ಚಿತ್ತಾಪುರ; ಸ್ಥಳೀಯ ಪೊಲೀಸ್ ಠಾಣೆಯಲ್ಲಿ 20 ವರ್ಷ ಒಂದೇ ಕಡೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಎಎಸ್’ಐ ಬಲವಂತರೆಡ್ಡಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ಪಟ್ಟಣದ ಕಿಂಗ್ ಫ್ಯಾಲೇಸ್ ಫಂಕ್ಷನ್ ಹಾಲ್’ನಲ್ಲಿ ಎಎಸ್’ಐ ಬಲವಂತರೆಡ್ಡಿ ಅವರು ಸೇವಾ ನಿವೃತ್ತರಾದ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸೇರಿದವರಿಗೆ ಬಿಡುವು ಅನ್ನುವುದೇ ಇರಲ್ಲ. ಅಂತಹದ್ರಲ್ಲಿ ಬಲವಂತ ರೆಡ್ಡಿ ಅವರು ಬಿಡುವು ಮಾಡಿಕೊಳ್ಳದೇ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಎಂತಹ ಕೆಲಸ ಹೇಳಿದ್ರು ನಾನು ಮಾಡುತ್ತೇನೆ ಎಂದು ಹೇಳಿ ಆ ಕೆಲಸವನ್ನು ಚಾಪುತಪ್ಪದೇ ಮಾಡುತ್ತಿದ್ದರು ಎಂದು ಬಣ್ಣಿಸಿದರು.
ಕಳ್ಳತನ, ದರೋಡೆ, ಕೊಲೆ, ಕೋಮು ಗಲಭೆ ಅಂತಹ ಘಟನೆಗಳು ನಡೆದಾಗ ಮುಂದೇ ನಿಂತು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದರು. ನಾನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿರುವಾಗ ನಾನು ಯಾವುದೇ ಜವಾಬ್ದಾರಿ ಕೊಟ್ಟರೂ ಸಹಿತ ನನ್ನ ಕೈಯಿಂದ ಆಗಲ್ಲ ಎಂದು ಒಮ್ಮೇಯೂ ಹೇಳಿಲ್ಲ. ಕೊಲೆ ಮಾಡಿದ ಆರೋಪಿಯನ್ನು ತರಬೇಕು ಎಂದು ನಾನು ಅವರಿಗೆ ಹೇಳಿದ ಕೂಡಲೇ ನಾನು ಒಬ್ಬನೇ ಹೋಗಿ ತರ್ತೀನಿ ಎಂದು ಭಯ ಇಲ್ಲದೇ ಹೇಳಿ ಆರೋಪಿಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಇದೀಗ ಅವರು ನಿವೃತ್ತಿಯಾಗುತ್ತಿದ್ದಾರೆ ಎಂದರೇ ನನಗೆ ಬಹಳ ಬೇಸರ ಉಂಟಾಗಿದೆ. ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿ ಮುಂದೇ ಯಾವುದೇ ರೀತಿಯ ಸಹಾಯ ಸಹಕಾರ ಬೇಕಾದರೇ ನನಗೆ ಕೇಳಿ ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಲವಂತರೆಡ್ಡಿ ಮಾತನಾಡಿ, ವೃತ್ತಿ ಜೀವನದಲ್ಲಿ ಮೇಲಾಧಿಕಾರಿಗಳ, ಸಿಬ್ಬಂದಿಗಳೊಂದಿಗೆ ಸಮಯ ಕಳೆದಿದ್ದೇನೆ. ಇಲ್ಲಿ 20 ವರ್ಷ ಒಂದೇ ಕಡೆ ಸೇವೆ ಸಲ್ಲಿಸಿದ್ದರಿಂದ ನಾನು ಪ್ರತಿಯೊಬ್ಬರಿಗೂ ಚಿರಪರಿಚಿತನಾಗಲು ಸಹಕಾರಿಯಾಗಿದೆ. ನನಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ತಮ್ಮೆಲ್ಲರ ಋಣವನ್ನು ನಾನು ಯಾವತ್ತೂ ಮರೆಯಲ್ಲ ಎಂದರು.
ಸಿಪಿಐಗಳಾದ ಚಂದ್ರಶೇಖರ ತಿಗಡಿ, ಜಗದೇವಪ್ಪ ಪಾಳಾ, ನಟರಾಜ ಲಾಡೆ ಮಾತನಾಡಿದರು.
ಪಿಎಸ್’ಐಗಳಾದ ಶ್ರೀಶೈಲ್ ಅಂಬಾಟಿ, ತೀರುಮಲೇಶ ಕುಂಬಾರ, ಚಂದ್ರಾಮಪ್ಪ, ಚೇತನ್ ಪೂಜಾರಿ, ಶೀಲಾದೇವಿ, ಅಮೋಜ ಕಾಂಬ್ಳೆ, ಚಂದ್ರಕಾಂತ, ಲಾಲಹ್ಮದ್, ನಾಗೇಂದ್ರ, ಗುಂಡಪ್ಪ, ಪ್ರಶಾಂತ ಹೇರೂರ್, ಶಿವಯ್ಯ ಸ್ವಾಮಿ, ಮುಕ್ತುಂ ಪಟೇಲ್, ಅಯ್ಯಣ್ಣ, ಮುಖಂಡರಾದ ಮುಕ್ತಾರ ಪಟೇಲ್, ಚಂದ್ರಶೇಖರ ಕಾಶಿ, ನಾಗರಾಜ ಬಂಕಲಗಿ, ವಿನೋದ್ ಗುತ್ತೇದಾರ ಸೇರಿದಂತೆ ಅನೇಕ ಮುಖಂಡರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…