ಬಿಸಿ ಬಿಸಿ ಸುದ್ದಿ

ಸಿಯುಕೆಯ ಪಿಎಚ್ಡಿ ವಿದ್ಯಾರ್ಥಿಗಳಿಗೆ ನ್ಯೂಜಿಲೆಂಡ್ ಸಮ್ಮೇಳನದಲ್ಲಿ ಭಾಗವಹಿಸುವಿಕೆಗೆ ಪ್ರಯಾಣ

ಕಲಬುರಗಿ: ಸಿಯುಕೆಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪಿಎಚ್‍ಡಿ ವಿದ್ಯಾರ್ಥಿಗಳಾದ ಅನನ್ಯಾ ಸಿಕ್ದರ್ ಮತ್ತು ಅಮೃತ ಬಾಲಕೃಷ್ಣನ್ ಅವರಿಗೆ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ತಲಾ 2000 ಅಮೇರಿಕನ ಡಾಲರ ಪ್ರಯಾಣ ಅನುದಾನವನ್ನು ಇಂಟನ್ರ್ಯಾಷನಲ್ ಅಸೋಸಿಯೇಶನ್ ಫಾರ್ ಮೀಡಿಯಾ ಮತ್ತು ಕಮ್ಯುನಿಕೇಷನ್ ರಿಸರ್ಚ್ (Iಂಒಅಖ) ಸಂಸ್ಥೆ ನೀಡಿದೆ. ನ್ಯೂಜಿಲೆಂಡ್‍ನ ಕ್ರೈಸ್ಟ್‍ಚರ್ಚ್‍ನಲ್ಲಿ ಜೂನ್ 30 ರಿಂದ ಜುಲೈ 4, 2024 ರವರೆಗೆ ಈ ಸಮ್ಮೇಳನ ನಡೆಯಲಿದೆ.

ಐಎಎಮ್ಸಿಅರ್ (Iಂಒಅಖ) ಎಂಬುದು ಮಾಧ್ಯಮ ಮತ್ತು ಸಂವಹನ ಸಂಶೋಧಕರ ಜಾಗತಿಕ ವೃತ್ತಿಪರ ಸಂಘವಾಗಿದೆ. ಈ ಸಂಶ್ಥೆ ಪ್ರಪಂಚದಾದ್ಯಂತ ಮಾಧ್ಯಮ ಮತ್ತು ಸಂವಹನ ಸಂಶೋಧನೆಯನ್ನು ಉತ್ತೇಜಿಸುತ್ತದೆ, ಸಾಮಾಜಿಕ-ರಾಜಕೀಯ, ತಾಂತ್ರಿಕ, ನೀತಿ ಮತ್ತು ಸಾಂಸ್ಕøತಿಕ ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ. 100 ಕ್ಕೂ ಹೆಚ್ಚು ದೇಶಗಳ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇದರ ಸದಸ್ಯರಾಗಿದ್ದಾರೆ. ಇದು ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ವಿದ್ವಾಂಸರು, ಸಂಶೋಧಕರು ಮತ್ತು ವೃತ್ತಿಪರರ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ವಿವಿಧ ಸಂಶೋಧನಾ ವಿಷಯಗಳ, ಆಲೋಚನೆಗಳ ಮತ್ತು ಅಭಿಪ್ರಾಯಗಳ ವಿನಿಮಯಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಈ ಸಮ್ಮೇಳನವು ವೃತ್ತಿಪರರು, ತಜ್ಞರು ಮತ್ತು ವಿದ್ವಾಂಸರೊಂದಿಗೆ ಚರ್ಚೆ, ಸಹಯೋಗ ಮತ್ತು ನೆಟ್‍ವಕಿರ್ಂಗ್‍ಗೆ ಅಮೂಲ್ಯವಾದ ವೇದಿಕೆಯನ್ನು ಒದಗಿಸುತ್ತದೆ.

ಅನನ್ಯ ಸಿಕ್ದರ್ ಮತ್ತು ಅಮೃತ ಬಾಲಕೃಷ್ಣನ್ ಇಬ್ಬರೂ ಡಾ. ಕೆ. ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತ ಸುಮಾರು 150 ಅರ್ಜಿದಾರರಲ್ಲಿ 29 ಜನರನ್ನು ಆಯ್ಕೆಮಾಡಲಾಗಿದ್ದು ಅದರಲ್ಲಿ ಈ ಇಬ್ಬರು ಸೆರಿದ್ದಾರೆ. ಅನನ್ಯಾ ಅವರು ‘ಬಿಯಾಂಡ್ ದಿ ಕ್ವೀರ್ ವಿಜಿಬಿಲಿಟಿ: ಎಕ್ಸಾಮೈನಿಂಗ್ ಸೆಕ್ಸುವಲ್ ಮೈನಾರಿಟೀಸ್ ನೆರೆಟೀವಸ್ ಇನ್ ಇಂಡಿಯನ್ ವೆಬ್ ಸಿರೀಸ್’ ಎಂಬ ಶೀರ್ಷಿಕೆಯ ಪ್ರಬಂಧವನ್ನು ಮಂಡಿಸಲಿದ್ದಾರೆ; ಮತ್ತು ಅಮೃತಾ ಅವರು ‘ದಿ ಎಮಜಿರ್ಂಗ್ ಲ್ಯಾಂಡ್‍ಸ್ಕೇಪ್ ಆಫ್ ಫೆಮ್‍ಟೆಕ್: ಎ ಸ್ಟಡಿ ಆಫ್ ಇಂಡಿಯನ್ ಪೀರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‍ಗಳು’ ಎಂಬ ಶೀರ್ಷಿಕೆಯ ಪ್ರಬಂಧವನ್ನು ಮಂಡಿಸಲಿದ್ದಾರೆ.

ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ದೀಪ್ತಿ, ಮಾರ್ಗದರ್ಶಕರಾದ ಡಾ.ಕೆ.ಕಾರ್ತಿಕ್ ಅವರು ಉಭಯ ವಿದ್ಯಾರ್ಥಿಗಳ ಅದ್ಬುತ ಸಾಧನೆಗಾಗಿ ಅಭಿನಂದಿಸಿದ್ದಾರೆ ಅಲ್ಲದೆ ಅವರ ಪ್ರಸ್ತುತ ಹಾಗೂ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

2 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

2 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

4 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

4 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

4 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

5 hours ago