ಬಿಸಿ ಬಿಸಿ ಸುದ್ದಿ

ಶಾಲೆ-ಅಂಗನವಾಡಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆ ವೀಕ್ಷಣೆ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ

ಕಲಬುರಗಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಗುರುವಾರ ಜಿಲ್ಲೆಯ ಕಲಬುರಗಿ ತಲೂಕಿನ ನಂದೂರ (ಬಿ) ಮತ್ತು ಚಿತ್ತಾಪೂರ ತಾಲೂಕಿನ ಹಣ್ಣಿಕೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.

ನಂದೂರು (ಬಿ) ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆ ಆಲಿಸಿದರು. ಹೆಣ್ಣು ಮಕ್ಕಳು ಶಾಲೆಯಲ್ಲಿ ಶೌಚಾಲಯ ಬಳಕೆಗೆ ಇಲ್ಲ ಶೌಚಾಲಯಕ್ಕೆ ಬಯಲೆ ಗತಿ ಎಂದು ಸದಸ್ಯರ ಗಮನಕ್ಕೆ ತಂದರು. ಶಾಲೆಯಲ್ಲಿ ಶೌಚಾಲಯ ಕಟ್ಟಡವಿದ್ದರು ಅದನ್ನು ಸಮಪರ್ಕವಾಗಿ ಬಳಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ಕೂಡಲೆ ಇದನ್ನು ಸರಿಪಡಿಸುವಂತೆ ಶಾಲೆ ಶಿಕ್ಷಕರಿಗೆ ಸೂಚನೆ ನೀಡಿದರು.

ಪ್ರಾಥಮಿಕ ಶಾಲೆಯ 7 ತರಗತಿಗಳಿಗೆ ನಾಲ್ಕೇ ಶಿಕ್ಷಕರು ಇರುವುದನ್ನು ಅರಿತ ರಕ್ಷಣಾ ಆಯೋಗದ ಸದಸ್ಯರು ಶಿಕ್ಷಕರಿಲ್ಲದೆ ಮಕ್ಕಳ ಕಲಿಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಈ ಸಂಬಂಧ ಇಂದೇ ಬಿ.ಇ.ಓ ಮತ್ತು ಡಿ.ಡಿ.ಪಿ.ಓ ಅವರೊಂದಿಗೆ ಚರ್ಚಿಸುವೆ ಎಂದರು.

ನಂತರ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿದ ಅವರು, ಅಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಫೌಷ್ಠಿಕ ಆಹಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಕ್ಕಳ ಪಾಲಕರು 2 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಭರ್ತಿ ಮಾಡುವಂತೆ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸದಸ್ಯರು ಸಂಬಂಧಪಟ್ಟ ಇಲಾಖೆಗೆ ಭರ್ತಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ನಂತರ ಸದಸ್ಯರು ಚಿತ್ತಾಪೂರ ತಾಲೂಕಿನ ಹಣ್ಣಿಕೇರಾ ಶಾಲೆಗೆ ಭೇಟಿ ನೀಡಿದರು. ಮಧ್ಯಾಹ್ನ ಹೊತ್ತಾಗಿದ್ದರಿಂದ ಶಾಲೆಯಲ್ಲಿ ಸುಮಾರು 290 ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದರಿಂದ ಊಟದ ಗುಣಮಟ್ಟ ಪರಿಶೀಲಿದರು. ಊಟದ ನಂತರ ಮಕ್ಕಳು ನಲ್ಲಿ ನೀರು ಕುಡಿಯುತ್ತಿರುವುದನ್ನು ಗಮನಿಸಿದ ಸದಸ್ಯರು, ಶಾಲೆಗೆ ಶುದ್ದ ಕುಡಿಯುವ ನೀರು ಪೂರೈಸುವಂತೆ ಮತ್ತು ಶೌಚಾಲಯ ಸರಿಪಡಿಸುವಂತೆ ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಸೂಚನೆ ನೀಡಿದರು.

