ಬಿಸಿ ಬಿಸಿ ಸುದ್ದಿ

ಬುದ್ಧ,ಬಸವ,ಅಂಬೇಡ್ಕರ ರವರ ತತ್ವಾದರ್ಶಗಳು ವಿದ್ಯಾರ್ಥಿಗಳಿಗೆ ಆದರ್ಶವಾಗಲಿ

ಕಲಬುರಗಿ: ಬುದ್ಧ,ಬಸವ,ಅಂಬೇಡ್ಕರ ಅವರ ತತ್ವಾದರ್ಶಗಳು ಇಂದಿನ ವಿಧ್ಯಾರ್ಥಿಗಳಿಗೆ ಆದರ್ಶವಾಗಲಿ ಎಂದು ಪ್ರಗತಿಪರ ಚಿಂತಕರಾದ ಡಾ.ಅನೀಲ ಟೆಂಗಳಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕಲಾ ಮಂಡಳದಲ್ಲಿ ಕರವೇ(ಕಾವಲುಪಡೆ) ವತಿಯಿಂದ ಹಮ್ಮಿಕೊಂಡ ಬುದ್ಧ,ಬಸವ ಅಂಬೇಡ್ಕರ ರವರ ಜಯಂತೋತ್ಸವ ಪ್ರಯುಕ್ತ ಆಯೋಜಿಸಿದ ಪ್ರಭುದ್ಧ ಭಾರತ ಸಂಕಲ್ಪ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಸಾಲಿನಲ್ಲಿ ಭಗವಾನ ಗೌತಮ ಬುದ್ಧ,ಕನ್ನಡ ವಚನಕಾರ ಬಸವಣ್ಣ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರವರ ವಿಚಾರಧಾರೆಗಳು, ಸಂವಿಧಾನದ ಪೀಠಿಕೆ ಓದುವುದು ತಿಳಿದುಕೊಳ್ಳುವುದು ಇಂದಿನ ವಿಧ್ಯಾರ್ಥಿಗಳಿಗೆ ಪ್ರಸ್ತುತ ಸಾಲಿನಲ್ಲಿ ತುಂಬಾ ಮುಖ್ಯವಾಗಿದೆ ಎಂದರು.ಕರವೇ ಕಾವಲುಪಡೆ ಸಂಘಟನೆ ವತಿಯಿಂದ ಆಯೋಜನೆಗೊಂಡ ಬುದ್ದ, ಬಸವ, ಅಂಬೇಡ್ಕರ ರವರ ಜಯಂತೋತ್ಸವದ ಸಂದರ್ಭದಲ್ಲಿ ಪ್ರಭುದ್ಧ ಭಾರತ ಸಂಕಲ್ಪ ಚಿಂತನ ಮಂಥನ ಕಾರ್ಯಕ್ರಮ ಅರ್ಥಪೂರ್ಣ ಎಂದು ಆಶಯ ವ್ಯಕ್ತಪಡಿಸಿದ್ದರು.

ನಂತರ ಪ್ರಾಸ್ತವಿಕ ನುಡಿಯನ್ನು ಕರವೇ(ಕಾವಲುಪಡೆ) ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ನಮ್ಮ ಸಂಘಟನೆಯಿಂದ ಬುದ್ಧ,ಬಸವ,ಅಂಬೇಡ್ಕರ, ಜಯಂತಿಯ ಜೊತೆಯಲಿ ಪ್ರಭುದ್ಧ ಬಾರತ ಸಂಕಲ್ಪ ಚಿಂತನ ಮಂಥನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಬುದ್ಧ ಭಾರತ ಪುರಸ್ಕಾರ ನೀಡಲು ತುಂಬಾ ಸಂತೋಷ ಉಂಟಾಗಿದೆ ಎಂದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯ‌ನ್ನು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಗಣೇಶ ವಳಕೇರಿ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ‌ ಜಗನ್ನಾಥ ಸೂರ್ಯವಂಶಿ, ಲಿಂಗರಾಜ ಸಿರಗಾಪೂರ,ಬಸವರಾಜ ಬೀರಬಿಟ್ಟಿ, ಬಸವರಾಜ ನಾಟೀಕಾರ, ಶಿವುಕುಮಾರ ಅಜಾದಪೂರ,ರವಿ ವಾಲಿ,ಜೈರಾಜ ಕಿಣಗಿಕರ್,ಆನಂದ ತೆಗನೂರ ಸೇರಿದಂತೆ ಇತರರು ಆಗಮಿಸಿದ್ದರು.

ಪ್ರಭುದ್ಧ ಭಾರತ ಗೌರವ ಪುರಸ್ಕಾರ: ರವೀಂದ್ರ ಶಾಬಾದಿ,ಮೈಲಾರಿ ಶೆಳ್ಳಗಿ,ಡಾ.ಶಿವಶರಪ್ಪ ಕೋಡ್ಲ, ಅಯ್ಯಣ್ಣಾ ಜಿ ಹಾಲಭಾವಿ,ಗೋಪಾಲರಾವ ತೇಲಂಗಿ,ಡಾ.ರಾಜಶೇಖರ ಮಾಂಗ,ಬಸವರಾಜ ಜವಳಿ ಇವರನ್ನು ಪ್ರಭುದ್ಧ ಭಾರತ ಪುರಸ್ಕಾರ ಗೌರವ ನೀಡಿ ಗೌರವಿಸಲಾಯಿತು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

8 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

8 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

8 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

8 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

9 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

10 hours ago