ಬಿಸಿ ಬಿಸಿ ಸುದ್ದಿ

ಡಾ. ಫ. ಗು.ಹಳಕಟ್ಟಿ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಶರಣಪ್ಪ ನಾಗಪ್ಪ ಜೇನವೆರಿ ಆಯ್ಕೆ

ಕಲಬುರಗಿ: ಮಹಾಂತ ನಗರದ್ಲಲಿರುವ ಬಸವ ಮಂಟಪದಲ್ಲಿ ಅಯೋಜಿಸಲಾದ ಸಭೆಯಲ್ಲಿ ಎಲ್ಲಾ ಕಾಯಕ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಚರ್ಚಿಸಿ 144 ನೇ, ಜಯಂತಿ ಪ್ರಯುಕ್ತ, ವಚನ ಸಾಹಿತ್ಯ ಪಿತಾಮಹ ಡಾ. ಫ. ಗು.ಹಳಕಟ್ಟಿ ಯವರ ಜಯಂತಿ ಉತ್ಸವ ಸಮಿತಿಗೆ ಅಧ್ಯಕ್ಷರನ್ನಾಗಿ, ಶರಣಪ್ಪ ನಾಗಪ್ಪ ಜೇನವೆರಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಸರಕಾರದ ವತಿಯಿಂದ ಜರಗುವ 3ನೇ ವರ್ಷದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಕಾಯಕ ಶರಣರ ಒಮ್ಮತದಿಂದ ಶರಣಪ್ಪ ಜೆನವೇರಿ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಇವರು ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಮತ್ತು ಕನ್ನಡ ವಚನ ಸಾಹಿತ್ಯ ಅಕಾಡೆಮಿ ಸ್ಥಾಪನೆ ಗೊಳಿಸಿದ ಸ್ಥಳೀಯ ಸಂಸ್ಥೆಯಾದ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಟ್ರಸ್ಟ್, ಸಂಸ್ಥಾಪಕ ಅಧ್ಯಕ್ಷರು, ಬ್ರಹ್ಮಪೂರ್ ನಿವಾಸಿಗಳು, KEB ಯಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಕೊನೆಯಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ 2009 ರಲ್ಲಿ ನಿವೃತ್ತಿ ಹೊಂದಿದ್ದಾರೆ.

15 ವರ್ಷಗಳಿಂದ ಅವರು ಮಾಡುತ್ತಿರುವ ಸಾಮಾಜಿಕ ಜಾಗ್ರತಿ ಕಾರ್ಯಗಳು ಮತ್ತು ನೇಕಾರ ಸಮಾಜದ ಮೇಲೆ ಇರುವ ಅವರ ಕಾಳಜಿಯನ್ನು ಅರಿತು ಇಂದು ಅವರಿಗೆ ಫ.ಗು.ಹಳಕಟ್ಟಿ ಯವರ 3 ನೇ ಜಯಂತಿಯ ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ತಿಳಿಸಿದ್ದಾರೆ.

2022 ರಲ್ಲಿ ಕರ್ನಾಟಕ ಸರಕಾರ ಜಯಂತಿ ಘೋಷಣೆ ಮಾಡಿದಾಗ ನಮ್ಮ ನೈತ್ರುತ್ವದಲ್ಲಿ ಒಂದು ಉತ್ಸವ ಸಮಿತಿ ರಚಿಸಿ ಆಚರಿಸಲಾಯಿತು, 2023 ರಲ್ಲಿ ಪ್ರಗತಿಪರ ಖ್ಯಾತ ಲೇಖಕರಾದ ಸೂರ್ಯಕಾಂತ ಸೊನ್ನದ ರವರ ಮಾರ್ಗದರ್ಶನ ದಲ್ಲಿ ಹಮ್ಮಿಕೊಂಡು ಆಚರಿಸಲಾಗಿದೆ.

emedialine

Recent Posts

ಮಹಿಳೆಯರನ್ನು ಗೌರವಿಸುವ ಶ್ರೀಮಂತ ಸಂಪ್ರದಾಯ ಹೊಂದಿರುವ ದೇಶ ಭಾರತ

ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಅಶೋಕ ಪಾಟೀಲ ಮಹಿಳೆ ಅಥವಾ ಸ್ತ್ರೀ ಪದವು ಸಂಸ್ಕøತದ್ದು, ಕನ್ನಡದಲ್ಲಿ ಈ…

1 week ago

ನಿಧನ ವಾರ್ತೆ: ಭೀಮರಾವ.ಸಿ.ಸುಗೂರ

ಶಹಾಬಾದ:ನಗರದ ಹಳೆಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಭೀಮರಾವ.ಸಿ.ಸುಗೂರ (77) ಶನಿವಾರದಂದು ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಸುಪುತ್ರರು, ಇಬ್ಬರು ಸುಪುತ್ರಿಯರು…

2 weeks ago

ನೆಲೋಗಿ ಬಿ.ಆರ್.ಅಂಬೇಡ್ಕರ ಭವನದಲ್ಲಿ ಛತ್ರಪತಿ ಶಿವಾಜಿಯ ಮಹಾರಾಜರ ಜನ್ಮ ದಿನಾಚರಣೆ

ಜೇವರ್ಗಿ: ಇಂದು ನೆಲೋಗಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಸೇವಾ ಚಾರಿಟೇಬಲ್ ಟ್ರಸ್ಟ್ ನೆಲೋಗಿವತಿಯಿಂದ ಡಾ. ಬಿ.ಆರ್.ಅಂಬೇಡ್ಕರ ಸಮುದಾಯ ಭವನದಲ್ಲಿ ಛತ್ರಪತಿ…

3 weeks ago

ಸಮಾಜದಲ್ಲಿನ ಅನಿಷ್ಟ ಪದ್ಧತಿ ಹೋರಾಟ ಅಗತ್ಯ: ಮೇಯರ್

ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಮೂಢನಂಬಿಕೆ, ಅನಿಷ್ಟ ಪದ್ಧತಿ, ಸಂವಿಧಾನದ ಆಶಯ ಈಡೇಸುವ ನಿಟ್ಟಿನಲ್ಲಿ ಜನ್ಮ ತಾಳಿದ ಮಾನವ ಬಂಧುತ್ವ…

4 weeks ago

ಕಲಬುರಗಿ; 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ ಆಯೋಜನೆ

ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ…

1 month ago

ಉಚಿತ ಆರೋಗ್ಯ ತಪಾಸಣೆ ಶಿಬಿರ

ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು…

1 month ago