ಕೆ ಬಂದು ಕಣ್ತೆರೆದು ನೋಡಲಿ ಕಲಬುರಗಿ: ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಹಿಂದಿನ‌ ಕಲಬುರಗಿ…

4 hours ago

ಉಪ ಕಾರಾಗೃಹಕ್ಕೆ ಜಿಲ್ಲಾ ನ್ಯಾಯಾಧೀಶರ ಧಿಡೀರ್ ಭೇಟಿ; ಪರಿಶೀಲನೆ

ಸುರಪುರ:ಪಟ್ಟಣದ ಉಪ ಕಾರಾಗೃಹಕ್ಕೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ…

4 hours ago

ರಂಗಭೂಮಿಗೆ ಸಿ.ಜಿ.ಕೆ ಕೊಡುಗೆ ಅಪಾರ; ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭ

ಸುರಪುರ:ಕರ್ನಾಟಕ ರಂಗಕ್ಷೇತ್ರಕ್ಕೆ ಹಿರಿಯ ನಾಟಕಕಾರರಾಗಿದ್ದ ಸಿ.ಜಿ.ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ…

4 hours ago

ಕನ್ನಡ ಸಾಹಿತ್ಯ ಸಂಘ ಸಾಹಿತಿ ದಿ.ಡಾ.ಕಮಲಾ ಹಂಪನಾಗೆ ಶ್ರದ್ಧಾಂಜಲಿ

ಸುರಪುರ: ಮೇರು ಸಾಹಿತಿ ಡಾ.ಕಮಲಾಹಂಪನಾ ಅವರ ಕೃತಿಗಳನ್ನು ಓದುವದು ಹಾಗೂ ಆ ಕೃತಿಗಳು ಸಾಮಾನ್ಯ ಜನರಿಗೆ ಸಿಗುವಂತೆ ಮಾಡುವದು ಇಂದಿನ…

4 hours ago