ಕಲಬುರಗಿ : ಪತ್ರಕರ್ತರ ಹಾಗೂ ಕುಟುಂಬದವರ ಆರೋಗ್ಯ ತಪಾಸಣೆ ಶಿಬಿರವನ್ನು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯಿರುವ ಪ್ರತಿಷ್ಠಿತ ಯುನೈಟೆಡ್ ಆಸ್ಪತ್ರೆಯಲ್ಲಿ ಜು.1 ರಂದು ಬೆಳಗ್ಗೆ 9-30 ಗಂಟೆಯಿಂದ ಮಧ್ಯಾಹ್ನ 2-30 ಗಂಟೆಯವರೆಗೂ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾ ದಿನಾಚರಣೆ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಯುನೈಟೆಡ್ ಆಸ್ಪತ್ರೆಯ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಆಯೋಜಿಸಿರುವ ಶಿಬಿರವನ್ನು ನಗರ ಪೆÇಲೀಸ್ ಆಯುಕ್ತರಾದ ಚೇತನ ಆರ್. ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ಅವರು ಉದ್ಘಾಟಿಸುವರು.
ಆಸ್ಪತ್ರೆಯ ಮುಖ್ಯಸ್ಥರಾದ ಡಾ.ವಿಕ್ರಂ ಸಿದ್ದಾರಡ್ಡಿ ಅಧ್ಯಕ್ಷತೆ ವಹಿಸುರವು. ಹಿರಿಯ ಪತ್ರಕರ್ತರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು.
ಆರೋಗ್ಯ ತಪಾಸಣೆ ಜತೆಗೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ಯುನೈಟೆಡ್ ಆಸ್ಪತ್ರೆಯ ತಜ್ಞ ವೈದ್ಯರು ಮಾಡುವರು. ಹೀಗಾಗಿ ಶಿಬಿರದಲ್ಲಿ ಮಾಧ್ಯಮಗಳ ಹಾಗೂ ಪತ್ರಿಕೆಗಳ ಎಲ್ಲ ಉದ್ಯೋಗಿಗಳು ಹಾಗೂ ಕುಟುಂಬದವರು ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ರಾಜ್ಯ ಸಮಿತಿ ಸದಸ್ಯ ಡಾ.ಶಿವರಂಜನ್ ಸತ್ಯಂಪೇಟ ತಿಳಿಸಿದ್ದಾರೆ.
ಕಲಬುರಗಿ : ದಕ್ಷಿಣ ಮತಕ್ಷೇತ್ರದ ಕೋಟನೂರ ಡಿ ಗ್ರಾಮದಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ 115 ಲಕ್ಷ ರೂಪಾಯಿಗಳ ವೆಚ್ಚದ ಯುಜಿಡಿ ಹಾಗೂ…
ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್'ನ ಪಂಡಿತ ರಂಗಮಂದಿರದ ಬಳಿ ನೂತನ ಆರ್ ಎ ಎಸ್ ಮೆಡಿಕಲ್ ಶಾಪ್ ಅನ್ನ ಅದ್ದೂರಿಯಾಗಿ…
ಕಲಬುರಗಿ: ಬಸವತತ್ವ ಹೇಳುವುದಕ್ಕಲ್ಲ. ಬದುಕುವುದಕ್ಕೆ ಎನ್ನುವಂತೆ ಲಿಂಗಾಯತ ಧರ್ಮೀಯರು ಇತ್ತೀಚಿಗೆ ಮದುವೆ, ಮುಂಜಿವೆ ಹಾಗೂ ಇನ್ನಿತರ ಕೌಟುಂಬಿಕ ಕಾರ್ಯಕ್ರಮಗಳನ್ನು ಬಸವತತ್ವದ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ರಾಜ್ಯದ ಪುರಾತನ ದೇವಾಲಯ, ದಲಿತರ ಭೂಮಿ ಮತ್ತು ಹಿಂದೂ ರೈತರ ಜಮೀನು ಹಾಗೂ ಸ್ಮಶಾನ…
ಕಲಬುರಗಿ : ವಕ್ಫ ಆಸ್ತಿ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿ ಈ ನೆಲದ ಮಣ್ಣಿನ ಮಕ್ಕಳ ಭೂಮಿಯ ಹಕ್ಕು…
ಮಾಧ್ಯಮ ಅಕಾಡೆಮಿಗಳು ಪತ್ರಕರ್ತರ ವೃತ್ತಿಪರ ಅಭಿವೃದ್ಧಿಗೆ ಶ್ರಮಿಸಬೇಕು ': ಶ್ರೀನಿವಾಸ ರೆಡ್ಡಿ ಅಭಿಪ್ರಾಯ ಬೆಂಗಳೂರು: ಮಾಧ್ಯಮ ಅಕಾಡೆಮಿಗಳು ಕಾರ್ಯನಿರತ ಪತ್ರಕರ್ತರ…