ಸುರಪುರ: ಮೇರು ಸಾಹಿತಿ ಡಾ.ಕಮಲಾಹಂಪನಾ ಅವರ ಕೃತಿಗಳನ್ನು ಓದುವದು ಹಾಗೂ ಆ ಕೃತಿಗಳು ಸಾಮಾನ್ಯ ಜನರಿಗೆ ಸಿಗುವಂತೆ ಮಾಡುವದು ಇಂದಿನ ಅಗತ್ಯವಾಗಿದೆ ಅಂದಾಗ ಮಾತ್ರ ಅವರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತೆ ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿಗಳಾದ ಜೆ,ಅಗಸ್ಟಿನ್ ಅವರು ಹೇಳಿದರು.
ಸುರಪುರ ಕನ್ನಡ ಸಾಹಿತ್ಯ ಸಂಘದದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಮೇರು ಸಾಹಿತಿ ಡಾ.ಕಮಲಾಹಂಪನಾ ಅವರ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕಪ್ಪ ವಾಗನಗೇರಿಯವರು ಮಾತನಾಡುತ್ತ ಹಳಗನ್ಡಡ ಸಾಹಿತ್ಯದ ಮೇರು ಕೃತಿಯಾದ ಪರಮದೇವ ಕವಿಯ ತುರಂಗ ಭಾರತ ಕೃತಿಯನ್ನು ಸಂಪಾದಿಸಿ ಕನ್ನಡ ಸರಸ್ವತ ಲೋಕಕ್ಕೆ ಅಮೋಘ ಕೊಡಿಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಕನ್ನಡ ಲೇಖಕಿಯರ ಸಾಲಿನಲ್ಲಿ ಕಮಲಾಹಂಪನಾ ಅವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ ಎಂದು ಮಹಾಂತೇಶ ಗೋನಾಲ್ ಅವರು ಅಭಿಪ್ರಾಯಪಟ್ಟರು
.ಅಪಾರವಾದ ತಮ್ಮ ಜ್ಞಾನದ ಪರಿಧಿಯಲ್ಲಿ ಕನ್ನಡದ ಅತ್ಯಮೂಲ್ಯ ಕೃತಿಗಳನ್ನು ಸಂಪಾದಿಸಿ ಹಳಗನ್ನಡ ಕ್ಷೇತ್ರದ ಬೆಳವಣಿಗೆಗೆ ಅವರು ಮಹತ್ವವಾದ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಶ್ರೀನಿವಾಸ ಜಾಲವಾದಿ ಅವರು ಹೇಳಿದರು. ಕವಿ ಕನಕಪ್ಪ ವಾಗನಗೇರಿ ಕಮಲಾ ಹಂಪನಾ ದಂಪತಿಗಳ ಅನ್ಯೋನ್ಯ ದಾಂಪತ್ಯದ ಬಗ್ಗೆ ಹಾಗೂ ಅವರ ಮಹತ್ವದ ಕೃತಿಗಳ ಬಗ್ಗೆ ಮಾತನಾಡಿದರು.
ಕಮಲಾ ಹಂಪನಾ ಅವರ ಎಲ್ಲ ಕೃತಿಗಳನ್ನು ಸರ್ಕಾರ ಮರು ಮುದ್ರಿಸಿ ಕಡಿಮೆ ಬೆಲೆಗೆ ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಬೇಕೆಂದು ಸಭೆಯಲ್ಲಿ ಒಕ್ಕೊರಿಲಿನಿಂದ ಸರಕಾರಕ್ಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಒತ್ತಾಯಿಸಲಾಯಿತು. ಸಭೆಯ ಆರಂಭದಲ್ಲಿ ಡಾ.ಕಮಲಾ ಹಂಪನಾ ಅವರ ಭಾವಿಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ,ಎರಡು ನಿಮಿಷಗಳ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಸವರಾಜ ಜಮದರಖಾನಿ ಅವರು ವಹಿಸಿದ್ದರು, ಕಾರ್ಯಕ್ರಮದಲ್ಲಿ ವೆಂಕಟೇಶ್ ಗೌಡ ಪಾಟೀಲ,ಸಿದ್ದಯ್ಯ ಮಠ,ದೇವು ಹೆಬ್ಬಾಳ,ಕಸಾಪ ಅಧ್ಯಕ್ಷರಾದ ಶರಣಬಸವ ಯಳವಾರ,ಅವರು ಕಮಲಾ ಹಂಪನಾರ ಕುರಿತಾಗಿ ಮಾತನಾಡಿದರು,.ಪ್ರಕಾಶ್ ಚಂದ್ ಜೈನ್, ರಾಘವೇಂದ್ರ ಬಾಡಿಯಾಳ ಗಾಯಕರಾದ ನರಸಿಂಹ ಬಾಡಿಯಾಳ, ಶ್ರೀಪಾದ ಗಡ್ಡದ, ರಾಘವೇಂದ್ರ ಭಕ್ರಿ, ಪ್ರಕಾಶ ಬಣಗಾರ, ಕವಿ ನಬಿಲಾಲ ಮಕಾನದಾರ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಾಹಿತಿ ಶ್ರೀನಿವಾಸ ಜಾಲವಾದಿ ಅವರು ನಿರ್ವಹಿಸಿದರು, ಹೇಮಲು ರಾಠೋಡ ಅವರು ವಂದಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…