ವಸತಿ ಶಾಲೆ ಶಿಫ್ಟ್ ಮಾಡಲು ಸೂಚನೆ: ಇತ್ತೀಚೆಗೆ ಚಿತ್ತಾಪೂರ ತಾಲೂಕಿನ ಕಡಬೂರ ಗ್ರಾಮದ 16 ವರ್ಷದ ಬಾಲಕಿ ಭಾಗ್ಯಶ್ರೀ ಕರದಾಳ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಕರದಾಳ ವಸತಿ ಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು ಭೇಟಿ ನೀಡಿದರು. ಬಾಲಕಿ ಆತ್ಮಹತ್ಯೆಯ ಭಯದಿಂದ ಶಾಲೆಯನ್ನು ಪಕ್ಕದ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ಅಲ್ಲಿ ಮೂಲಸೌಕರ್ಯ ಇಲ್ಲದಿರುವುದನ್ನು ಕಂಡರು. ಮೂಲ ಶಾಲೆಯಲ್ಲಿ ಸಕಲ ಮೂಲಸೌಕರ್ಯ ಹೊಂದಿರುವುದರಿಂದ ಮಕ್ಕಳಿಗೆ ಧೈರ್ಯ ತುಂಬಿ, ಸದರಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಗಳಾ ಪಾಟೀಲ, ಕಾನೂನು ಪರಿವೀಕ್ಷಣಧಿಕಾರಿ ಭರತೇಶ ಶೀಲವಂತ ಇದ್ದರು.

emedialine

Recent Posts

ಕಲಬುರಗಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 15ರ ಫಿರದೋಸ್ ಕಾಲೋನಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸೈಯದ್ ಮಿರಾಜೊದ್ದೀನ್ ಕಾಶೀಪ್…

1 hour ago

ಸಿಯುಕೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ತರಬೇತಿ ಯೋಜನೆ ಕುರಿತು ಜಾಗೃತಿ

ಕಲಬುರಗಿ: "ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ಸ್ಕೀಮ್ (ಓಂಖಿS) ಐಟಿಐ, ಪಿಯುಸಿ, ಡಿಪೆÇ್ಲೀಮಾ ಮತ್ತು ಪದವೀಧರರು ಸೇರಿದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ…

2 hours ago

ಭಾರತ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಸಮಾಲೋಚನ ಕಾರ್ಯಗಾರ

ಕಲಬುರಗಿ: ಭಾರತ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ನಗರದ ಅಪ್ಪಾ ಪಬ್ಲಿಕ್ ಶಾಲೆಯ ಲಿಂ.ಡಾ.ಬಸವರಾಜಪ್ಪ ಅಪ್ಪಾ ಸ್ಮಾರಕ ಭವನದಲ್ಲಿಂದು…

2 hours ago

ಖಾಸಗಿ ಶಾಲೆಯ ಡೊನೇಷನ್ ಹಾವಳಿ ತಡೆಯುವಂತೆ ಆಗ್ರಹಿಸಿ ಮನವಿ

ಕಲಬುರಗಿ: ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಶುಲ್ಕ ಹೆಚ್ಚಳ ಹಾಗೂ ಕಟ್ಟಡ ಮತ್ತು ಪ್ರವೇಶ ಶುಲ್ಕ ಹೆಸರಿನಲ್ಲಿ ಡೊನೇಷನ್…

2 hours ago

ಪರಿಚಲನೆ ಅಭಿನಂದನಾ ಗ್ರಂಥ ಲೋಕಾರ್ಪಣೆ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ…

3 hours ago

ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅರ್ಜಿ ಸ್ವೀಕಾರ

ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಮಾಡುವುದು ಸರಿಯಲ್ಲ: ಡಿವೈಎಸ್ಪಿ ಹಣಮಂತ್ರಾಯ ಸುರಪುರ: ಸಾರ್ವಜನಿಕರು ತಮ್ಮ ಯಾವುದೇ ಕೆಲಸಗಳಿಗೆ ಕಚೇರಿಗೆ ಬಂದರೆ ವಿಳಂಬ…

3 hours ago