ಬಿಸಿ ಬಿಸಿ ಸುದ್ದಿ

ಗ್ರಾಮೀಣ ಭಾಗದಲ್ಲಿ ಜಾನಪದ ಸಂಸ್ಕೃತಿ ಜೀವಂತ: ಶ್ರೀಮಂತರಾವ ನೆಲ್ಲೂರೆ

ಕಲಬುರಗಿ: ಈ ನಾಡಿನ ಹಳ್ಳಿ ಹಳ್ಳಿಯಲ್ಲಿ ದೇಶಿಯ ಜಾನಪದ ಕಲೆಗಳು ಜೀವಂತವಾಗಿವೆ ಅದರಿಂದಾಗಿಯೇ ನಮ್ಮ ನಾಡು ಇಂದು ಸಂಪದ್ಭರಿತವಾಗಿದೆ ಎಂದು ಎಂ ಸಲಗರನ ಸಿದ್ದೇಶ್ವರ ಪ್ರೌಢ ಶಾಲೆಯ ಶಿಕ್ಷಕ ಶ್ರೀಮಂತರಾವ ನೆಲ್ಲೂರೆ ಅಭಿಪ್ರಾಯಪಟ್ಟರು.

ಇತ್ತೀಚಿಗೆ ಆಳಂದ ತಾಲೂಕಿನ ಕಾಮನಳ್ಳಿಯಲ್ಲಿ ಗುರು ಕುಮಾರೇಶ್ವರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಾನಪದ ಪ್ರಕಾರದ ಸಂಗೀತವನ್ನು ಆಲಿಸುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಸರ್ಕಾರವು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ರೀತಿಯಲ್ಲಿ ಆಯೋಜನೆ ಮಾಡಬೇಕು ಈ ರೀತಿಯ ಕಲಾ ಪ್ರಕಾರಗಳಲ್ಲಿ ಗುರುತಿಸಿಕೊಂಡ ಕಲಾವಿದರಿಗೆ ಸೂಕ್ತ ಗೌರವ ಸನ್ಮಾನಗಳು ದೊರೆಯುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪ್ಪಾರಾವ ಬೆಳಮಗಿ, ಮೌಲಪ್ಪ ಸೋನಕಾಂಬಳೆ, ಶಿವರಾಜ ಸರಡಗಿ, ಅಜೀತ ಕುಲಕರ್ಣಿ, ಮಹಾದೇವ ಕುಮಟಗಿ, ಶರಣಪ್ಪ ನೆಲ್ಲೂರೆ, ದೌಲತರಾವ ದಿಕ್ಸಂಗಿ, ವಿಜಯಕುಮಾರ ಬೆಳಮಗಿ, ಬಸವರಾಜ ದಿಕ್ಸಂಗಿ, ಪರಮೇಶ್ವರ ಚಲಗೇರಿ, ಶ್ರೀಮಂತರಾವ ಬಿಂದಗೇರಿ, ಪರಮೇಶ್ವರ ಸರಡಗಿ, ಶ್ಯಾಮರಾವ ಸರಡಗಿ, ಕಾಂತಪ್ಪ ಬಿಂದಗೇರಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಕಲಾವಿದರಾದ ಶಾಂತಕುಮಾರ ಸಾವಳಗಿ, ಪವಿತ್ರಾ ಜಿ ಎಸ್, ಸೈದಪ್ಪ ಸಪ್ಪನಗೋಳ, ಪ್ರಶಾಂತ ಗೋಲ್ಡಸ್ಮೀಥ್, ಶಾಂತಯ್ಯ ಹಿರೇಮಠ, ರೇವಣಯ್ಯಸ್ವಾಮಿ ಸುಂಟನೂರ, ತೇಜು ನಾಗೋಜಿ, ಶಿವಶರಣಯ್ಯ ಮಠ, ವೀರಭದ್ರಯ್ಯ ಸ್ಥಾವರಮಠ, ಉದಯಕುಮಾರ ಶಾಸ್ತ್ರೀ, ಗುರುಶಾಂತಪ್ಪ ಕುಂಬಾರ, ರಾಜಕುಮಾರ ಮಾಡಿಯಾಳ, ರಾಚಯ್ಯಸ್ವಾಮಿ ರಟಕಲ್, ಮಹಾಲಿಂಗಯ್ಯ ಸ್ಥಾವರಮಠ, ಶ್ರೀಮಂತ ಚಿಂಚನಸೂರ, ಇಸ್ಮಾಯಿಲಸಾಬ್ ಲದಾಫ, ಮಲ್ಲಯ್ಯ ಮಠಪತಿ, ಶಂಭುಲಿಂಗ ಪಾಟೀಲ, ಭೀಮಬಾಯಿ ಹಡಲಗಿ, ಸುಭದ್ರಾಬಾಯಿ ಕಾರಭಾರಿ, ಗುರುಶಾಂತಯ್ಯ ಸ್ಥಾವರಮಠ, ರೇವಣಸಿದ್ದ ದೇಸಾಯಿಕಲ್ಲೂರ, ಅಶೋಕ ಆಳಂದ, ವಿಜಯಕುಮಾರ ಆಳಂದ ನಾಗಲಿಂಗಯ್ಯ ಸ್ಥಾವರಮಠ, ಶಿವಾನಂದ ಹಿತ್ತಲಶಿರೂರ ಹಾಗೂ ಜೈ ಹನುಮಾನ ಭಜನಾ ಮಂಡಳಿ, ಪರಮೇಶ್ವರ ಭಜನಾ ಮಂಡಳಿಯವರು ಸಂಗೀತ ಸೇವೆ ಸಲ್ಲಿಸಿದರು. ಮಲ್ಲಿನಾಥ ಪೊಲೀಸ್‌ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

23 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago